UV Fusion: ಕಾಲಿಗೆ ಅಂದ ನೀಡಿದ ಪಾದುಕೆ


Team Udayavani, Mar 16, 2024, 8:25 AM IST

10-uv-fusion

ಪಾದಗಳು, ಇದೇ ಮನುಷ್ಯನನ್ನು ಸದಾ ಓಡಾಡಲು ಸಹಾಯ ಮಾಡುವ ಅಂಗ. ಅದರ ರಕ್ಷಣೆಗೆ ಸೃಷ್ಟಿಯಾದದ್ದೇ ಪಾದುಕೆ, ಪಾದರಕ್ಷೆಗಳು. ಪಾದಗಳು ಎಂದಿಗೂ ಮನುಷ್ಯನನ್ನು ಎದ್ದು ನಿಲ್ಲಲು ಸಹಾಯ ಮಾಡುತ್ತದೆ. ಹಾಗೆ ಅದನ್ನು ರಕ್ಷಿಸಲು ಇರುವುದೇ ಪಾದರಕ್ಷೆಗಳು. ಪಾದ ನೋಯುತ್ತದೆ, ಕೊಳಕಾಗುತ್ತದೆ ಎಂಬ ವಿಚಾರವಾಗಿ ಪಾದರಕ್ಷೆಗಳು  ಹುಟ್ಟಿಕೊಂಡಿರಬಹುದು, ಯಾರಿಗೆ ಗೊತ್ತು!

ಇದು ಹಿಂದಿನ ಕಾಲದಿಂದಲೂ ಇದೇ ಕಾರಣಕ್ಕೆ ಇದ್ದಿರಬಹುದು. ಹಿಂದೆ ಸ್ವಾಮೀಜಿಗಳಿಗೆ ಮರದ ಪಾದುಕೆಗಳು, ಶ್ರೀಮಂತರಿಗೆ ಚರ್ಮದ ಪಾದರಕ್ಷೆಗಳು ಇದ್ದವು. ಆದರೆ ಈಗ ಕಾಲ ಬದಲಾಗಿದೆ ಸ್ಲಿಪ್ಪರ್‌, ಸ್ಯಾಂಡಲ್, ಕ್ರಾಕರ್ಸ್‌, ಶೂಗಳು  ಇನ್ನು ಹಲವಾರು ವಿಧದ ಪಾದರಕ್ಷೆಗಳು ಸಿಗುತ್ತದೆ.

ಪಾದರಕ್ಷೆಗಳು ಈಗ ಹೊಸ ಹೊಸ ಟ್ರೆಂಡ್‌ ಗಳನ್ನು  ಹುಟ್ಟಿ ಹಾಕಿಸಿದೆ.  ಹಿಂದಿನ ಕಾಲದಲ್ಲಿ  ಚಪ್ಪಲಿಯನ್ನು ಕೊಳ್ಳಲು ಹಣವಿರುತ್ತಿರಲಿಲ್ಲ, ಅದಕ್ಕಾಗಿ ಬರೀ  ಕಾಲಿನಲ್ಲಿ ಸಂಚರಿಸುತ್ತಿದ್ದರು. ಆದರೆ ಈಗ ಪ್ರತಿಯೊಂದು ಡ್ರೆಸ್ಸಿಗೂ  ಕೂಡ ಒಂದೊಂದು  ರೀತಿಯ ಚಪ್ಪಲಿಗಳನ್ನು ಧರಿಸುವ ಕಾಲ ಕೂಡ ಬಂದಿದೆ. ಈಗಿನ ಕಾಲದಲ್ಲಿ ಚಪ್ಪಲ್‌ ಗಳಿಗೆ  ಅಧಿಕ ಹಣವು ಕೂಡ ವ್ಯಯ ವಾಗುತ್ತಿದೆ.  ‌

ಕೆಲವು  ವರ್ಷಗಳ ಹಿಂದೆ, ಹೆಚ್ಚಿನ ಸೈಜ್‌ನ ಚಪ್ಪಲಿಗಳು ಮಾರುಕಟ್ಟೆಯಲ್ಲಿ  ದೊರೆಯುತ್ತಿರಲಿಲ್ಲ. ಈಗ ಹಾಗಿಲ್ಲ, ಚಪ್ಪಲ್ ಗಳು 10 ರಿಂದ 15 ಅಳತೆಯ ವರಗಿನ  ಚಪ್ಪಲಿಗಳು ಕೂಡ ಸಿಗುತ್ತದೆ. ಆದರೆ ಕಡಿಮೆ ಪ್ರಮಾಣದಲ್ಲಿದೆ. ಹಿಂದಿನ ಕಾಲದಲ್ಲಿ ಪಾದಗಳು ದೊಡ್ಡದಾಗಿದ್ದಾಗ ಅವರ ಅಳತೆಗೆ ಸರಿ ಹೋಗುವ ಹಾಗೆ ಚಮ್ಮಾರರು  ಪಾದರಕ್ಷೆಗಳನ್ನು ತಯಾರಿ ಮಾಡುತ್ತಿದ್ದರು. ಈ ಪ್ರತೀ ಇಂದು ಕೂಡ ನಡೆದುಕೊಂಡು ಬರುತ್ತಿದೆ.

ಈಗ  ಪಾದರಕ್ಷೆಯ ವ್ಯಾಪಾರ, ವ್ಯವಹಾರಗಳನ್ನು ದೊಡ್ಡ ಮಟ್ಟದಲ್ಲಿ  ನೋಡಬಹುದು. ಹಿಂದೆ  ಸೀಮಿತ ಡಿಸೈನ್‌ಗಳು ಇದ್ದವು. ಈಗ ಬಗೆ ಬಗೆ ಡಿಸೈನ್‌ಗಳು ಲಭ್ಯವಿದ್ದು, ಗ್ರಾಹಕನಿಗೆ ಯಾವುದು ಆಯ್ಕೆ ಮಾಡಬೇಕು ಎಂಬ ಗೊಂದಲಗಳು ಉಂಟಾಗುವಂತೆ ಮಾಡಿವೆ.

ಪಾದರಕ್ಷೆಯನ್ನು ಖರೀದಿಸುವಾಗ, ಅದರ ಬಾಳಿಕೆ ಮತ್ತು ಅದರ ಯಾವ ಕಾಲದಲ್ಲಿ ಉಪಯೋಗ ಮಾಡಬೇಕು ಎಂಬ ಬಗ್ಗೆ ಪಾದರಕ್ಷೆಯನ್ನು ಮಾರುವವನೊಂದಿಗೆ ಕೊಳ್ಳುವವರು ಕೇಳುವುದು ರೂಢಿ. ಮತ್ತೆ ಮಧ್ಯಮ ವರ್ಗದವರ ಕಡಿಮೆ ಮಾಡಿಕೊಡಿ ಎಂಬ ಚೌಕಾಸಿ ಕೂಡ ಇದೆ. ಪಾದರಕ್ಷೆಯನ್ನು ಸಲ್ಪ ಕಟ್‌ ಆದರೂ, ಅದನ್ನು ರಿಪೇರಿ ಮಾಡುವಲ್ಲಿ ತೆಗೆದುಕೊಂಡು ಹೋಗುತ್ತೇವೆ. ಅವರು ಸರಿಪಡಿಸಿ ನೀಡುತ್ತಾರೆ. ಎಷ್ಟೋ ಬಾರಿ ಚಪ್ಪಲಿ ಮೊತ್ತಕ್ಕಿಂತಲೂ ಅದನ್ನು ಪೂರ್ತಿ ಸ್ಟಿಚ್‌ ಮಾಡಲು ನೀಡಿದಾಗ ದುಪ್ಪಟ್ಟು ಮೊತ್ತ ನೀಡಬೇಕಾಗುತ್ತದೆ ಎನ್ನುವುದು ದುಃಖದ ಸಂಗತಿ.

ಈ ಹಿಂದೆ ದೇವರ ಪಾದುಕೆಗಳನ್ನು ಸಮಗಾರರು ಮಾಡುತ್ತಿದ್ದರು. ಈಗ ಅದರ ಪ್ರಮಾಣ ಇಳಿದಿದೆ. ಆದರೆ ಸಮಗಾರರು ತಮ್ಮ ಕುಲಕಸುಬುವನ್ನು ಮಾಡಿದರೆ, ಉತ್ತಮ ವ್ಯಾಪಾರವಾಗುತ್ತದೆ ಎಂಬ ನಂಬಿಕೆ ಕೂಡ ಆ ಸಮುದಾಯಕ್ಕೆ ಈಗಲೂ ಇದೆ. ಈ ಸಮುದಾಯವು ಪರಿಶಿಷ್ಟ ಪಂಗಡದ ಒಳಗೆ ಬರುತ್ತದೆ. ಈಗ ಸರಕಾರದ ಹಲವಾರು ಹುದ್ದೆಗಳಲ್ಲಿ ಕೂಡ ಈ ಸಮುದಾಯದ ಮಂದಿ ಇದ್ದಾರೆ. ಆದರೆ ಈಗ ಅವರ ಕುಲಕಸುಬನ್ನು ಬಿಟ್ಟು ಬೇರೆ ಉದ್ಯೋಗವನ್ನು ಹುಡುಕಿಕೊಳ್ಳುತ್ತಿದ್ದಾರೆ.

ಇನ್ನು ನಾವು ದೇವಸ್ಥಾನಗಳಿಗೆ ಹೋಗುವಾಗ ಚಪ್ಪಲಿ ಕಾಯುವ ಸ್ಟ್ಯಾಂಡ್‌ಗಳನ್ನು ಇಂದು ನೋಡಬಹುದು. ಈ ಹಿಂದೆ ಈ ರೀತಿ ಇದ್ದದ್ದು ಕಡಿಮೆ. ದೇವಸ್ಥಾನದ ಆವರಣದಲ್ಲಿ ಚಪ್ಪಲಿಯನ್ನು ಬಿಟ್ಟು ಹೋಗುತ್ತಿದ್ದರು. ಹಾಗೂ  ಒಂದು ಕಡೆ ಇದ್ದ ಚಪ್ಪಲಿಯನ್ನು ಇನ್ನೊಬ್ಬರು ತಮ್ಮದೊಂದು ಹಾಕಿಕೊಂಡು ಹೋದ ಸಂಗತಿಗಳನ್ನು ನೋಡಬಹುದು. ಹಾಗೆ ಮಧ್ಯಮ ವರ್ಗದವರು ಚಪ್ಪಲಿ ಕಳೆದು ಹೋಗಬಾರದೆಂದು ಒಂದು ಚಪ್ಪಲಿಯ ಮೇಲೆ ಇನ್ನೊಂದು ಚಪ್ಪಲಿಗಳನ್ನು ಇಟ್ಟು ತಮ್ಮದೊಂದು ಗುರುತು ಮಾಡಿ ಹೋಗುತ್ತಿದ್ದ ಸಂಗತಿಗಳು ಇವೆ.

ಅಧಿಕವಾಗಿ ಜಾತ್ರೆಯ ಸಂದರ್ಭದಲ್ಲಿ ಚಪ್ಪಲಿಯ ಕಳ್ಳತನವನ್ನು ಕೂಡ ನೋಡಬಹುದು. ಈಗಿನ ವಿದ್ಯಾಮಾನ ಎಷ್ಟೇ ಬದಲಾಗಿರಬಹುದು. ಕನಿಷ್ಠ 10 ನಿಮಿಷಗಳ ಕಾಲ ಬರಿಗಾಲಿನಲ್ಲಿ ಸಂಚರಿಸಿದರೆ ಆರೋಗ್ಯದ ಮಟ್ಟವನ್ನು ಅಭಿವೃದ್ಧಿಪಡಿಸಬಹುದು ಎಂದು ವೈದ್ಯಕೀಯ ವರದಿಗಳು ಹೇಳುತ್ತದೆ.

ಆದರೆ ಈಗ ತಮ್ಮ ಸ್ವಂತ ಮನೆಯೊಳಗೂ ಕೂಡ ಸ್ಲಿಪ್ಪರ್‌ಗಳನ್ನು ಹಾಕಿ ಸಂಚರಿಸುವುದನ್ನು ಶ್ರೀಮಂತರ ಮನೆಗಳಲ್ಲಿ ನೋಡಬಹುದು.  ಈಗಿನ ಕಾಲದಲ್ಲಿ ಹೊಸ ವೈದ್ಯಕೀಯದ ತಂತ್ರಜ್ಞಾನವುಳ್ಳ ಪಾದರಕ್ಷೆಯನ್ನು ನೋಡಬಹುದು ಮತ್ತು ಈಗಿನ ಆಧುನಿಕ ವಿದ್ಯಮಾನಕ್ಕೆ ಈ ವಿಷಯಗಳು ತಿಳಿಯದೆ ಹೋಗಿರುವುದು ವಿಪರ್ಯಾಸವಾಗಿದೆ.

ಕೆಲವೊಂದು ಬಾರಿ, ಅರಿವಿಲ್ಲದೇ ಪ್ರವಹಿಸುತ್ತಿರುವ ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿದಾಗ ರಬ್ಬರ್‌ನ ಪಾದರಕ್ಷೆಗಳು ಜೀವವನ್ನು ಉಳಿಸುವ ಕೆಲಸವನ್ನು ಕೂಡ ಮಾಡಿದೆ.

ಇಂದಿನ  ಕಾಲದಲ್ಲಿ  ಪಾದರಕ್ಷೆಗಳು ತಮ್ಮ ಮೌಲ್ಯವನ್ನು ಅಧಿಕಗೊಳಿಸುತ್ತಿದೆ. ಹಲವು ಮಂದಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ,ಇನ್ನೊಂದು ಕಡೆಯಲ್ಲಿ ಪರಿಸರಕ್ಕೆ ಹಾನಿ ಕೂಡ ಆಗಿದೆ.

 -ದೇವಿಶ್ರೀ ಶಂಕರಪುರ,

ಆಳ್ವಾಸ್‌ ಕಾಲೇಜು ಮೂಡುಬಿದಿರೆ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.