ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟ ಕನ್ನಡಿಗರ ದೇಹಗಳು ಶೀಘ್ರ ಬೆಂಗಳೂರಿಗೆ: ಮುಖ್ಯಮಂತ್ರಿ

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರವಿವಾರ ನಡೆದ ಬಾಂಬ್‌ ದಾಳಿಯಲ್ಲಿ ಮೃತಪಟ್ಟ ಕರ್ನಾಟಕ ಮೂಲದವರ ಶವಗಳನ್ನು ಅತೀ ಶೀಘ್ರವಾಗಿ ತರುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಕಾಪು ಸಮೀಪದ ಮೂಳೂರಿನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ವಿಶ್ರಾಂತಿ ಮತ್ತು ಚಿಕಿತ್ಸೆಗಾಗಿ ಆಗಮಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಘಟನೆಯ ಹಿನ್ನಲೆಯಲ್ಲಿ ತಮ್ಮ ವಿಶ್ರಾಂತಿಯನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸಾಗಲು ನಿರ್ಧರಿಸಿದ್ದಾರೆ. ಮುಂದಿನ 24 ಗಂಟೆಗಳ ಒಳಗಾಗಿ ಮೃತದೇಹಗಳನ್ನು ಏರ್‌ ಕಾರ್ಗೋ ಮೂಲಕ ಶ್ರೀಲಂಕಾದಿಂದ ಬೆಂಗಳೂರಿಗೆ ತರಲು ಪ್ರಯತ್ನ ಸಾಗಿದೆ ಎಂದು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.


ಹೊಸ ಸೇರ್ಪಡೆ