Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

560 ರೂ. ಇದ್ದ ಶುಲ್ಕ ಇದೀಗ 1000ಕ್ಕೆ ಏರಿಕೆ

Team Udayavani, Apr 18, 2024, 1:30 PM IST

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

ಪಣಜಿ: ದೂಧ್ ಸಾಗರಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಸ್ಥಳೀಯ ಯುವಕರು ಜೀಪ್‍ನಲ್ಲಿ ತಮ್ಮ ವ್ಯಾಪಾರವನ್ನು ಸ್ಥಿರಗೊಳಿಸುತ್ತಿದ್ದರೆ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರಾರಂಭಿಸಿರುವ ಜೀಪ್ ದೂಧ್ ಸಾಗರ ದೃಶ್ಯವೀಕ್ಷಣೆಯ ಆ್ಯಪ್‌ ವ್ಯಾಪಾರದ ನಾಶಕ್ಕೆ ಕಾರಣವಾಗುತ್ತದೆ ಎಂದು ಉದ್ಯಮಿಗಳು ಆರೋಪಿಸಿದ್ದಾರೆ.

ಈ ಆ್ಯಪ್‌ ನಿಂದಾಗಿ ಈ ವ್ಯಾಪಾರ ಸಂಪೂರ್ಣ ಅಪಾಯದಲ್ಲಿದ್ದು, ಸರ್ಕಾರ ಆ್ಯಪ್‌ ಮುಚ್ಚಬೇಕು ಎಂದು ಈ ವ್ಯಾಪಾರದ ಮಾಲೀಕರು ಆಗ್ರಹಿಸುತ್ತಿದ್ದಾರೆ. ಈ ಆ್ಯಪ್‌ ಪ್ರಕಾರ, ಪ್ರತಿ ಪ್ರವಾಸಿಗರ ಮೇಲೆ ವಿಧಿಸಲಾಗುವ ಜಿಎಸ್‍ಟಿ ತೆರಿಗೆಯಿಂದಾಗಿ 560 ರೂ.ಗಳ ಪ್ರಯಾಣದ ಶುಲ್ಕವು ಸುಮಾರು 1000 ತಲುಪಿದೆ. ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದರಿಂದ ಜೀಪು ಮಾಲೀಕರು ಐದು ದಿನಕ್ಕೊಮ್ಮೆ ಬಾಡಿಗೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಪ್ರವಾಸಿಗರನ್ನು ದೂಧ್ ಸಾಗರಕ್ಕೆ ತಲುಪಿಸಲು ಸ್ಥಳೀಯ ಯುವಕರು ತಮ್ಮ ಜೀಪ್‍ಗಳನ್ನು ಬಾಡಿಗೆಗೆ ಇಟ್ಟಿದ್ದಾರೆ. ಅಲ್ಲಿ ಒಟ್ಟು ನಾನೂರು ಜೀಪುಗಳು ಓಡಾಡುತ್ತವೆ. ಈ ಹಿಂದೆ ಪ್ರತಿ ಪ್ರವಾಸಿಗರಿಗೆ 560 ರೂಪಾಯಿ ಶುಲ್ಕ ವಿಧಿಸಿ ದೂದ್ ಸಾಗರಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ಕಾರಣದಿಂದಾಗಿ, ಪ್ರವಾಸಿಗರು ಖುಷಿಯಿಂದ ದೂಧ್ ಸಾಗರ ಪ್ರವಾಸೀ ತಾಣಕ್ಕೆ ಮತ್ತೆ ಮತ್ತೆ ಆಗಮಿಸುತ್ತಿದ್ದರು. ಆದರೆ ಸರ್ಕಾರದ ಆ್ಯಪ್‌ ನಿಂದಾಗಿ ಪ್ರವಾಸಿಗರು ದುಪ್ಪಟ್ಟು ಹಣ ತೆರಬೇಕಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸಾವಿರಾರು ಪ್ರವಾಸಿಗರಿಂದಾಗಿ ಪ್ರತಿ ಜೀಪ್ ಪ್ರತಿದಿನ ಸಾಕಷ್ಟು ಆರ್ಥಿಕ ಆದಾಯವನ್ನು ಗಳಿಸುತ್ತದೆ. ಕೆಲವೊಮ್ಮೆ ದಿನಕ್ಕೆ ತಲಾ ಎರಡು ಬಾಡಿಗೆ ಬರುತ್ತಿದ್ದವು, ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದಾಗ ಏಕಾಏಕಿಯಾಗಿ ಪ್ರವಾಸೋದ್ಯಮ ನಿಗಮವು ಜನವರಿ 3ರಿಂದ ಆ್ಯಪ್‌ ಜಾರಿಗೆ ತಂದಿದ್ದು, ಪ್ರವಾಸಿಗರ ಆಗಮನ ಕಡಿಮೆಯಾಗುತ್ತಿರುವುದರಿಂದ ಈಗ ಜೀಪು ಮಾಲೀಕರು ಧರಣಿ ಕುಳಿತುಕೊಳ್ಳುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜೀಪ್ ಮಾಲೀಕರು ಚಾಲಕನ ಸಂಬಳ, ವಾಹನದ ವಿಮೆ, ತೆರಿಗೆ, ಪಾಸಿಂಗ್, ರಿಪೇರಿ ವೆಚ್ಚ, ಕಾರಿನ ಕಂತುಗಳನ್ನು ಕಿತ್ತುಕೊಂಡು ಕೈಗೆ ಹಣವಿಲ್ಲ ಎಂಬ ಭಯದಲ್ಲಿದ್ದಾರೆ.

ಕಳೆದ ವರ್ಷ ಇದೇ ಏಪ್ರಿಲ್ ತಿಂಗಳಿನಲ್ಲಿ ದಿನಕ್ಕೆ ಒಂದೊಂದು ಬಾಡಿಗೆ ಪಡೆಯುತ್ತಿದ್ದ ಜೀಪ್ ಮಾಲೀಕರು , ಈಗ ಐದು ದಿನದಲ್ಲಿ ಒಂದೊಂದು ಬಾಡಿಗೆ ಸರದಿ ಬರಲಾರಂಭಿಸಿದೆ. ಪ್ರವಾಸಿಗರ ಸಂಖ್ಯೆ ಐವತ್ತು ಪ್ರತಿಶತದಷ್ಟು ಕಡಿಮೆಯಾಗಿದೆ. ಜೀಪು ವ್ಯಾಪಾರ ಮಾತ್ರವಲ್ಲದೆ, ಅಂಗಡಿ, ಹೋಟೆಲ್ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ.

ಶುಲ್ಕ ಹೆಚ್ಚಳದಿಂದಾಗಿ ಪ್ರವಾಸಿಗರು ದೂಧ್ ಸಾಗರದಿಂದ ದೂರ ಸರಿಯುತ್ತಾರೆ.

ಕೆಲವು ಟೂರ್ ಆಪರೇಟರ್‍ಗಳು ಈ ಕುರಿತು ಪ್ರತಿಕ್ರಿಯೆ ನೀಡಿ- ಬೇರೆ ರಾಜ್ಯಗಳಿಂದ ಬರುವ ಪ್ರವಾಸಿಗರು ಒಂದೇ ಬಾರಿಗೆ ಅನೇಕ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡುತ್ತಾರೆ. ಇದು ದಕ್ಷಿಣ ಗೋವಾದ ದೂಧ್ ಸಾಗರ ಜಲಪಾತವನ್ನೂ ಒಳಗೊಂಡಿದೆ. ಈ ನಾಲ್ಕು ತಿಂಗಳಲ್ಲಿ ಹೆಚ್ಚಿದ ಶುಲ್ಕದಿಂದಾಗಿ ಪ್ರವಾಸಿಗರು ದೂಧ್ ಸಾಗರದತ್ತ ಬರುತ್ತಿಲ್ಲ. ಪ್ರತಿದಿನ 275 ಜೀಪ್‍ಗಳಿಗೆ ತೆರಳಲು ಅವಕಾಶವಿದ್ದರೂ ಪ್ರಸ್ತುತ 150 ಜೀಪ್‍ಗಳು ಕೂಡ ಜಲಪಾತಕ್ಕೆ ಹೋಗುತ್ತಿಲ್ಲ. ಹೆಚ್ಚಿದ ಶುಲ್ಕವನ್ನು ಕಂಡು ಪ್ರವಾಸಿಗರು ದೂಧ್ ಸಾಗರ ವೀಕ್ಷಿಸದೆಯೇ ಹಿಂದಿರುಗುತ್ತಿದ್ದಾರೆ. ಇದರಿಂದ ಕುಳೆಯಲ್ಲಿ ಪ್ರವಾಸೋದ್ಯಮ ವ್ಯಾಪಾರ ಅಪಾಯದಲ್ಲಿದೆ. ಈ ಅಪ್ಲಿಕೇಶನ್‍ನಿಂದಾಗಿ, ದೂಧ್ ಸಾಗರದ ಪ್ರವಾಸೋದ್ಯಮ ವ್ಯವಹಾರವು ಬಿಕ್ಕಟ್ಟಿನಲ್ಲಿದೆ. ಹಾಗಾದರೆ ಸರ್ಕಾರಕ್ಕೆ ಜಿಎಸ್‍ಟಿ ಏಕೆ ಪಾವತಿಸಬೇಕು? ನಾವು ವಿಧಿಸುತ್ತಿದ್ದ ಶುಲ್ಕವನ್ನೇ ಪಡೆದರೂ ಸರಿಯಾಗುತ್ತದೆ. ಪ್ರವಾಸಿಗರನ್ನು ಕಿತ್ತುಕೊಂಡು ನಮ್ಮ ಜೇಬು ತುಂಬಿಸಿಕೊಳ್ಳಲು ನಾವು ಬಯಸುವುದಿಲ್ಲ ಎಂದು ತನ್ವೇಶ ರಿವಣಕರ್ (ಜೀಪ್ ಮಾಲೀಕರು, ಕುಳೆ) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.