20 ಲಕ್ಷ ರೂ.ಟಿಪ್ಸ್ ಕೊಟ್ಟ ರೊನಾಲ್ಡೋ!
Team Udayavani, Jul 20, 2018, 4:14 AM IST
ಹೋಟೆಲ್ ಸಪ್ಲೆಯರ್ಗೆ ನೂರಾರು ರೂಪಾಯಿ ಟಿಪ್ಸ್ ಕೊಡೋದೇ ದೊಡ್ಡ ಸಂಗತಿ. ಇನ್ನು ಲಕ್ಷಗಟ್ಟಲೆ ರೂಪಾಯಿ ಟಿಪ್ಸ್ ಕೊಟ್ಟರೆ..!
ಫುಟ್ಬಾಲ್ ಸೂಪರ್ಸ್ಟಾರ್ ಕ್ರಿಶ್ಚಿಯಾನೋ ರೊನಾಲ್ಡೋ ಇತ್ತೀಚೆಗೆ ಗ್ರೀಸ್ನ ಹೊಟೇಲ್ ಒಂದಕ್ಕೆ ಗರ್ಲ್ಫ್ರೆಂಡ್ ಹಾಗೂ ಕುಟುಂಬದ ಜೊತೆಗೆ ಹೋಗಿದ್ದರಂತೆ. ಅಲ್ಲಿನ ಕೋಸ್ಟಾ ನವರಿನೋ ರೆಸಾರ್ಟ್ಗೆ ತೆರಳಿದ್ದಾಗ ಅಲ್ಲಿನ ಸೇವೆ ಅವರಿಗೆ ಮೆಚ್ಚುಗೆಯಾಗಿದೆ. ಟಿಪ್ಸ್ ಕೊಡುವ ಮನಸು ಮಾಡಿದ್ದಾರೆ. ಆದರೆ ಅವರು ಕೊಟ್ಟ ಟಿಪ್ಸ್ ಸುಮಾರು 20 ಲಕ್ಷ ರೂ. ಈ ಮೊತ್ತದ ಚೆಕ್ ಬರೆದು ಹೊಟೇಲ್ ಮಾಲಕರ ಕೈಗಿಟ್ಟು, ಈ ಹಣವನ್ನು ಹೊಟೇಲ್ನ ಎಲ್ಲ ಉದ್ಯೋಗಿಗಳಿಗೆ ಸಮಾನವಾಗಿ ಹಂಚಿ ಎಂದು ಹೇಳಿ ಹೋಗಿದ್ದಾರೆ. ಈ ಹೊಟೇಲ್ನಲ್ಲಿ ಕೆಲವು ದಿನ ಅವರು ಕಳೆದಿದ್ದು, ಫೋಟೋಗಳು ಕೂಡ ಕೆಲವು ದಿನಗಳಿಂದ ಹರಿದಾಡುತ್ತಿದ್ದವು. ಸದ್ಯ ಇವರು ವಿಶ್ವದಲ್ಲೇ ಅತಿ ಹೆಚ್ಚುಗಳಿಸುವ ಕ್ರೀಡಾ ಸ್ಟಾರ್ ಆಗಿದ್ದಾರೆ.