ʼಇಂಗ್ಲಿಷ್‌ ಚಾನೆಲ್‌ʼ ಈಜಿದ ಏಷ್ಯಾದ ಮೊದಲ ಮಹಿಳೆ


Team Udayavani, Oct 1, 2020, 8:40 PM IST

832

ಬಾಲ್ಯದಿಂದಲೂ ಕನಸುಗಳುಗಳಿಗೆ ಪೋತ್ಸಾಹ ಮತ್ತು ಏನಾದರೂ ಸಾಧಿಸಬೇಕೆಂಬ ಹಂಬಲ ನಮ್ಮಲ್ಲಿದ್ದರೇ ಎಂತಹ ಕಠಿನ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕ್ಷಿ ಆರತಿಶಾ.

1940ರ ಸೆ. 24ರಂದು ಕೋಲ್ಕತ್ತಾದಲ್ಲಿ ಜನಿಸಿದ ಈ ಒಲಿಂಪಿಯನ್‌  ಉತ್ತಮ ಈಜುಪಟುವಾಗ ಬೇಕು ಎಂಬ ಕನಸನ್ನು ಕಂಡಿದ್ದರು. ಇಂಗ್ಲಿಷ್‌ ಚಾನೆಲ್‌ ಎಂದು ಕರೆಸಿಕೊಳ್ಳುವ ಫ್ರಾನ್ಸ್‌ನ್‌ ಕೇಪ್‌ ಗ್ರಿಸ್‌ ನೆಜ್‌ನಿಂದ ಇಂಗ್ಲೆಂಡ್‌ನ‌ ಸ್ಯಾಂಡ್‌ಗೇಟ್‌ನ 42 ಮೈಲಿ ದೂರವನ್ನು ಈಜುವ ಮೂಲಕ ಇಂಗ್ಲಿಷ್‌ ಚಾನೆಲ್‌ಯನ್ನು ದಾಟಿದ ಏಷ್ಯಾದ ಮೊದಲ ಮಹಿಳೆ ಎಂಬ ಖ್ಯಾತಿಯನ್ನು ಆರತಿ ಶಾ ಪಡೆದಿದ್ದಾರೆ.  ಪದ್ಮಶ್ರೀ ಪಡೆದ ಮೊದಲ ಕೀಡಾಪಟು / ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಸೆ. 24ರಂದು ಆರತಿ ಶಾ ಅವರ 80 ನೇ ಜನ್ಮದಿನಕ್ಕೆ ಗೂಗಲ್‌ ಡೂಗಲ್‌ ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಆರತಿ ಸಾ ಅವರು ಎಲ್ಲದರಲ್ಲೂ ಎತ್ತಿದ ಕೈ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇವರು ಬಾಲ್ಯದಿಂದಲೇ ಈಜುಗಾರ್ತಿಯಾಗಬೇಕೆಂಬ ಮಹಾದಾಸೆಯನ್ನು ಹೊಂದಿದ್ದರು. 5 ನೇ ವಯಸ್ಸಿನಲ್ಲೇ ಮೊದಲ ಬಾರಿಗೆ ಈಜು ಸ್ವರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು. ತಮ್ಮ 11 ವಯಸ್ಸಿನ ವೇಳೆಗೆ ಹಲವು ಸ್ವಿಮ್ಮಿಂಗ್‌ ದಾಖಲೆಗಳನ್ನು ಮುರಿದಿದ್ದರು.

ಹೂಗ್ಲಿ ನದಿಯೇ ಇವರ ಮೊದಲ ಈಜು ಪಾಠ ಶಾಲೆ. ಮುಂದಕ್ಕೆ ಇವರು ಈಜುಪಟು ಸಚಿನ್‌ ನಾಗ್‌ ಅವರಿಂದ ಈಜು ತರಬೇತಿ ಪಡೆದರು. 1952 ರಲ್ಲಿ ಮೊದಲ ಬಾರಿಗೆ ಇಂಗ್ಲಿಷ್‌ ಚಾನೆಲ್‌ ಈಜಿ ದಾಟಲು ಪ್ರಯತ್ನಿಸಿದಾಗ ಸೋತರು 1959ರಲ್ಲಿ ಇಂಗ್ಲಿಷ್‌ ಚಾನೆಲ್‌ ದಾಟುವ ಮೂಲಕ ಹೊಸ ದಾಖಲೆಯನ್ನು ಬರೆದರು. ಅತೀ ದೂರಕ್ಕೆ ಈಜುವುದು ಇವರು ವಿಶೇಷತೆಯಾಗಿದೆ.

ಮಧ್ಯ ಕುಟುಂಬದಲ್ಲಿ ಜನಿಸಿದ ಶಾ, ಮೂರು ಮಕ್ಕಳಲ್ಲಿ ಇವರು ಎರಡನೇಯವರು. ತಮ್ಮ ಎರಡೂವರೆ ವರ್ಷವಿದ್ದಾಗ ತಾಯಿಯನ್ನು ಕಳೆದು ಕೊಂಡು ಅಜ್ಜಿಯ ಮನೆಗೆ ತೆರಳುತ್ತಾರೆ.

4 ನೇ ವಯಸ್ಸಿನಲ್ಲಿ ಶಾ ಅವರು ಚಿಕ್ಕಪ್ಪ ಜತೆಗೆ ಘಾಟ್‌ಗೆ ಸ್ನಾನಕ್ಕೆ ಹೋಗುತ್ತಿದ್ದರು ಅಲ್ಲಿ ಅವರ ಈಜು ಆಸಕ್ತಿಯನ್ನು ಗಮನಿಸಿದ ತಂದೆ ಪಂಚುಗೋಪಾಲ್‌ ಮಗಳನ್ನು ಈಜು ಕ್ಲಬ್‌ಗೆ ಸೇರಿಸುತ್ತಾರೆ. 1946ರಲ್ಲಿ ತನ್ನ 5 ನೇ ವಯಸ್ಸಿನಲ್ಲಿ ಶೈಲೇಂದ್ರ ಸ್ಮಾರಕ ನಡೆಸಿದ 110 ಯಾರ್ಡ್‌ ಫ್ರೀ ಸ್ಟೈಲ್‌ ಈಜು ಸ್ವರ್ಧೆಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಭಾರತೀಯ ಈಜುಗಾರ ಮಹಿರ್‌ ಸೇನ್‌ ಅವರಿಂದ ಆರತಿ ಸಾ ಅವರು ಸ್ಫೂರ್ತಿ ಪಡೆದಿದ್ದರು.

1945 ರಿಂದ 1951 ರ ನಡುವೆ 22 ರಾಜ್ಯಮಟ್ಟದ ಸ್ವರ್ಧೆಗಲ್ಲಿ ಗೆಲುವನ್ನು ಸಾಧಿಸಿದ್ದರು. 1948ರಲ್ಲಿ ಮುಂಬಯಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ ಶಿಪ್‌ನಲ್ಲಿ ಬೆಳ್ಳಿಯ ಪದಕ ಗಳಿಸಿದರು. 1952ರ ಸಮ್ಮರ್‌ ಒಲಿಂಪಿಕ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ.

1959ರಲ್ಲಿ ಶಾ ಡಾ| ಅರುಣ್‌ ಗುಪ್ತಾ ಅವರನ್ನು ವಿವಾಹವಾಗುತ್ತಾರೆ. ಈ ದಂಪತಿಗೆ ಅರ್ಚನಾ ಎಂಬ ಮಗಳಿದ್ದಾರೆ. 1994 ಆಗಸ್ಟ್‌ 4 ರಂದು ಕಾಮಾಲೆ ರೋಗದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. 19 ದಿನಗಳ ಕಾಲ ಅನಾರೋಗದ ವಿರುದ್ಧ ಹೋರಾಡಿ ಆಗಸ್ಟ್‌ 23ರಂದು ನಿಧನ ಹೊಂದುತ್ತಾರೆ. ಅದೆಷ್ಟೊ ಕ್ರೀಡಾಪಟುಗಳಿಗೆ ಆರತಿ ಶಾ ಸ್ಫೂರ್ತಿಯ ಚೆಲುಮೆಯಾಗಿದ್ದಾರೆ.

 ಧನ್ಯಶ್ರೀ ಬೋಳಿಯಾರು 

 

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.