UV Fusion: ವಿದ್ಯುತ್‌ ಇಲ್ಲದ ಬದುಕು


Team Udayavani, Feb 21, 2024, 12:42 PM IST

9-uv-fusion

ಮನುಕುಲದ ಶ್ರೇಷ್ಠ ತಾಂತ್ರಿಕ ಆವಿಷ್ಕಾರಗಳಲ್ಲಿ ವಿದ್ಯುತ್‌ ಶಕ್ತಿಯು ಒಂದು. ವಿದ್ಯುತ್‌ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಡೀ ಜಗತ್ತನ್ನು ವಿದ್ಯುತ್ತನಿಂದ ಬೆಳಗಿಸಲು ವಿದ್ಯುತ್ತನ್ನು ಕಂಡುಹಿಡಿದವರು ಥಾಮಸ್‌ ಆಲ್ವಾ ಎಡಿಸನ್‌. ಕತ್ತಲೆಯನ್ನು ಹೋಗಿಸಿ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮಾಡಿಕೊಳ್ಳಲು ಸಹಾಯ ಮಾಡಿತು.

ಹಿಂದಿನ ಕಾಲದಲ್ಲಿ ವಿದ್ಯುತ್‌ ಇರಲಿಲ್ಲ ಅವರು ಅದಕ್ಕೆ ಹೊಂದಿಕೊಂಡಿದ್ದರು. ಆದರೆ ಇಂದಿನ ಕಾಲದಲ್ಲಿ ವಿದ್ಯುತ್‌ ಇಲ್ಲದೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ನಾವು ವಿದ್ಯುತ್‌ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಒಂದು ದಿನ ವಿದ್ಯುತ್‌ ಇಲ್ಲದೆ ಹೋದರೆ ಯಾವ ಕಾರ್ಯವು ಆಗದಂತೆ ಅನಿಸುತ್ತದೆ.

ಮೊಬೈಲ್‌ ಫೋನ್‌ ಚಾರ್ಜ್‌ ಮಾಡುವ ಸಣ್ಣ ಕೆಲಸದಿಂದ ಹಿಡಿದು ಕೈಗಾರಿಕೆಯತಂಹ ದೊಡ್ಡ ಕೆಲಸಗಳಿಗೆ ಇಂದು ವಿದ್ಯುತ್‌ ಅವಶ್ಯಕತೆ ಇದೆ. ಮನೆಯಲ್ಲಿರುವ ಬಹುತೇಕ ಎಲ್ಲ ವಸ್ತುಗಳು ವಿದ್ಯುತ್ತನ್ನು ಅವಲಂಬಿಸಿದೆ.

ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್‌ ಸರಬರಾಜಿನ ಅಗತ್ಯವಿರುತ್ತದೆ. ವಿದ್ಯುತ್‌ ಸರಬರಾಜು ಇಲ್ಲದ ಹೋದರೆ ಕೈಗಾರಿಕೆಗಳನ್ನು ಮುಚ್ಚಬೇಕಾಗುತ್ತದೆ. ಇನ್ನು ಕೈಗಾರಿಕೆಗಳನ್ನು ಮುಚ್ಚಿದರೆ ಉತ್ಪನ್ನಗಳ ಕೊರತೆ ಉಂಟಾಗುತ್ತದೆ. ಇದು ಉತ್ಪಾದಕತೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪಾದನೆಯು ವಿದ್ಯುತ್‌ ಮೇಲೆ ಅವಲಂಬಿತ ವಾಗಿರುವುದರಿಂದ ಅವುಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ.

ಆಸ್ಪತ್ರೆಗಳಿಗೂ ಕಷ್ಟವಾಗುತ್ತದೆ. ಕಾಯಿಲೆಗೆ ಒಳಗಾದ ಜನರನ್ನು ಉಳಿಸಿಕೊಳ್ಳುವುದು ಕಷ್ಟ. ಏಕೆಂದರೆ ವ್ಯಕ್ತಿಯು ಯಾವ ಕಾಯಿಲೆಗೆ ಒಳಗಾಗಿದ್ದಾನೆ ಎಂದು ವೈದ್ಯರು ತಿಳಿದುಕೊಳ್ಳಲು ಉಪಯೋಗಿಸುವ ಕೆಲವು ಉಪಕರಣಗಳಿಗೂ ವಿದ್ಯುತ್‌ ಬೇಕಾಗುತ್ತದೆ. ಯಾವುದಾದರೂ ವ್ಯಕ್ತಿಗೆ ತುರ್ತು ಚಿಕಿತ್ಸೆಬೇಕಾದರೆ ಆಂಬುಲೆನ್ಸ್ ಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ.

ನಾವು ಈಗ ಉಪಯೋಗಿಸುತ್ತಿರುವ ಬಲ್ಪ್ಗಳನ್ನು ಬಿಟ್ಟು ಮೊದಲಿನ ಹಾಗೆ ಮಣ್ಣಿನ ದೀಪವನ್ನು ಬಳಸಬೇಕಾಗುತ್ತದೆ. ನಮ್ಮ ಶಕ್ತಿಯನ್ನೇ ಉಪಯೋಗಿಸಿ ಕೆಲಸ ಮಾಡಬೇಕಾಗುತ್ತದೆ. ವಿದ್ಯುತ್‌ ಇಂದ ವೇಗವಾಗಿ ಆಗುವ ಎಲ್ಲಾ ಕೆಲಸಗಳು ವಿದ್ಯುತ್‌ ಇಲ್ಲದೆ ಹೋದರೆ ನಿಧಾನವಾಗಿ ಆಗುತ್ತವೆ.

ದೇಶದಲ್ಲಿ ಆಗುವ ಯಾವುದೇ ಘಟನೆಯನ್ನು ಮತ್ತು ಅಂತರಾಷ್ಟ್ರೀಯ ಸುದ್ದಿಯನ್ನು ತಿಳಿದುಕೊಳ್ಳಲು ಕಷ್ಟವಾಗುತ್ತದೆ. ನಮ್ಮ ದೂರದ ಸಂಬಂಧಿಗಳು ಹೇಗಿದ್ದಾರೆ ಎಂದು ವಿಚಾರಿಸಲು ನಾವು ಅಂಚೆ ಸಹಾಯವನ್ನೇ ಪಡೆಯಬೇಕು.

ನಮ್ಮ ತತ್‌ ಕ್ಷಣದ ಭಾಗವೆಂದರೆ ಸಾರಿಗೆ ಅವೆಲ್ಲವೂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಅವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ನಾವು ಮೊದಲಿನಂತೆ ಕಾಲಿನಲ್ಲಿ, ಎತ್ತಿನಗಾಡಿಯಲ್ಲಿ ಹೋಗಬೇಕಾಗುತ್ತದೆ. ದೊಡ್ಡ ದೊಡ್ಡ ನಗರಗಳೆಲ್ಲವೂ ವಿದ್ಯುತ್ತನ್ನು ಅವಲಂಬಿಸಿದ್ದರಿಂದ ಅವುಗಳಿಗೆ ನಷ್ಟವಾಗುತ್ತದೆ.

ಹೀಗಾಗಿ ವಿದ್ಯುತ್‌ ನಮ್ಮ ಜೀವನದ ಮೂಲಭೂತ ಅವಶ್ಯಕತೆಯಾಗಿದೆ. ಎಲ್ಲಿ ಬೆಳಕಿದೆಯೋ ಅಲ್ಲಿ ಜೀವ ವಿರುತ್ತದೆ. ಆದರೆ ನಾವು ವಿದ್ಯುತ್ತನ್ನು ಸಂಪೂರ್ಣವಾಗಿ ವರವಾಗಿ ತೆಗೆದುಕೊಳ್ಳದೆ ಎಚ್ಚರಿಕೆಯಿಂದ ಬಳಸಬೇಕಾದ ಸಂಪನ್ಮೂಲವಾಗಿ ಗೌರವಿಸಬೇಕು.

- ಪಲ್ಲವಿ ಹೆಗಡೆ

ಬಪ್ಪನಳ್ಳಿ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.