ಬಿಗ್ಬಾಸ್ ಮನೆಯಲ್ಲೇ ಸ್ಪರ್ಧಿಗಳ ಮದುವೆ!
Team Udayavani, Jan 19, 2017, 6:06 AM IST
ಬಿಗ್ಬಾಸ್ ಕಾರ್ಯಕ್ರಮ ಹಿಂದಿಯದ್ದಾಗಲಿ, ಕನ್ನಡದ್ದಾಗಲಿ, ಅಲ್ಲೊಂದು ಗಂಡು ಹೆಣ್ಣಿನ ಜೋಡಿ ಇರುತ್ತದೆ. ಅವರಿಬ್ಬರ ಸಂಬಂಧ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿರುತ್ತದೆ. ಸದ್ಯ ಪ್ರಸಾರವಾಗುತ್ತಿರುವ ಹಿಂದಿ ಬಿಗ್ಬಾಸ್ ಸೀಸನ್ 10ನಲ್ಲೂ ಇಂಥದೊಂದು ಜೋಡಿ ಇತ್ತು. ಅದು ಭೋಜ್ಪುರಿ ನಟಿ ಮೊನಾಲೀಸಾ ಮತ್ತು ಮನು ಪಂಜಾಬಿ.
ಇವರಿಬ್ಬರೂ ಪ್ರೇಮ ಪಕ್ಷಿಗಳೆಂದೇ ವೀಕ್ಷಕರು ತಿಳಿದಿದ್ದರು. ಆದರೆ ವೀಕ್ಷಕರ ಊಹೆಗಳಿಗೂ ಮೀರಿದ ಘಟನೆಯೊಂದು ಜರಗಿದೆ. ಅದು ಮೊನಾಲೀಸಾ ಮದುವೆ! ಆದರೆ ಮದುವೆ ನೋಡಿ ಪ್ರೇಕ್ಷಕರು ದಂಗಾಗಿ ದ್ದಾರೆ. ಕಾರಣ ಆಕೆ ಮದುವೆಯಾಗಿದ್ದು ಆಕೆಯ ಬಾಯ್ ಫ್ರೆಂಡ್ ವಿಕ್ರಾಂತ್ನನ್ನು. ಸಾಂಪ್ರದಾಯಿಕ ಶೈಲಿಯಲ್ಲಿ ಇವರಿಬ್ಬರು ಮನೆಯಲ್ಲೇ ಮದುವೆಯಾಗಿದ್ದಾರೆ.
ವಿಕ್ರಾಂತ್ ಕೂಡ ಹೊಸದರಲ್ಲಿ ಮೋನಾ ಮತ್ತು ಮನು ಹತ್ತಿರವಾಗುತ್ತಿರುವುನ್ನು ಸಹಿಸಲಾರದೇ ಬಿಗ್ಬಾಸ್ ಮನೆಗೇ ನುಗ್ಗಿ ಗಲಾಟ ಮಾಡಿದ್ದ.ಈಗ ಏಕಾಏಕಿ ಮದುವೆಯಾಗಿದ್ದಾನೆ!