“ಒಲಿಂಪಿಕ್ಸ್ ರದ್ದಾದರೆ ಮತ್ತೆ ಕಾಯಲಾರೆ’
Team Udayavani, Jun 10, 2020, 11:19 AM IST
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ಪಂದ್ಯಾವಳಿ ರದ್ದಾದರೆ ತಾನು 8ನೇ ಒಲಿಂಪಿಕ್ಸ್ಗಾಗಿ ಮತ್ತೆ 4 ವರ್ಷ ಕಾಲ ಕಾಯುವುದಿಲ್ಲ ಎಂದು ಭಾರತದ ಟೆನಿಸ್ ಸ್ಟಾರ್ ಲಿಯಾಂಡರ್ ಪೇಸ್ ಹೇಳಿದ್ದಾರೆ. 1992ರಿಂದ ಮೊದಲ್ಗೊಂಡು 2016ರ ವರೆಗಿನ ಎಲ್ಲ 7 ಒಲಿಂಪಿಕ್ಸ್ ನಲ್ಲೂ ಪೇಸ್ ಸ್ಪರ್ಧಿ ಸುತ್ತಲೇ ಬಂದಿ ದ್ದಾರೆ. ಸರ್ವಾಧಿಕ 7 ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಭಾರತೀಯ ಕ್ರೀಡಾಪಟು ಹಾಗೂ ವಿಶ್ವದ ಏಕಮಾತ್ರ ಟೆನಿಸಿಗನೆಂಬ ದಾಖಲೆ ಪೇಸ್ ಅವರದು. ಟೋಕಿಯೋವೇ ತನ್ನ ಕೊನೆಯ ಒಲಿಂಪಿಕ್ಸ್ ಎಂಬುದಾಗಿ ಅವರು ಕಳೆದ ವರ್ಷವೇ ಘೋಷಿಸಿದ್ದಾರೆ.