ಅಡ್ಕದಕಟ್ಟೆ ಬಳಿ ಡ್ರೈನೇಜ್‌ ಪೈಪ್‌ಲೈನ್‌ ಸೋರಿ 15ಕ್ಕೂ ಅಧಿಕ ಬಾವಿ ನೀರು ಹಾಳು

ಉಡುಪಿ: ಅಡ್ಕದಕಟ್ಟೆ ಮಾರ್ಗದಿಂದ ಮೂಡು ತೋಟ ಮೂಲಕ ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ಟಿಪಿ) ಹಾದು ಹೋಗುವ ಒಳಚರಂಡಿ ಪೈಪ್‌ಲೈನ್‌ ಸ್ಥಳೀಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಮೂಡು ತೋಟದ ಮೂಲಕ ಹಾದು ಹೋಗುವ ಒಳಚರಂಡಿ ಡ್ರೈನೇಜ್‌ ಪೈಪ್‌ ಒಂದು ವರ್ಷದಲ್ಲಿ 13 ಬಾರಿ ಒಡೆದು ಹೋಗಿದೆ. ಸ್ಥಳೀಯರು ನಗರಸಭೆ ಹಾಗೂ ಜನಪ್ರತಿನಿಧಿಗಳಿಗೆ ಈ ಬಗ್ಗೆ ನೀಡಿದರೆ ಕಾಟಾಚಾರಕ್ಕೆ ಬಂದು ಪೈಪ್‌ಲೈನ್‌ ದುರಸ್ತಿ ಮಾಡುತ್ತಿರುವುದರಿಂದ ಲೈನ್‌ ರಿಪೇರಿಯಾದ ಒಂದೇ ವಾರದಲ್ಲಿ ಇನ್ನೊಂದು ಕಡೆ ಒಡೆದು ಹೋಗುತ್ತಿದೆ ಎನ್ನುವ ಆರೋಪವಿದೆ.


ಹೊಸ ಸೇರ್ಪಡೆ