ಮಳೆರಾಯನ ಜಾದು..


Team Udayavani, Jun 7, 2021, 11:00 AM IST

ಮಳೆರಾಯನ ಜಾದು..

ಭುವಿಯನ್ನು ಸೋಕಲು ಮಳೆಯು ಹರುಷದಿ, ಕುಣಿದು ಕುಪ್ಪಳಿಸಿತು ಪ್ರಕೃತಿ, ಘಮ್ಮೆಂದು ಹರಡಿತು ಮಣ್ಣಿನ ಸುವಾಸನೆ…. ತೇಲಾಡಿತು ಮನ ಹರುಷದಿ…ಮಳೆ ಯಾರಿಗೆ ಬೇಡ ಹೇಳಿ? ಈಗ ತಾನೆ ಮೊಳಕೆಯೊಡೆದು ಎಲೆ ಬಿಡುವ ಚಿಗುರಿನಿಂದ ಹಿಡಿದು  ಹಣ್ಣೆಲೆಯವರೆಗೂ ಅದೇ ರೀತಿ ಪುಟಾಣಿ ಮಕ್ಕಳಿಂದ ವಯಸ್ಸಾದ ಮುದುಕರವರೆಗೂ ಮಳೆ ಅಚ್ಚುಮೆಚ್ಚು. ಮಳೆಯನ್ನು ದೇವರ ಆಶೀರ್ವಾದವೆಂದೇ ಹೇಳಬಹುದು.

ಆಗಸದಲ್ಲಿ ಮೋಡ ಮುಸುಕಿದ್ದನ್ನು ಕಂಡ ಕೂಡಲೇ ನೆಂಟರು ಬರುವ ರೀತಿ ಮಳೆಯನ್ನು ಕಾದು ಕುಳಿತುಕೊಳ್ಳುವ ಜನರೇ ಹೆಚ್ಚು. ಒಂದು ಬಾರಿ ಮಳೆ ಬಂದೊಡನೆ ಮಳೆಯ ನೀರು ಮಣ್ಣನ್ನು ತಬ್ಬಿ ಹಿಡಿದುಕೊಂಡಾಗ ಮೂಗಿಗೆ ನಾಟುವ ಮಣ್ಣಿನ ಸುವಾಸನೆ ಯಾವುದೇ ಬ್ರಾಂಡೆಡ್‌ ಸುಗಂಧ ದ್ರವ್ಯದಿಂದಲೂ ಸಿಗದ ಪರಿಮಳ ಮಳೆಯದ್ದು.  ಕಪ್ಪು ಕವಿದ ಕಾರ್ಮೋಡದ ನಡುವೆ ಜಿಟಿ ಜಿಟಿ ಬೀಳುವ ಹನಿಗಳ ಜತೆಗೆ ಒಂದು ಕಪ್‌ ಬಿಸಿ ಕಾಫಿ ಸವಿ ಯುವ ಖುಷಿಯೇ ಬೇರೆ.

ಮಕ್ಕಳಿಗೂ ಮಳೆಗೂ ಅದೇನೋ ಅವಿನಾಭಾವ ಸಂಬಂಧ ಇನ್ನೇನು ಶಾಲೆಗೆ ಹೊರಡಬೇಕು ಅನ್ನುವಷ್ಟರಲ್ಲಿ ನಿಮ್ಮ ಜತೆ ಬರುತ್ತೇನೆ ಎಂಬಂತೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾನೆ ಮಳೆರಾಯ. ಚಿಕ್ಕ ಮಕ್ಕಳಂತೂ ಹೇಳುವುದೇ ಬೇಡ ರಸ್ತೆಯಲ್ಲಿ ಈಜುಕೊಳದಂತಿರುವ ನೀರು ತುಂಬಿರುವ ಹೊಂಡದಲ್ಲಿ ಕಾಲು ಜಾರದಿದ್ದರೆ ಸಮಾಧಾನ ಇಲ್ಲ ಎಂಬಂತೆ ಜಿಗಿದುಕೊಂಡು ಕೆಸರೆರಚಿಕೊಂಡು ಮುಂಜಾನೆ ಶಾಲೆಗೆ ಹೋಗುವುದನ್ನು ನೋಡುವುದೇ ಒಂದು ಖುಷಿ.

ಮಳೆ ಕೆಲವರಿಗೆ ಖುಷಿಯ ವಿಚಾರವಾದರೆ ಇನ್ನೂ ಕೆಲವರಿಗೆ  ಚಿಂತೆ. ಬೀಳುವಂತಿರುವ ಹಳೆ ಮನೆ ಇರುವವರಿಗೆ ಮೋಡ ಮುಸುಕಿತೆಂದಾಗಲೇ ಮನದಲ್ಲಿ ಮನೆ ಕುಸಿದು ಬೀಳುತ್ತದೆ ಎಂಬ ಭಯ ಕಾಡುತ್ತದೆ. ರಾತ್ರಿ ಇಡೀ ಮಳೆ ಜೋರಾಗಿ ಬಂದಿತೆಂದರೆ ನಿದ್ದೆ ಬಿಟ್ಟು ಮನೆಯ ಮೂಲೆ ಮೂಲೆಯಲ್ಲಿ ಕುಳಿತುಕೊಂಡು ಮಳೆಯ ರಭಸಕ್ಕೆ ಹೆಂಚಿನ ಸಂದಿಯಿಂದ ಮನೆಯ ಒಳಗೆ ಬೀಳುವ ನೀರ ಹನಿಗೆ ಪಾತ್ರೆ ಇಡುವುದರೊಳಗೆ ಬೆಳಕು ಬಂದಿಳಿದಿರುತ್ತದೆ. ಯಾವಾಗ ಮಳೆಗಾಲ ಮುಗಿಯುತ್ತದೋ ಎಂಬ ಚಿಂತೆಗೆ ಒಳಗಾಗಿರುತ್ತಾರೆ. ವ್ಯವಸಾಯವೇ ಜೀವನವೆಂದು ನಂಬಿರುವ ರೈತರಿಗೆ ಮಳೆ ಬಂದರೆ ಸಾಕು ಮೋಡ ಮುಸುಕಿತೋ ಇಲ್ಲವೋ ಎಂದು ಆಕಾಶದ ಕಡೆ ಕಣ್ಣುಹಾಯಿಸುವುದೇ ಎಲ್ಲಿಲ್ಲದ ಖುಷಿ.

 

ಅಶ್ವಿ‌ತಾ ಗಟ್ಟಿ

 ಮಂಗಳೂರು ವಿ.ವಿ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.