Kaup ಗ್ರಾಹಕರ ಗಮನಕ್ಕೆ! ಕಾಪು ಪೇಟೆ ಮಧ್ಯಾಹ್ನ 1ರ ಬಳಿಕ ಸಂಪೂರ್ಣ ಬಂದ್
Team Udayavani, Aug 6, 2020, 7:53 PM IST
ಕಾಪು: ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್19 ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ನಿಗಧಿತ ಅವಧಿಯ ವ್ಯಾಪಾರ ನಡೆಸಲು ಕಾಪು ಪೇಟೆಯ ವರ್ತಕರು ನಿರ್ಧರಿಸಿದ್ದಾರೆ. ಕಾಪು ಆಸುಪಾಸಿನಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರ ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ವರ್ತಕರು ಮತ್ತು ಪುರಸಭಾ ಸದಸ್ಯರ ಮನವಿಯ ಮೇರೆಗೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲು ಸಮ್ಮತಿ ವ್ಯಕ್ತವಾಗಿದೆ. ಗುರುವಾರ ಈ ಬಗ್ಗೆ ಕಾಪು ಪೇಟೆಯ ವರ್ತಕರು, ಜನಪ್ರತಿನಿಧಿಗಳು ಮತ್ತು ನಾಗರಿಕರು ಜೊತೆ ಸೇರಿ ನಿರ್ಧರಿಸಿದಂತೆ ಆ. 7 ರಿಂದ ಆ. 14ರವರೆಗೆ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರಾ ಕಾರ್ಯ ನಿರ್ವಹಿಸಿ, ಉಳಿದ ಸಮಯಗಳಲ್ಲಿ ಸಂಪೂರ್ಣ ಬಂದ್ ನಡೆಸಲು ನಿರ್ಧರಿಸಲಾಗಿದೆ ಎಂದು ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು ತಿಳಿಸಿದ್ದಾರೆ.