Festival: ಬದುಕು ಆಪ್ತವಾಗುವುದು ಇಲ್ಲಿಯೇ…

Team Udayavani, Dec 5, 2023, 7:15 AM IST

10-uv-fusion

ಹಬ್ಬಗಳೆಂದರೆ ಸಂಭ್ರಮದ ಗೂಡು. ಪ್ರತೀ ವರ್ಷ ಚೌತಿ, ದೀಪಾವಳಿಯಂತೆ ಕಾಯುವುದು ಊರ ಹಬ್ಬಕ್ಕೆ. ಊರ ಜಾತ್ರೆಗೆ ಕಾಯುವ ಪರಿ ಉಳಿದವುಗಳಿಗಿಂತ ಒಂದು ಕೈ ಮೇಲೆ. ಇದರ ಸಂಭ್ರಮವು, ಖುಷಿಯೂ ಅಷ್ಟೇ, ಒಂದು ಹಿಡಿ ಮಿಗಿಲೇ. ಎಷ್ಟೆಂದರೂ ಹುಟ್ಟಿದ ಊರಲ್ಲವೆ, ಊರಿನೆಡೆಗಿನ ಪ್ರೀತಿ ತುಸು ಜಾಸ್ತಿಯೇ.

ಹೊಸ ವರ್ಷದ ಕ್ಯಾಲೆಂಡರ್‌ ಮನೆಗೆ ಬಂದಾಗ ಮೊದಲು ನೋಡುವುದು ರಾಷ್ಟ್ರೀಯ, ಧಾರ್ಮಿಕ ಹಬ್ಬಗಳ ರಜೆಯ ಪಟ್ಟಿಯನ್ನು. ಇದರ ಜತೆಜತೆಗೆ ಲೋಕಲ್‌ ಹಾಲಿಡೇ ಆಗಿ ಊರ ಹಬ್ಬದ ದಿನವನ್ನು ಹುಡುಕಿ, ಗುರುತು ಹಾಕಿ ಇಟ್ಟುಕೊಳ್ಳುವುದು. ಈ ಚಾಳಿ ಉದ್ಯೋಗಸ್ಥರಾದ ಮೇಲೂ ಮುಂದುವರಿದು ಬಿಟ್ಟಿದೆ… ಬಿಡುವಿಲ್ಲದ ಕೆಲಸದ ಮಧ್ಯೆ ಊರ ಹಬ್ಬವನ್ನು ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಊರ ಹಬ್ಬ ತಪ್ಪಿತೆಂದರೆ ಅದೇನೋ ಕಳೆದುಕೊಂಡ ಭಾವ…

ಊರಿನ ಜಾತ್ರೆಗೆ ಪ್ರತೀ ಮನೆಯಲ್ಲೂ ಸಂಭ್ರಮ. ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿರುತ್ತದೆ. ಈ ಸಂದರ್ಭ ನಿತ್ಯದ ಕೆಲಸ – ಕಾರ್ಯಗಳಿಗೆ ರಜೆ. ಏನಿದ್ದರೂ ಊರ ಹಬ್ಬವನ್ನು ಜೀವಿಸುವುದೇ ಪ್ರಮುಖ.

ಊರ ಹಬ್ಬ ಕೇವಲ ಹಬ್ಬವಲ್ಲ, ಊರಿನ ಮನಸ್ಸುಗಳ ಮಿಲನ. ಜಾತ್ರೆಯ ರಥಬೀದಿಯ ಆರಂಭದಿಂದ ತುದಿಯವರೆಗೂ ಊರು ಎದುರಾಗುತ್ತಿರುತ್ತದೆ. ಬದುಕಿನ ಅನಿವಾರ್ಯತೆಗಾಗಿ ಬೇರೆ ಊರು, ರಾಜ್ಯಗಳಲ್ಲಿ ನೆಲೆ ಕಂಡುಕೊಂಡ ಜೀವಗಳು ಊರ ಹಬ್ಬಕ್ಕೆ ತಪ್ಪದೇ ಹಾಜರಿಯನ್ನು ಹಾಕುತ್ತಾರೆ. ಅದೇ ಊರಿನ ಸೆಳೆತ. ಇಲ್ಲೇ ಊರು ಇನ್ನಷ್ಟು ಆಪ್ತವಾಗುವುದು.

ಈ ಊರಿನ ಹಬ್ಬ, ಜಾತ್ರೆಗಳು ಅದೆಷ್ಟೋ ಮಂದಿಗೆ ಬದುಕಿನ ನೆಲೆ. ಅದು ಮಂಡಕ್ಕಿ ಮಾರುವವನೇ ಇರಲಿ, ಪಾತ್ರೆ ಅಂಗಡಿಯವನೇ ಆಗಲಿ ಇಲ್ಲವೋ ತೊಟ್ಟಿಲು ತಿರುಗಿಸುವವನೇ ಇರಲಿ… ಅಂಗಡಿ ಹಾಕುವ ಪ್ರತಿಯೊಬ್ಬನಿಗೂ ಹಬ್ಬ ದುಡಿಮೆಯ ದಾರಿ. ಅಂಗಡಿ ಹಾಕುವವನಿಗೆ ಮಾರಾಟವಾದರೆ ಹಬ್ಬ, ಊರಿನ ಜನರಿಗೆ ತಮ್ಮ ದುಡಿಮೆಯನ್ನು ವರ್ಷಕ್ಕೊಮ್ಮೆ ಬರುವ ಹಬ್ಬದಲ್ಲಿ ಖರೀದಿಸಿ, ಇನ್ನೊಬ್ಬರ ಬದುಕನ್ನು ಬೆಳಗುವುದರಲ್ಲಿ ಹಬ್ಬ. ಇಬ್ಬರಿಗೂ ಹಬ್ಬವೇ. ಆಯಾಮಗಳು ಬೇರೆ ಅಷ್ಟೇ.

ಖರೀದಿ, ಹಬ್ಬದ ಆಟ, ತಿಂಡಿ, ಮೋಜು – ಮಸ್ತಿ, ಕಿವಿ ಗುಂಯ್ಯ ಎನ್ನುವ ಪೀಪಿ… ಇದೆಲ್ಲದರ ಹೊರತಾಗಿಯೂ ಊರ ಹಬ್ಬಗಳು ಬದುಕಿನ ಭಿನ್ನ, ವಿಭಿನ್ನ ಬಣ್ಣಗಳನ್ನು ತೆರೆದಿಡುತ್ತವೆ. ಇದನ್ನು ನೋಡಿ, ಅರ್ಥೈಸಿಕೊಳ್ಳಲು, ಕಣ್ತುಂಬಿಕೊಳ್ಳಲು ನಾವು ಮನಸ್ಸಿನ ಕಣ್ಣನ್ನು ತೆರೆದು ನೋಡಿ, ಜೀವಿಸಬೇಕು. ಜೀವಿಸಿ, ಆಸ್ವಾದಿಸಬೇಕು. ಬದುಕಿನ ಸತ್ಯತೆಯನ್ನು ಅರಗಿಸಿಕೊಳ್ಳಬೇಕು.

ವಿಧಾತ್ರಿ ಭಟ್‌

ಉಪ್ಪುಂದ

ಟಾಪ್ ನ್ಯೂಸ್

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.