ಸಿರಿವಂತ ಶಾಸಕರು ವೇತನ ಬಿಟ್ಟುಕೊಡಲಿ: ತೇಜಸ್ವಿನಿಗೌಡ ಪ್ರಸ್ತಾವನೆ

Team Udayavani, Mar 9, 2022, 11:15 PM IST

Udayavani Kannada Newspaper

ವಿಧಾನಪರಿಷತ್ತು: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎಲ್‌ಪಿಜಿ ಸಿಲಿಂಡರ್‌ ಮೇಲಿನ ಸಬ್ಸಿಡಿಯನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ (ಗಿವ್‌ ಇಟ್‌ ಅಪ್‌) ಯೋಜನೆ ಮಾದರಿಯಲ್ಲಿ ಸ್ಥಿತಿವಂತ ಶಾಸಕರು ತಮ್ಮ ವೇತನವನ್ನು ಬಿಟ್ಟುಕೊಡಬೇಕು ಎಂಬ ಪ್ರಸ್ತಾವನೆಯನ್ನು ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಸದನದ ಮುಂದಿಟ್ಟರು.

ಬಜೆಟ್‌ ಮೇಲಿನ ಚರ್ಚೆ ವೇಳೆ ಶಾಸಕರ ವೇತನ ಹೆಚ್ಚಳದ ಬಗ್ಗೆ ಜೆಡಿಎಸ್‌ ಸದಸ್ಯ ಭೋಜೇಗೌಡ ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶಿಸಿದ ತೇಜಸ್ವಿನಿಗೌಡ, ಶಾಸಕರ ವೇತನದ ಬಗ್ಗೆ ಬೇರೆ-ಬೇರೆ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಸಿರಿವಂತ ರಾಜಕಾರಣಿಗಳು, ಯಾರಿಗೆಲ್ಲ ಭಗವಂತ ಅನುಕೂಲಗಳನ್ನು ಕೊಟ್ಟಿದ್ದಾನೆ, ಅವರೆಲ್ಲ ವೇತನವನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಬೇಕು. ಶಾಸಕರ ವೇತನವನ್ನು ಬೇರೊಬ್ಬರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂ ದು ಸಭಾಪತಿಯವರಲ್ಲಿ ಮನವಿ ಮಾಡಿದರು.

ಶಾಸಕರ ಪಿಂಚಣಿ ವ್ಯವಸ್ಥೆ ಹೇಗೆ ಬಂತು?
ಈ ವೇಳೆ ಹಿರಿಯ ಸದಸ್ಯ ಎಚ್‌. ವಿಶ್ವನಾಥ್‌ ಶಾಸಕರ ಪಿಂಚಣಿ ವ್ಯವಸ್ಥೆ ಹೇಗೆ ಜಾರಿಗೆ ಬಂತು ಎಂಬ ಬಗ್ಗೆ ಸದನಕ್ಕೆ ವಿವರಿಸಿದರು. 1978ರಲ್ಲಿ ಶಾಸಕರಿಗೆ 600 ರೂ. ವೇತನ, 50 ರೂ. ಸಭಾಭತ್ಯೆ ನೀಡಲಾಗುತ್ತಿತ್ತು. ಆಗ ಪಿಂಚಣಿ ಇರಲಿಲ್ಲ. ಒಬ್ಬ ಹುಡುಗ ಶಾಸಕರ ಭವನದಲ್ಲಿ ನನ್ನ ಕಾರು ತೊಳೆದು ದಿನ 2 ರೂ. ಕೇಳುತ್ತಿದ್ದ, ಒಮ್ಮೆ ಸಿಟ್ಟಿನಲ್ಲಿ ಅವನ ಕಪಾಳಕ್ಕೆ ಹೊಡೆದೆ. ಅವನು ಮಾಜಿ ಶಾಸಕರೊಬ್ಬರ ಮಗ ಎಂದು ಗೊತ್ತಾಯಿತು. ಮಾಜಿ ಶಾಸಕರೊಬ್ಬರ ಮಗನ ಆ ಸ್ಥಿತಿ ಕಂಡು ನನಗೆ ನೋವಾಯಿತು. ದೇವರಾಜ ಅರಸು ಅವರ ಬಳಿ ಕರೆದುಕೊಂಡು ಹೋಗಿ ಪರಿಸ್ಥಿತಿ ವಿವರಿಸಿದೆ.

ಇದನ್ನೂ ಓದಿ : ನನಗೆ ಯಾವುದೇ ರಾಹುಕಾಲ, ಗುಳಿಕ ಕಾಲವಿಲ್ಲ: ರೇವಣ್ಣ

ಅರಸು ಅವರ ಅಣತಿಯಂತೆ ನಾನು, ಜಯಚಂದ್ರ, ಕಡಿದಾಳ ದಿವಾಕರ ಶಾಸಕರ ಪಿಂಚಣಿ ಯೋಜನೆಯ ಕರಡು ಸಿದ್ಧಪಡಿಸಿದೇವು. ಮುಂದೆ ಗುಂಡೂರಾವ್‌ ಅವಧಿಯಲ್ಲಿ 1000 ಗೌರವಧನ, 350 ರೂ. ಪಿಂಚಣಿ ನಿಗದಿಯಾಯಿತು. ಗೌರವಧನ ಕಡಿಮೆ ಇದ್ದರೂ ಸಮಸ್ಯೆಯಿಲ್ಲ, ಪಿಂಚಣಿ ಹೆಚ್ಚು ಮಾಡಿ, ಮಾಜಿಯಾದ ಮೇಲೆ ಗೌರಯುತ ಬದಕು ನಡೆಸಲು ಅನುಕೂಲವಾಗುತ್ತದೆ ಎಂದು ಅನೇಕರು ಬೇಡಿಕೆ ಇಟ್ಟರು ಎಂದು ವಿಶ್ವನಾಥ್‌ ಹೇಳಿದರು.

ಸಿಎಂಗೆ ಪತ್ರ ಬರೆಯುತ್ತೇನೆ:
ಸಭಾಪತಿ ಬಸವರಾಜ ಹೊರಟ್ಟಿ ಮಧ್ಯ ಪ್ರವೇಶಿಸಿ, ನನ್ನ ಬಳಿ 20 ಮಂದಿ ಮಾಜಿ ಶಾಸಕರು ಬಂದು ತಮ್ಮ ಸಮಸ್ಯೆಗಳು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ನಾನು ಪತ್ರ ಬರೆಯುತ್ತೇನೆ ಎಂದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.