Udayavni Special

ಆ ಸಂತಸದ  ಘಳಿಗೆ ಮರೆಯುವುದುಂಟೇ?

Team Udayavani, Jul 28, 2021, 11:00 AM IST

ಆ ಸಂತಸದ  ಘಳಿಗೆ ಮರೆಯುವುದುಂಟೇ?

ಪ್ರತಿಯೊಂದು ನೆನಪುಗಳು ಇಂದಿಗೂ ಮಾಗದೆ ಹಾಗೆಯೇ ಇದೆ. ಸಮಯ ಎಲ್ಲವನ್ನೂ ಮರುಕಳಿಸುತ್ತದೆ. ಇಂದಿಗೂ ನೆನಪಿನ ಬುತ್ತಿ ಮಾತ್ರ ಅಳಿಯದೆ ಉಳಿದಿದೆ. ಅದುವೇ ಬಾಲ್ಯದ ನೆನಪು. ಮಳೆ ಸುರಿವಾಗಲಂತೂ ಮಳೆಯ ಹನಿಗಳು ಸಹ ಪ್ರತಿಯೊಂದನ್ನು ಕ್ಷಣದ ಸಾಕ್ಷಿಯಾಗಿ ಕರಗಿದ ಮಾಯಾಲೋಕವನ್ನೇ ಸೃಷ್ಟಿಸುತ್ತದೆ. ನನ್ನ ಜೀವನದ ಸುಮಧುರ ನೆನಪೆಂದರೆ ನಮ್ಮ ಅಜ್ಜಿ ಮನೆಯಲ್ಲಿ  ಬಾಲ್ಯವನ್ನು ಕಳೆದ ದಿನಗಳು.

ಮನೆಯ ಕಿಟಕಿ ಹಾರಿ ಮಳೆ, ಚಳಿ ಎನ್ನದೇ ಎಲ್ಲ ಕಡೆಯಲ್ಲೂ ತಿರುಗುವ ಹುಮ್ಮಸ್ಸು. ಬೆಟ್ಟ-ಗುಡ್ಡ, ಕಾಡು-ಮೇಡು ತಿರುಗಾಡಿದ್ದು ಇಂದಿಗೂ ಮಾಸದ ನೆನಪು. ಅಲ್ಲಿ ಸಿಗುವ ಕಾರೇ ಹಣ್ಣು ಕೀಳುವುದಕ್ಕೆ ಹೋಗಿ ಕಾಲು ಜಾರಿ ಬಿದ್ದದ್ದು, ಜಿಂರ್ಜಿಬೆ ಹಿಡಿದು ಬೆಂಕಿ ಪಟ್ಟಣದಲ್ಲಿ ಬಚ್ಚಿಟ್ಟಿದ್ದು, ಚಿಟ್ಟೆ ಹಿಡಿಯಲು ಹೋಗಿ ಬೇಲಿ ಮೇಲೆ ಬಿದ್ದವರನ್ನು ನೋಡಿ ಮಿಕ್ಕವರೆಲ್ಲರೂ ನಕ್ಕಿದ್ದು. ಸೀಮೆಎಣ್ಣೆ ದೀಪದಲ್ಲಿ ಅಕ್ಷರ ಕಲಿತಿದ್ದು. ಮಳೆ ಬಂದಾಗ ಅಂಚಿನಿಂದ ಸೋರುತ್ತಿದ್ದ ನೀರನ್ನು ಸಂಗ್ರಹಿಸುವುದು ಇವೆಲ್ಲ ಸಾಹಸದ ಆಟಗಳಾಗಿದ್ದವು.  ಮಣ್ಣಿನಿಂದ ಆಟದ ಸಾಮಾನು ಮಾಡಿದ್ದು, ಅಜ್ಜಿ ಕೊಡಿಸಿದ ಗೊಂಬೆಗೆ ಸಿಂಗಾರ ಮಾಡಿ ಮದುವೆಯಾಟ ಆಡಿದ್ದು ಕೂಡ ಇನ್ನೂ ಅಚ್ಚಳಿಯದ ನೆನಪು.

ದೇವಸ್ಥಾನಕ್ಕೆ ಪೂಜೆಗೆಂದು ಬೇಗ ಬರಲು ಅಜ್ಜ ಹೇಳಿದ್ದರು. ಆದರೆ ನಾವು ಮರೆತು ಬಿಟ್ಟಿದ್ದೆವು. ಬಳಿಕ ಅಜ್ಜ  ನಮ್ಮನ್ನೇ  ಹುಡುಕಿ ಬರುವಾಗ ಸುಳ್ಳು ಹೇಳಿ ಸಿಕ್ಕಿ ಬಿದ್ದು ಅಜ್ಜಿ  ನನ್ನ ವಾರಗಳ ಕಾಲ ಮಾತಾಡಿರಲಿಲ್ಲ. ನನ್ನ ಬಾಲ್ಯವನ್ನು ಅಜ್ಜಿ ಮನೆಯಲ್ಲಿಯೇ ಕಳೆದಿದ್ದೇನೆ. ಆ ಹಿರಿಯ ಜೀವ ತೋರುವ ಕಾಳಜಿ, ಪ್ರೀತಿ, ಮುದ್ದು, ನಮಗಾಗಿಯೇ ಅಜ್ಜಿ ತಯಾರಿಸುತ್ತಿದ್ದ ಅದೆಷ್ಟೊಂದು ಬಗೆಬಗೆಯ ಸಿಹಿ ತಿನಿಸುಗಳು, ಕರಿದ ತಿಂಡಿಗಳು ರೆಡಿಯಾಗಿ ಡಬ್ಬದೊಳಗೆ ನಮಗಾಗಿಯೇ ಇರುತ್ತಿದ್ದವು. ಅದನ್ನು ನಮ್ಮ ಶಾಲೆ ಮುಗಿದ ಅನಂತರ ನಾವು ಸವಿಯುತ್ತಿದ್ದೆೆವು. ಶಾಲೆಗೆ ರಜೆ ನೀಡಿದ ದಿನ ನಾವೆಲ್ಲರೂ ಸೇರಿ ಹರಿಯುವ ತೊರೆ, ಕೆರೆ, ಗದ್ದೆ ಬದಿ, ಗುಡ್ಡೆ, ಕಾಡು ಮೇಡಿನಲ್ಲಿನ ಮಾವಿನ ಹಣ್ಣು ಕದ್ದು ತಂದು ತಿಂದಿದ್ದು. ನೇರಳೆ ಹಣ್ಣು ಮುಂತಾದುವುಗಳನ್ನು ಆರಿಸುತ್ತಾ, ಕೊಯ್ಯುತ್ತಾ ಬಿಸಿಲನ್ನೂ ಲೆಕ್ಕಿ ಓಡಾಡಿಕೊಂಡು ಇದ್ದೆವು. ನೆಲ್ಲಿಕಾಯಿ ಕೀಳುವುದಕ್ಕೆ ಮರ ಹತ್ತುವುದು ಹೀಗೆ ನಾವು ಕಾಲ ಕಳೆಯುತ್ತಿದ್ದೆವು. ಹೀಗೆ ದಿನದಲ್ಲಿ ಸಮಯ ಕಳೆಯುವುದೇ ಗೊತ್ತಾಗುತ್ತಿರಲಿಲ್ಲ.

ನಮ್ಮದು ಹಳ್ಳಿ ಮನೆಯಾದ ಕಾರಣ ದನಕರು, ಎಮ್ಮೆ ಸಾಕಿ ಅವುಗಳನ್ನು ಮೇಯಿಸಲು ಹೊಲಗಳಿಗೆ ಹೋಗಿ ಮೇಯಿಸಿಕೊಂಡು ಅವು ಮನೆಗೆ ಬರದೇ ಇದ್ದಲ್ಲಿ ಅವುಗಳನ್ನು ಅಟ್ಟಿಸಿಕೊಂಡು ಮನೆಗೆ ಬರುವುದೇ ಒಂದು ದೊಡ್ಡ ಕಥೆಯಾಗುತ್ತಿತ್ತು. ಒಂದು ದಿನ ನಮ್ಮ ಎಮ್ಮೆ ಕಾಣೆಯಾಗಿತ್ತು. ಅದನ್ನು ಹುಡುಕಿಕೊಂಡು ನಾನು ನಮ್ಮ ಅಜ್ಜಿ ಹೊರಟೆವು. ದಾರಿಯಲ್ಲಿ ಎಮ್ಮೆ ಕಾಣಿಸಲೇ ಇಲ್ಲ. ಆತಂಕದಿಂದ ಅಜ್ಜಿ ದಾರಿಯಲ್ಲಿ ಕುಸಿದ್ದು ಬಿದ್ದಳು. ಅಲ್ಲಿ ಸ್ವಲ್ಪ ಸಮಯದವರೆಗೆ ಸುಧಾರಿಸಿಕೊಂಡು ಮುಂದೆ ಸಾಗಿದೆವು ಸ್ವಲ್ಪ ದೂರ ನಡೆದುಕೊಂಡು ಹೋಗುತ್ತಿದ್ದಾಗ  ಅಲ್ಲಿಯೇ ರಾಗಿ ಹೊಲದಲ್ಲಿ ಮೇಯುತ್ತಿರುವುದನ್ನು ಕಂಡೆವು, ಯಾರಾದರೂ ನೋಡಿ ಹೊಲದ ಮಾಲಕರಿಗೆ ಹೇಳಿದರೆ ರಂಪಾಟವೇ ಶುರುವಾದೀತು ಎಂದು ಬೇಗನೆ ಮನೆ ಎಮ್ಮೆ ಹಿಡಿದು ಮನೆಯ ಕಡೆ ಸಾಗಿದೆವು. ಇನ್ನು ಬಾಲ್ಯದಲ್ಲಿ ಮರೆಯದ ನೆನಪೆಂದರೆ ಮಂಗಳವಾರದ ಸಂತೆ. ಸಂತೆಯಲ್ಲಿ ಅಜ್ಜ ತರುತ್ತಿದ್ದ ಬಜ್ಜಿ, ಬೋಂಡಾ, ಕಡಲೆಪುರಿಯ ಸ್ವಾದ ನನ್ನ ನಾಲಿಗೆಯ ಮೇಲೆ ಇನ್ನೂ ಇದೆ. ರುಚಿ ಇನ್ನೂ ಮರೆತಿಲ್ಲ.

ಸವಿತಾ ಜಿ.

ತುಮಕೂರು ವಿ.ವಿ.

ಟಾಪ್ ನ್ಯೂಸ್

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು,  ದೂರು ದಾಖಲು

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು,  ದೂರು ದಾಖಲು

cfghfyhty

ದಲಿತ ಬಾಲಕ ದೇವಸ್ಥಾನ ಪ್ರವೇಶ ಪ್ರಕರಣ |ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಜನತೆ ಪ್ರತಿಜ್ಞೆ 

ghyht

ಅಂಜನಾದ್ರಿ ಮೂಲಸೌಕರ್ಯ ಮರೀಚಿಕೆ

The petrol tanker

ಚಾರ್ಮಾಡಿ ಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ:ಪೆಟ್ರೋಲ್ ಸೋರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ayush-1

ಕೇಂದ್ರ ಆಯುಷ್ ಸಚಿವರಿಂದ ವೆನ್‍ಲಾಕ್ ಆಯುಷ್ ಆಸ್ಪತ್ರೆ ಉದ್ಘಾಟನೆ

ಆಳ್ವಾಸ್‌ ಮಲ್ಲಕಂಬ ತಂಡಕ್ಕೆ ಸಮಗ್ರ ಪ್ರಶಸ್ತಿ :  ರಾಜ್ಯ ಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್‌

ಆಳ್ವಾಸ್‌ ಮಲ್ಲಕಂಬ ತಂಡಕ್ಕೆ ಸಮಗ್ರ ಪ್ರಶಸ್ತಿ :  ರಾಜ್ಯ ಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್‌

ಮೂಡುಬಿದಿರೆ : ರಾಜ್ಯಮಟ್ಟದ ಕವಿಕಾವ್ಯ ಸಂಗಮ; ಪ್ರಶಸ್ತಿ ಪ್ರದಾನ

ಮೂಡುಬಿದಿರೆ : ರಾಜ್ಯಮಟ್ಟದ ಕವಿಕಾವ್ಯ ಸಂಗಮ; ಪ್ರಶಸ್ತಿ ಪ್ರದಾನ

ಕ್ಯಾನ್ಸರ್‌ ರೋಗಿಗಳಿಗೆ 11ರ ಬಾಲೆಯಿಂದ ಕೇಶದಾನ!

ಕ್ಯಾನ್ಸರ್‌ ರೋಗಿಗಳಿಗೆ 11ರ ಬಾಲೆಯಿಂದ ಕೇಶದಾನ!

“ಸಾಗರ ಮಾಲಾದಡಿ ಎನ್‌ಎಂಪಿಟಿ ಸಮಗ್ರ ಅಭಿವೃದ್ಧಿ’ : ಸರ್ಬಾನಂದ ಸೋನೊವಾಲ್‌

“ಸಾಗರ ಮಾಲಾದಡಿ ಎನ್‌ಎಂಪಿಟಿ ಸಮಗ್ರ ಅಭಿವೃದ್ಧಿ’ : ಸರ್ಬಾನಂದ ಸೋನೊವಾಲ್‌

MUST WATCH

udayavani youtube

ವಿಶ್ವಸಂಸ್ಥೆಯಲ್ಲಿ ಪ್ರಧಾನ ಮೋದಿ ಭಾಷಣ

udayavani youtube

ಕೇಂದ್ರ ಆಯುಷ್ ಸಚಿವರಿಂದ ವೆನ್‍ಲಾಕ್ ಆಯುಷ್ ಆಸ್ಪತ್ರೆ ಉದ್ಘಾಟನೆ

udayavani youtube

3 ದಿನಗಳ ಕಾಲ ಶ್ರೀರಂಗಪಟ್ಟಣ ದಸರಾ ಉತ್ಸವ

udayavani youtube

ಬಿಜೆಪಿ ಸೇವೆ ಮತ್ತು ಸಮರ್ಪಣಾ ಕಾರ್ಯದಲ್ಲಿ ತೊಡಗಿಕೊಂಡಿದೆ : ನಾಗರಾಜ ನಾಯ್ಕ

udayavani youtube

ಏಕಕಾಲದಲ್ಲಿ ಎರಡು ಕೈಗಳಲ್ಲಿ ಹಸ್ತಾಕ್ಷರ ಬರೆಯುವ 12ರ ಪೋರಿ

ಹೊಸ ಸೇರ್ಪಡೆ

ಕಾರ್ಕಳ ಬಿಜೆಪಿ ಕಚೇರಿಗೆ ಕೇರಳ ಬಿಜೆಪಿ ವಕ್ತಾರ ಭೇಟಿ

ಕಾರ್ಕಳ ಬಿಜೆಪಿ ಕಚೇರಿಗೆ ಕೇರಳ ಬಿಜೆಪಿ ವಕ್ತಾರ ಭೇಟಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

ಕೋವಿಡ್‌ ಸಂದರ್ಭ ಆಹಾರ ಉತ್ಪನ್ನ ಶೇ. 23ರಷ್ಟು ಹೆಚ್ಚಳ

ಕೋವಿಡ್‌ ಸಂದರ್ಭ ಆಹಾರ ಉತ್ಪನ್ನ ಶೇ. 23ರಷ್ಟು ಹೆಚ್ಚಳ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.