Water: ನೀರು ಭುವನದ ಭಾಗ್ಯ

Team Udayavani, Apr 18, 2024, 3:48 PM IST

16-wtr

ನೀರು ಭಾವನಾತ್ಮಕವಾಗಿ ನಮ್ಮೊಂದಿಗೆ ಬೆರೆತಿರುವ ಸಂಯುಕ್ತ-ಸಾರ್ವತ್ರಿಕ ದ್ರಾವಕ. ನೀರು ನಮ್ಮನ್ನು ಬೆರಗು, ನಲಿವು ಮತ್ತು ಬೆದರಿಸುವ ಪರಿ ವಿಶಿಷ್ಟವಾದದ್ದೇ. ಈ ಮೂರೂ ಕ್ರಿಯೆಗಳಲ್ಲೂ ನೀರು ಬರಿಯ ರಾಸಾಯನಿಕ ಸಂಯುಕ್ತವಾಗುಳಿಯದೇ ಜೀವದ್ರವವಾಗಿ ಜೈವಿಕತೆ-ಭೌತಿಕತೆಯನ್ನು ಪೋಷಿಸಿದೆ.

ಮುಗಿಯದೇ ಇರುವ ಅಪರಿಮಿತ ಸಂಪನ್ಮೂಲಗಳ ಪಟ್ಟಿಯಲ್ಲಿ ಸೇರಿದ್ದ ಜಲಸಂಪನ್ಮೂಲಗಳೆಲ್ಲಾ ಇಂದು ಸುಸ್ಥಿರತೆಗೆ ಒಳಪಡುವ ಪದಾರ್ಥಗಳಾಗಿ ಭಾವಬಂಧನಕ್ಕೆ ಒಳಗಾಗಿವೆ. ದಿನಗಳ ಎಣೆಯಿಲ್ಲದೆಯೇ ನೀರನ್ನು ಸಂಭ್ರಮಿಸಿದ, ಶೋಕಿಸಿದ, ಚಕಿತಗೊಳಿಸಿದ ನಿರೀಕ್ಷಿತ-ಅನಿರೀಕ್ಷಿತ ವಿದ್ಯಮಾನಗಳೆಲ್ಲವನ್ನೂ ಮಾರ್ಚ್‌ 22ಕ್ಕೆ ಮೊಟಕುಗೊಳಿಸಿ ಜಲದಿನವನ್ನು ಆಚರಿಸುವ ಅವಸರದ ಅಧ್ವಾನ ನಮ್ಮದು!!

ಖ್ಯಾತ ಭೂಗೋಳತಜ್ಞ ಡಾ| ಬಿ.ಪಿ. ರಾಧಾಕೃಷ್ಣರು 1967ರಲ್ಲಿ ಹೇಳಿದ್ದರಂತೆ-ಕೊಳವೆ ಬಾವಿಗಳು ಬರಸ್ಥಿತಿಗೆ ವಿಮೆಯಂತೆ ಉಪಯೋಗಿಸಬೇಕು, ನಿರ್ಲಕ್ಷ್ಯದ ದುಡುಕಿನಿಂದಲ್ಲ. 1967ರಲ್ಲಿ ರಾಜ್ಯಾದ್ಯಂತ ಅರವತ್ತು ಸಾವಿರ ಕೊಳವೆಬಾವಿಗಳಿದ್ದರೆ, ಸದ್ಯ 50 ಲಕ್ಷಕ್ಕೂ ಮಿಕ್ಕಿ ಕೊಳವೆಬಾವಿಗಳು ಚಾಲ್ತಿಯಲ್ಲಿದೆ. ಅವುಗಳಲ್ಲಿ ಶೇ.60 ಕೊಳವೆಬಾವಿಗಳು ಕುಡಿಯಲು ಯೋಗ್ಯವಾದ ನೀರನ್ನು ಉಣಿಸುತ್ತಿಲ್ಲ. ಈ ಕೊಳವೆಬಾವಿಗಳು ನೀರಸುಳಿವಿಲ್ಲದ ಜಾಗಗಳಿಗೆ ಪರಿಹಾರವೆಂದು ಭಾವಿಸಿದರೆ, ಇವುಗಳು ಮನುಷ್ಯನ ನಿತ್ಯದ ನೀರ ಅಭ್ಯಾಸಗಳನ್ನೇ ಬದಲಿಸಿವೆ.

ಇದಕ್ಕೆ ದೃಷ್ಟಾಂತ ದಶಕಗಳಿಂದಲೂ ನೀರಾವರಿಗೆ ನೆಚ್ಚಿಕೊಂಡಿದ್ದ ನೀರ ಕಾಲುವೆಗಳನ್ನು ಬಿಟ್ಟು ಕೊಳವೆಬಾವಿಗಳನ್ನು ನೀರಾವರಿಗೆ ಬಳಸಿಕೊಂಡದ್ದು. ಅರುವತ್ತದ ದಶಕದಲ್ಲಿ ಶೇ.1 ರಷ್ಟಿದ್ದ ಅಂತರ್ಜಲಯುತ ನೀರಾವರಿ 2008 ಕ್ಕೆ 60% ತಲುಪಿದೆ.

ಮಿತಿಮೀರಿದ ಭೂಜಲದ ಉಪಯೋಗದಿಂದ 60 % ಕೊಳವೆಬಾವಿಗಳು ಕೇವಲ ಒಂದು ವರುಷದಲ್ಲೇ ನೀರುಣಿಸುವ ಸಾಮರ್ಥ್ಯವನ್ನು ಕಳೆದುಕೊಂಡದ್ದು ಮತ್ತೂ ಶೋಚನೀಯವೇ. ಇನ್ನು ಭಾರತದ ಬಹುತೇಕ ಹಳ್ಳಿಗಳ-ಪುರಪ್ರದೇಶಗಳ ಕುಡಿಯುವ ನೀರಿನ ಪೂರೈಕೆ ಅಂತರ್ಜಲದಿಂದಲೇ. ಜನಕ್ಕೊಂದರಂತೆ ಕೊಳವೆಬಾವಿಗಳನ್ನು ಕೊರೆದು ತಂತ್ರಜ್ಞಾನವನ್ನು ಹೆಚ್ಚಿಸಿಕೊಂಡಿರುವ ನಾವು ಅಂತರ್ಜಲ ಮರುಭರ್ತಿಯಬಗ್ಗೆ ಆಲೋಚಿಸಿದ್ದೇವೆಯೇ? ನದಿಗಳಿಗೆ ಮತ್ತು ಅಂತರ್ಜಲದ ನೀರಿನಾಗರವೇನು? ಮಳೆಯಲ್ಲವೇ ನೀರ ಪೊರೆದವಳು!

ಭೂಮಿಯಲ್ಲಿ ಲಭ್ಯವಿರುವ ನೀರಿನ ಆಕರಗಳು ಹಲವಾರು, ಆದರೆ ಮೂಲ ಮಳೆಯೇ. ಭಾರತವನ್ನೂ ಒಳಗೊಂಡಂತೆ ಉಷ್ಣವಲಯದ ದೇಶಗಳಲ್ಲಿ ಮಳೆಯೇ ಅನೇಕ ಬೇಡಿಕೆಗಳಿಗೆ ಜೀವಾಳ. ದೇಶದಲ್ಲಿ ಬೀಳುವ ಮಳೆಯ 80% ನೈಋತ್ಯ ಮಾನ್ಸೂನಿನಿಂದಾಗುವುದು. ದತ್ತಗಳಾಧಾರದಲ್ಲಿ ನಡೆಸಿದ ಅನೇಕ ಅಧ್ಯಯನಗಳು ಕಳೆದ ಶತಮಾನದ ಮಳೆಯ ಪ್ರವೃತ್ತಿಯ ಬದಲಾವಣೆಗಳನ್ನು ತಿಳಿಸಿವೆ. ದೇಶದ ಭೌಗೋಳಿಕ ಅಳತೆಯಲ್ಲಿ ನಡೆಸಿದ ಅಧ್ಯಯನವೊಂದು 135 ವರ್ಷಗಳ ಮಳೆಯ ಏರಿಳಿತಗಳನ್ನು ಹೇಳುತ್ತದೆ.

ಇದರಂತೆ,ಮಾನ್ಸೂನ್‌ ತಿಂಗಳ ಆಗಸ್ಟ್ ಮಳೆಯು ಏರಿಕೆಯನ್ನು ಕಂಡಿದ್ದರೆ, ಜೂನ್‌, ಜುಲಾಯಿಗಳು ಮಳೆಯ ಇಳಿಕೆಯನ್ನು ಕಂಡಿವೆ. ಸುದೀರ್ಘ‌ಕಾಲಾವಧಿಯಲ್ಲಿ ಮುಂಗಾರಿನ ಮಳೆಯ ಪ್ರಮಾಣ ತುಸು ಕುಸಿದು, ತದನಂತರದ ತಿಂಗಳುಗಳಲ್ಲಿ ಏರಿಕೆಯನ್ನು ಕಂಡಿವೆ. ಬಸಿ ಕ್ಷೇತ್ರಗಳ ಆಧಾರದಲ್ಲಿ ಮಾಡಿದ ಸಂಶೋಧನೆಗಳು ಕರಾವಳಿಯ ಪಶ್ಚಿಮವಾಹಿನೀ ನದಿಗಳ ಕ್ಷೇತ್ರಗಳಲ್ಲಿ ಮಳೆಯ ಇಳಿಕೆಯನ್ನು ವ್ಯಕ್ತಪಡಿಸಿವೆ. ಒಟ್ಟಿನಲ್ಲಿ, ಹವಾಮಾನವನ್ನು ನಿರ್ಧರಿಸುವ ಬಹುಮುಖ್ಯ ಅಂಶ ನೀರು. ನೀರಿನ ಮೂಲ ಮಳೆಯೂ ವಾಯುಗುಣ ಬದಲಾವಣೆಯ ತೆಕ್ಕೆಗೆ ಸಿಲುಕಿದೆ.

ನೀರು ಜೀವ ಚೈತನ್ಯದ ದ್ರವ. ನೀರನ್ನು ಉಳಿಸಿ ಎನ್ನುವುದು ನೀರನ್ನು ಜತನದಿಂದ, ವ್ಯವಸ್ಥಿತವಾಗಿ ಬಳಸಿ ಎಂದಂತೆ. ದೇಶದಲ್ಲಿ ಸುಮಾರು 167 ದಶಲಕ್ಷ ಜನರ ಬೇಡಿಕೆಗಳಿಗೆ ಶುದ್ಧ ನೀರೇ ಸಿಗುತ್ತಿಲ್ಲ.

-ವಿಶ್ವನಾಥ ಭಟ್‌

ಧಾರವಾಡ

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.