ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Team Udayavani, Mar 29, 2024, 12:38 AM IST
ಅಮರಾವತಿ: ನಾಯ ಕತ್ವ ಬದಲಾವಣೆ ವಿಚಾರವಾಗಿ ಆಂಧ್ರ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಸಿಎ) ವಿರುದ್ಧ ಹೇಳಿಕೆ ನೀಡಿದ್ದ ಕ್ರಿಕೆಟರ್ ಹನುಮ ವಿಹಾರಿಗೆ ಅಲ್ಲಿನ ಕ್ರಿಕೆಟ್ ಬೋರ್ಡ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕೆಲವು ದಿನಗಳ ಹಿಂದೆಯೇ ಸಭೆ ನಡೆಸಿದ್ದ ಎಸಿಎ, ಹನುಮ ವಿಹಾರಿಗೆ ನೋಟಿಸ್ ನೀಡಿದೆ. ಇದಕ್ಕೆ ವಿಹಾರಿ ಪ್ರತಿಕ್ರಿಯಿಸಿದ್ದಾರೆ.
ನಾನು ಬೇರೊಂದು ಕ್ರಿಕೆಟ್ ತಂಡದ ಪರ ಆಡಲು ಬಯಸಿದ್ದೇನೆ. ಹೀಗಾಗಿ ನಾನು ಎಸಿಎಯಿಂದ ನಿರಾಕ್ಷೇಪಣ ಪ್ರಮಾಣಪತ್ರಕ್ಕಾಗಿ ಕೋರಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದಿರುವುದಾಗಿ ವರದಿ ಹೇಳಿದೆ. ಈ ಬಾರಿಯ ರಣಜಿ ಆವೃತ್ತಿಯಲ್ಲಿ ಪ.ಬಂಗಾಳ ವಿರುದ್ಧದ ಆರಂಭಿಕ ಪಂದ್ಯದಲ್ಲಿ 30 ವರ್ಷದ ವಿಹಾರಿ, ಆಂಧ್ರಪ್ರದೇಶ ತಂಡದ ನಾಯಕತ್ವ ವಹಿಸಿದ್ದರು. ಅವರನ್ನು ಇದ್ದಕ್ಕಿದ್ದಂತೆ ನಾಯಕತ್ವದಿಂದ ಕೆಳಕ್ಕಿಳಿಸಿ, ರಿಕ್ಕಿ ಭುಯಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವಿಹಾರಿ, ಎಸಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನೆಂದೂ ನಾನು ಆಂಧ್ರಪ್ರದೇಶದ ಪರ ಆಡಲಾರೆ ಎಂದೂ ಹೇಳಿದ್ದರು. ಇದೇ ವಿಚಾರವಾಗಿ ವಿಹಾರಿ ವಿರುದ್ಧ ಎಸಿಎ ನೋಟಿಸ್ ಜಾರಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ