Bermuda Triangle ಎಂಬ ಅದೃಶ್ಯಗಳ ಜಗತ್ತು


Team Udayavani, Mar 11, 2024, 8:00 AM IST

6-uv-fusion

ಸಮುದ್ರ ತನ್ನ ಒಡಳಲ್ಲಿ ಹಲವಾರು ಕೌತುಕಗಳನ್ನು ಬಚ್ಚಿಟುಕೊಂಡಿದ್ದು, ಮನುಷ್ಯ ಸಮುದ್ರದ ಬಗ್ಗೆ ತಿಳಿದಿರುವುದು ಬಹಳ ಕಡಿಮೆ. ಮಾನವ ಆಕಾಶ, ಇತರ ಗ್ರಹಗಳ ಬಗ್ಗೆ ಅಪಾರ ಮಾಹಿತಿಯನ್ನು ಕಲೆ ಹಾಕಿದ್ದಾನೆ. ಆದರೆ ಸಮುದ್ರದಾಳದ ಲೋಕವು ಈಗಲೂ ನಮಗೆ ಅಪರಿಚಿತ. ಕಾರಣ ಸೂರ್ಯನ  ಬೆಳಕು ಸಮುದ್ರದಲ್ಲಿ ಯಾವುದೇ ತಡೆಯಿಲ್ಲದಿದ್ದರೆ 1,000 ಮೀಟರ್‌ಗಳವರೆಗೆ ಸಂಚರಿಸಬಲ್ಲದು, ಆದರೆ ಸ್ಪಷ್ಟ ಬೆಳಕು 200 ಮೀಟರ್‌ಗಳವರೆಗೆ ಮಾತ್ರ ಚಲಿಸುತ್ತದೆ ಇದು ಕೂಡ ಸಮುದ್ರದ ನಿಗೂಢತೆಗೆ ಕಾರಣವಿರಬಹುದು, ಈ ಸಮುದ್ರದ ನಿಗೂಢ‌ತೆಗೆ ಸಾಕ್ಷಿಯಾಗಿ ಬರ್ಮುಡಾ ಟ್ರೈಯಾಂಗಲ್‌ ಜಗತ್ತಿನೆÇÉೆಡೆ ಅಚ್ಚರಿಯ ವಿಷಯವಾಗಿದೆ.

ಬರ್ಮೂಡ ಟ್ರೈಯಾಂಗಲ್‌ ಈ ಹೆಸರನ್ನು ಕೇಳದವರು ಬಹುಶಃ ಜಗತ್ತಿನಲ್ಲಿ ಯಾರೂ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ ಈ ಸ್ಥಳದ ಬಗ್ಗೆ ಅನೇಕ ಲೇಖನಗಳು. ಕಿರು ಚಿತ್ರಗಳು. ಚಲನಚಿತ್ರಗಳನ್ನು ಜಗತ್ತಿನ ಎಲ್ಲ ಭಾಗಗಳ ಜನರು ವೀಕ್ಷೀಸಿರುತ್ತಾರೆ ಹಾಗೂ ಈ ಸ್ಥಳದ ಬಗ್ಗೆ ಭಯವನ್ನು ಸಹ ಹೊಂದಿರುತ್ತಾರೆ.ಅಂದ ಹಾಗೆ ಬರ್ಮೂಡ ಟ್ರೈಯಾಂಗಲ್‌ ಪ್ರದೇಶವು ಉತ್ತರ ಅಟ್ಲಾಂಟಿಕ್‌ ಸಮುದ್ರದ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ. ಈ ಸ್ಥಳಕ್ಕೆ ಡೆವಿಲ್‌ ಟ್ರೈಯಾಂಗಲ್‌ ಅಥವಾ ಹರಿಕೇನ್‌ ಅಲೇ ಎಂದೂ ಸಹ ಕರೆಯಲಾಗುತ್ತದೆ.

ಬರ್ಮುಡಾ ಟ್ರೈಯಾಂಗಲ್‌ನ ಇತಿಹಾಸ ಗಮನಿಸುವುದಾದರೆ ಹೊಸ ಸಮುದ್ರ ಮಾರ್ಗ ಹುಡುಕಿಕೊಂಡು 1492 ರಲ್ಲಿ ಕ್ರಿಸ್ಟೋಫ‌ರ್‌ ಕೊಲಂಬಸ್‌ ಈ ಮಾರ್ಗವಾಗಿ ಸಂಚರಿಸಿದಾಗ ಹಡಗಿನ ದಿಕ್ಸೂಚಿಗಳು ಕೆಲಸ ಮಾಡದೆ ಮತ್ತು ಆಕಾಶದಿಂದ ಬೆಳಕಿನ ಕಿರಣಗಳ ಗುತ್ಛ ಸಮುದ್ರಕ್ಕೆ ಬಿದ್ದಂತೆ ಭಾಸವಾಯಿತೆಂದು ದಾಖಲಿಸಿದ್ದಾನೆ, ನಂತರದಲ್ಲಿ ಅಲೆನ್‌ ಆ್ಯಸ್ಟಿನ್‌ ಹಡಗಿನ ನಾವಿಕ ವಿಚಿತ್ರ ಬರಹಗಳು ಹೀಗೆ ಹಲವು ದಾಖಲೆಗಳು ಈ ಪ್ರದೇಶವನ್ನು ರಹ್ಯಸವಾಗಿಸಿವೆ.

ಬರ್ಮೂಡ ಟ್ರೈಯಾಂಗಲ್‌ ಪ್ರದೇಶದಲ್ಲಿ ವಿಮಾನಗಳು ಮತ್ತು ನೌಕೆಗಳು ರಹಸ್ಯವಾಗಿ ಕಣ್ಮರೆಯಾಗುತ್ತದೆ. ಆದ್ದರಿಂದ ಈ ಸ್ಥಳದಲ್ಲಿ ವಿಚಿತ್ರ ಶಕ್ತಿ ಇರುವುದೆಂದೂ ಮತ್ತು ಅ ಶಕಿಯೇ ವಿಮಾನಗಳು ಮತ್ತು ನೌಕೆಗಳು ರಹಸ್ಯವಾಗಿ ಕಣ್ಮುರೆಯಾಗಲು ಕಾರಣವೆಂದೂ ನಂಬಲಾಗಿದೆ.ತಂತ್ರಜ್ಞಾನ ಎಷ್ಟೇ ಮಂದುವರೆದರೂ ಬರ್ಮೂಡ ಟ್ರೈಯಾಂಗಲ್‌ ರಹಸ್ಯ ಇಂದಿಗೊ ರಹಸ್ಯವಾಗೇ ಉಳಿದಿದೆ. ಇದರ ಕುರಿತು ಡಿಸ್ಕವರಿ ವಾಹಿನಿ ಕೂಡ ವಿಸ್ತೃತ ಕಾರ್ಯಕ್ರಮ ಪ್ರಸಾರ ಮಾಡಿತ್ತು.

ಬರ್ಮೂಡ ಟ್ರೈಯಾಂಗಲ್‌ ಪ್ರದೇಶದಲ್ಲಿ ಅತಿ ಹೆಚ್ಚು ವ್ಯಾಪಾರ ನೌಕೆಗಳು ಸಂಚರಿಸುತ್ತವೆ ಈ ನೌಕೆಗಳು ಅಮೆರಿಕಾ. ಯೂರೋಪ್‌ ಮತ್ತು ಕೆ‌ರೆಬಿಯನ್‌ ದ್ವೀಪಗಳ  ಬಂದರಿನಲ್ಲಿ ವ್ಯಾಪಾರ ನಡೆಸುತ್ತವೆ. ಹಾಗೂ ವ್ಯವಹಾರಿಕ ವಿಮಾನಗಳು ಮತ್ತು ಖಾಸಗಿ ಜೆಟ್‌ಗಳು ಬಿಡುವಿಲ್ಲದೇ ಸಂಚರಿಸುತ್ತವೆ.

ಬರ್ಮೂಡ ಟ್ರೈಯಾಂಗಲ್‌ ಪ್ರದೇಶದ ಸುತ್ತಳತೆ ಕೆಲವು ಸಂಶೋಧ‌ಕರು ಮತ್ತು ಬರಹಗಾರರ ಪ್ರಕಾರ ಸುಮಾರು 1,300,000 ದಿಂದ 3,900,000 (500,000 ದಿಂದ 1,510,000 ಚದರ ಮೈಲಿ) ಕಿಲೋ ಮೀಟರ್‌ ಎಂದೂ ಅಂದಾಜಿಸಲಾಗಿದೆ ಹಾಗೂ ಈ ಭಾಗದ ಪ್ರಮುಖ ಪ್ರದೇಶಗಳೆಂದರೆ ಮಿಯಾಮಿ, ಸಾನೂjನಾ, ಪ್ಯೂರಿಟೋ ರಿಕೋ .

ಮಾಹಿತಿಯ ಪ್ರಕಾರ ಸುಮಾರು 50ಹಡಗುಗಳು ಮತ್ತು 20ವಿಮಾನಗಳು ನಾಪತ್ತೆಯಾಗಿರುವುದೆಂದೂ ಹೇಳಲಾಗಿದೆ. ಬರ್ಮೂಡ ಟ್ರೈಯಾಂಗಲ್ನ ಕುರಿತು ಮೊದಲ ಬಾರಿಗೆ ಎಡ್ವರ್‌ ವ್ಯಾನ್‌ ವಿಂಕಲ್‌ ಜೋನ್ಸ್‌ ಅವರು ಸೆ. 17,1950ರಲ್ಲಿ ದ ಮಿಯಾಮಿ ಹೆರಾಲ್ಡ…  ಅಂಕಣವನ್ನು ಪ್ರಕಟಿಸಿದ್ದಾರೆ. ಬರ್ಮೂಡ ಟ್ರೈಯಾಂಗಲ್‌ನ ಕುರಿತ ಇತರ ಅಂಕಣಗಳೆಂದರೆ  ಪೇಟ್‌  ಮ್ಯಾಗಜಿನ್‌ ಪ್ರಕಟಿಸಿದ  ಸೀ ಮಿಸ್ಟರಿ ಅಟ್‌ ಅವರ್‌ ಬ್ಯಾಕ್‌ ಡೋರ್‌  ಮತ್ತು ಜಾರ್ಜ್‌ ಸ್ಯಾಂಡ್‌ ಬರೆದ ಫ್ಲೈಟ್‌19  ಹಾಗೂ ಫೆಬ್ರವರಿ 1964 ರಲ್ಲಿ ವಿನ್ಸೆಂಟ್‌ ಗಡ್ಡಿಸ್‌ ಬರೆದ ದ ಡೆಡ್ಲಿ ಬರ್ಮೂಡ ಟ್ರೈಯಾಂಗಲ್‌ ಪ್ರಮುಖವಾಗಿವೆ.

ಈ ಪ್ರದೇಶದಲ್ಲಿ ನಾಪತ್ತೆಯಾದ ನೌಕೆಗಳು ಮತ್ತು ವಿಮಾನಗಳೆಂದರೆ:

ಏಲೇನಾ ಆಸ್ಟಿನ್‌ ಎಂಬ ಹಡಗು 1881ರಲ್ಲಿ ಈ ಪ್ರದೇಶದಲ್ಲಿ ಸಂಚರಿಸುವಾಗ ನಾಪತ್ತೆಯಾಗಿತ್ತು.ಯು.ಎಸ್‌ ಸೈಕ್ಲೋಸ್‌ ಎಂಬ ಅಮೆರಿಕಾದ ನೌಕೆ ಮ್ಯಾಗಂನೀಸ್‌

ಅದಿರನ್ನುಕೊಂಡೊಯ್ಯುವಾಗನಾಪತ್ತೆಯಾಗಿತ್ತು.ಯು.ಎಸ್‌.ಎಫ್. -19 ಯುದ್ಧವಿಮಾನ 1945ರಲ್ಲಿ ನಾಪತ್ತೆಯಾಗಿತ್ತು.

ಈ ಭಾಗದಲ್ಲಿ ಸಂಚರಿಸುವ ಹಡಗು ಮತ್ತು ವಿಮಾನಗಳಿಗೆ ವಾತಾವರಣದ ಬದಲಾವಣೆಯಿಂದಾಗಿ ದಿಕ್ಸೂಚಿಯಲ್ಲಿನ ವ್ಯತ್ಯಾಸ ಮತ್ತು ನೀರಿನ ಆಳದಲ್ಲಿನ ಕಂಪನಗಳಿಂದಾಗಿ ಅವಘಡ ಸಂಭವಿಸುತ್ತದೆ ಎಂದೂ ವಿಜ್ಞಾನಿಗಳ ಅಭಿಪ್ರಾಯಪಡುತ್ತಾರೆ.

ಬರ್ಮುಡಾ ಟ್ರಯಾಂಗಲ್‌ ಸಮುದ್ರದಲ್ಲಿನ ಅಯಸ್ಕಾಂತೀಯ ಗುಣವೇ ಹಡಗು ಮತ್ತು ವಿಮಾನಗಳ ಪತನಕ್ಕೆ ಕಾರಣವೆಂದರೆ ಕೆಲವು ತಜ್ಞರ ಅಭಿಪ್ರಾಯವಾದರೆ ಇನ್ನೂ ಕೆಲವರ ಪ್ರಕಾರ ಇಲ್ಲಿನ ಸಮುದ್ರದಲ್ಲಿ ಒಳಗಿನ ಮಿಥೇನ್‌ ಅನಿಲಗಳಿಂದಾಗಿ ದೊಡ್ಡ ಗಾತ್ರದ ನೀರಿನ ಗುಳ್ಳೆಗಳು ಉಂಟಾಗಿ ಒಂದೆ ಸಾರಿ ಆ ಗುಳ್ಳೆಗಳು ಒಡೆದುಕೊಂಡಾಗ ದೊಡ್ಡ ಗಾತ್ರದ ನೀರಿ ಹಡಗನ್ನು ಮುಳುಗಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರಸ್ತುತ ಆಧುನಿಕ ಜಗತ್ತು ಎಷ್ಟೇ ಮುಂದುವರಿದಿದ್ದರೂ ಬರ್ಮುಡಾ ಟ್ರಯಾಂಗಲ್‌ನ ರಹಸ್ಯವನ್ನು ಬಗೆಹರಿಸಲು ಸಾಧ್ಯವಾಗದಿರುವುದು ಅಚ್ಚರಿಯಾಗಿದೆ.

- ರಾಸುಮ ಭಟ್‌

ಕುವೆಂಪು ವಿವಿ

ಟಾಪ್ ನ್ಯೂಸ್

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.