ಗಿನ್ನಿಸ್ ಪುಸ್ತಕ ಸೇರಿದ”ಮೋಚಿ ಮೋ’ ನಾಲಿಗೆ
Team Udayavani, Oct 6, 2017, 5:38 AM IST
ಅತ್ಯಂತ ವಿಶ್ವಾಸಾರ್ಹತೆಯ ಪ್ರಾಣಿ ಎಂದರೆ ನಾಯಿಯೇ. ಅದಕ್ಕೆ ಬೇರೆ ಹೋಲಿಕೆ ಇಲ್ಲ. ಇಲ್ಲಿ ವಿಶೇಷ ಏನಪ್ಪಾ ಎಂದರೆ ನಾಯಿಯ ನಾಲಗೆ. ಅಮೆರಿಕದ ದಕ್ಷಿಣ ಡಕೋಟಾದಲ್ಲಿರುವ ಕಾರ್ಲಾ ರಿಕರ್ಟ್ ಎಂಬುವರ ಮನೆಯಲ್ಲಿರುವ ಬಿಳಿ ಬಣ್ಣ ನಾಯಿ ಹೊಸ ದಾಖಲೆ ಬರೆದಿದೆ. ಮಾತ್ರವಲ್ಲ ಅದು ಗಿನ್ನೆಸ್ ದಾಖಲೆಗೆ ಸೇರಿದೆ. ನೀವು
ನಂಬುವಿರೋ ಬಿಡುವಿರೋ ಗೊತ್ತಿಲ್ಲ ಕಾರ್ಲಾರ ಮನೆಯಲ್ಲಿರುವ ಮೋಚಿ ಮೋ ಎಂಬ ಹೆಸರಿನ ನಾಯಿಯ ನಾಲಗೆ 18.59
ಸೆಮೀ ಇದೆ. ಈ ಬಗ್ಗೆ ಮಾಹಿತಿ ಕೇಳಿ ಗಿನ್ನೆಸ್ ದಾಖಲೆಯ ಅಧಿಕಾರಿಗಳು ನಾಯಿಯ ಮಾಲೀಕರ ಮನೆಗೆ ಧಾವಿಸಿ
ಬಂದು ಪರಿಶೀಲನೆ ನಡೆಸಿ, ವಿಚಾರ ಮನವರಿಕೆ ಮಾಡಿ ಕೊಂಡರು. ಮಾತ್ರವಲ್ಲ, ಮೋಚಿ ನಾಯಿಯ ನಾಲಗೆ ವಿಶ್ವದಲ್ಲೇ ಅತ್ಯಂತ ಉದ್ದವಾದದ್ದು ಎಂದು ಪ್ರಮಾಣ ಪತ್ರ ನೀಡಿಯೇ ಬಿಟ್ಟರು. ದಾಖಲೆಗಳ ಮುಖ್ಯಸ್ಥ ಕ್ರೆಗ್ ಗ್ಲಾಂಡಿ ಅವರಿಗೆ ಅದನ್ನು ನೋಡಿ ಆಶ್ಚರ್ಯ ಪಟ್ಟರಂತೆ. ಎಂಟು ವರ್ಷದ ನಾಯಿಯನ್ನು 2018ರ ಗಿನ್ನಿಸ್ ದಾಖಲೆಗಳ ಪುಸ್ತಕದಲ್ಲಿ ಸೇರಿಸಲು ಬಯಸಿದ್ದಾರಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ