ಹಾಸ್ಟೆಲಿನೊಳಗೆ ತಲೆ ಎತ್ತಿದ ಬ್ಯಾಂಕ್‌


Team Udayavani, Jun 17, 2020, 2:01 PM IST

Piggy-bank

ಸಾಂದರ್ಭಿಕ ಚಿತ್ರ

ಹಾಸ್ಟೆಲ್‌ ಜೀವನದ ಮೋಜು ಮಸ್ತಿಗಳು ಸದಾ ನೆನಪಿನಲ್ಲಿರುವ ಅಂಶಗಳು. ನಾನಂತು ಮೊದಲ ಬಾರಿ ಹಾಸ್ಟೆಲ್‌ ಸೇರಿದ ಮೇಲಂತು ಅಲ್ಲಿನ ನಿತ್ಯದ ಆಗುಹೋಗುಗಳನೆಲ್ಲಾ ಎಂಜಾಯ್‌ ಮಾಡುತ್ತಿದ್ದೇನೆ. ಗಣೇಶ ಚತುರ್ಥಿಗೆ ಪುಟ್ಟ ಗಣಪತಿ ವಿಗ್ರಹ ಇಟ್ಟು ಪೂಜೆ ಮಾಡಿದ್ದಲ್ಲದೇ ಪ್ರಸಾದ ತಯಾರಿಸಿ ಹಂಚಿದ್ದು ಇದೆ. ಇವೆಲ್ಲದರ ನಡುವೆ ಆಗಾಗ ಯಾರ್ಯಾರಧ್ದೋ ದುಡ್ಡಲ್ಲಿ ಬಜೆಟ್‌ ಪಾರ್ಟಿಗಳು ನಮ್ಮ ಪಾಲಿಗೆ ಸಿಗುವ ದೊಡ್ಡ ಪ್ರಸಾದವೇ ಸರಿ. ಆದ್ರೆ ಕೆಲವೊಮ್ಮೆ ಬಜೆಟ್‌ ಎಲ್ಲಿಯೂ ಅಡ್ಜಸ್ಟ್‌ ಆಗದೇ ಇದ್ದಾಗ ಸಾಲ ಮಾಡಿ ತುಪ್ಪ ತಿನ್ನುವ ಪರಿಸ್ಥಿತಿ. ಆಗ ಹೊಳೆದ ವಿನೂತನ ಐಡಿಯವೆಂದರೆ ಪಿಗ್ಗಿ ಬ್ಯಾಂಕ್‌. ಹೌದು.. ಕಪಾಟಿನ ಮೇಲಿದ್ದ ಚಾರ್ಟ್‌ ಶೀಟ್‌ನಲ್ಲಿ ನಮ್ಮ ಪಿಗ್ಗಿ ಬ್ಯಾಂಕ್‌ ಕಟ್ಟಲು ಆರಂಭಿಸಿದೆವು. ಬ್ಯಾಂಕ್‌ ಕಟ್ಟಲು ತಗಲಿದ ಸಮಯ ಕೇವಲ ಹತ್ತು ನಿಮಿಷ. ಕಲ್ಲು ಮರಳಿನ ಖರ್ಚಿಲ್ಲ, ಸಿಮೆಂಟ್‌ ಅಗತ್ಯವೇ ಇಲ್ಲ. ಗಮ್‌ ಹಾಗೂ ಕತ್ತರಿ ಬಳಸಿ ಸುಂದರ ಪಿಗ್ಗಿ ಬ್ಯಾಂಕಿನ ನಿರ್ಮಾಣವಾಯಿತು…!

ಒಂದು ರೂಪಾಯಿ ಡೆಪಾಸಿಟ್‌ ಇಲ್ಲದ ಬ್ಯಾಂಕ್‌ ಉದ್ಘಾಟನೆಗೆ ಏಳನೇ ಮಹಡಿಯಲ್ಲಿದ್ದ ಗೆಳತಿಯನ್ನು ನಿದ್ದೆಯಿಂದ ಎಬ್ಬಿಸಿ ಆಹ್ವಾನಿಸಿಯೇ ಬಿಟ್ಟೆವು. ಬಳಿಕ ಪಿಗ್ಗಿ ಬ್ಯಾಂಕ್‌ಗೆ ಅಧಿಕೃತ ಚಾಲನೆ ನೀಡಲಾಯಿತು. ಪಿಗ್ಗಿ ಬ್ಯಾಂಕ್‌ ಮ್ಯಾನೇಜರ್‌ ನನ್ನ ರೂಂಮೇಟ್‌ ಆದ್ರೆ, ನಾನು ಕ್ಯಾಶಿಯರ್‌. ಉದ್ಘಾಟನೆ ಮಾಡಿದ ಅತಿಥಿಯೇ ನನ್ನ ಗೆಳತಿ ಪಬ್ಲಿಕ್‌ ರಿಲೇಷನ್‌ ಆಫಿಸರ್‌. ಅಂತು ಇಂತು ಪಿಗ್ಗಿ ಬ್ಯಾಂಕ್‌ನಲ್ಲಿ ಕೆಲಸ ಪಡೆದಿದ್ದಾಯಿತು. ಇಲ್ಲಿ ಜಾಬ್‌ ಪಡೆಯಲು ಯಾವ ಬ್ಯಾಂಕ್‌ ಪ್ರವೇಶಾತಿ ಪರೀಕ್ಷೆಯ ಅಗತ್ಯವೇ ಇಲ್ಲವಾಯಿತು.

ಪಿಗ್ಗಿ ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಮಾಡುವವರು ಕೇವಲ ಹತ್ತು ರೂ. ವರೆಗಿನ ನಾಣ್ಯಗಳನ್ನು ಮಾತ್ರವೇ ಇಡಬಹುದು. ಹತ್ತು ರೂಪಾಯಿವರೆಗೆ ಸಾಲ ನೀಡುವ ವ್ಯವಸ್ಥೆಯು ಪಿಗ್ಗಿ ಬ್ಯಾಂಕಿನಲ್ಲಿದೆ. ಡೆಪಾಸಿಟ್‌ ಮಾಡಿದವರಿಗೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. ಆದರೆ ಸಾಲ ತೆಗೆದುಕೊಂಡವರು ಒಂದು ವಾರದೊಳಗೆ ವಾಪಾಸು ನೀಡದೇ ಹೋದಲ್ಲಿ ವಾರಕ್ಕೆ ಒಂದು ರೂಪಾಯಿಯಂತೆ ಬಡ್ಡಿ ವಿಧಿಸಲಾಗುತ್ತದೆ.

“ಪುಟ್‌ ದ ಮನಿ, ಗೆಟ್‌ ದ ಮನಿ…ಎಂಜಾಯ್‌’ ಎಂಬುದು ಬ್ಯಾಂಕಿನ ಘೋಷ ವಾಕ್ಯವಾಗಿತ್ತು. ಕೆಲವರು ಇದರಲ್ಲಿ ಹಣ ಹೂಡಲು ಮುಂದೆ ಬಂದರು. ತಮಾಷೆಗೆ ಆರಂಭಿಸಿದ ಪಿಗ್ಗಿ ಬ್ಯಾಂಕ್‌ ಸಣ್ಣಪುಟ್ಟ ಆವಶ್ಯಕತೆಯನ್ನು ಪೂರೈಸಿತ್ತು.


-  ದುರ್ಗಾ ಭಟ್‌ ಬೊಳ್ಳುರೋಡಿ ಆಳ್ವಾಸ್‌ ಕಾಲೇಜು ಮೂಡುಬಿದಿರೆ

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.