ಮದುವೆ ಮನೆಯಿಂದ ಮದುಮಗನ ಬಂಧನ !
Team Udayavani, Dec 3, 2018, 5:24 AM IST
ಮದುವೆ ಸಮಾರಂಭಗಳಿಗೆ ಪೊಲೀಸರು ತನಿಖೆಗೆ ಬರುವುದೇ ಮದುವೆ ಮನೆಯವರಿಗೆ ತೀವ್ರ ಅವಮಾನವಾಗುವಂಥ ವಿಷಯ. ಇನ್ನು ಪೊಲೀಸರು ಮದುವೆ ಸಮಾರಂಭಕ್ಕೆ ನುಗ್ಗಿ ವರನನ್ನು ಮೊಬೈಲ್ ಕದ್ದ ಆರೋಪದ ಮೇಲೆ ಬಂಧಿಸಿ ಕರೆದೊಯ್ಯುವುದು ಎಷ್ಟು ಅವಮಾನದ ವಿಷಯವಾಗಿರಲಿಕ್ಕಿಲ್ಲ? ಇಂಥದ್ದೊಂದು ಘಟನೆ ಮುಂಬೈನಲ್ಲಿ ನಡೆದಿದೆ. ಅಜಯ್ ಸುನಿಲ್ ಧೋಟೆ ಎಂಬಾತನನ್ನು ಪೊಲೀಸರು ಹಸೆಮಣೆಯಿಂದ ಎಬ್ಬಿಸಿ ಕರೆದೊಯ್ದಿದ್ದಾರೆ.
ತಮ್ಮ ಮೊಬೈಲ್ ಫೋನನ್ನು 220 ಸಿಸಿ ಬೈಕೇರಿ ಬಂದ ಇಬ್ಬರು ಪುರುಷರು ದೋಚಿದರು ಎಂದು ಮಂಗಳವಾರ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಜಯ್ ತನ್ನ ಬೈಕ್ನ ನಂಬರ್ ಅನ್ನು ಕಪ್ಪು ಬಣ್ಣದಿಂದ ಮರೆಮಾಚಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಅದು ಅಜಯ್ ಬೈಕ್ ಎಂದು ಪತ್ತೆ ಮಾಡಿದರು. ಅವರಿಬ್ಬರನ್ನು ಬಂಧಿಸಲು ಅವರ ಮನೆಗೆ ತೆರಳಿದ್ದ ಸಂದರ್ಭ ಬಾಂದ್ರಾದಲ್ಲಿ ಅಜಯ್ ಮದುವೆ ಸಮಾರಂಭ ನಡೆಯುತ್ತಿದೆ ಎಂದು ಪೊಲೀಸರಿಗೆ ತಿಳಿಯಿತು. ಸೀದಾ ಅಲ್ಲಿಗೇ ತೆರಳಿದ ಪೊಲೀಸರು ಅಜಯ್ ಮತ್ತು ಮತ್ತೂಬ್ಬ ಆರೋಪಿ ಮಿರ್ಜಾರನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ