ಸಿಸಿಟಿವಿ ಕ್ಯಾಮರಾದಿಂದ ತಪ್ಪಿಸಲು ದೆವ್ವದ ವೇಷ ತೊಟ್ಟ
Team Udayavani, Jul 28, 2017, 4:28 AM IST
ಸಿಸಿಟೀವಿಯಲ್ಲಿ ದೆವ್ವ ಸೆರೆಯಾದ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. “ದೆವ್ವಗಳು ಕ್ಯಾಮರಾ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುವುದು’ ಎಂಬ ಮೂಢನಂಬಿಕೆ ನಮ್ಮ ಜನಗಳಲ್ಲಿ ಇರುವ ಕಾರಣ ಅವರು ಇಂಥ ಸುದ್ದಿಗಳನ್ನು ನಂಬುತ್ತಾರೆ. ಜನರಲ್ಲಿರುವ ಇಂಥಾ ನಂಬಿಕೆಗಳ ಲಾಭ ಪಡೆಯುವ ಕಳ್ಳರೆಷ್ಟು ಮಂದಿಯಿದ್ದಾರೋ! ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿ ಸಿಸಿಟೀವಿಯಲ್ಲಿ ಸಿಕ್ಕಿಬೀಳುವುದರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ ದೆವ್ವದ ವೇಷ ಹಾಕಿಕೊಂಡು ಮನೆಯೊಂದಕ್ಕೆ ನುಗ್ಗಿದ್ದನು.
ವಿಕಾರವಾಗಿ ಕಾಣುವಂತೆ ಬಿಳಿ ಬಣ್ಣದ ಬಟ್ಟೆಯನ್ನು ಆತ ಮೈಗೆ ಸುತ್ತಿ ಕೊಂಡಿದ್ದ. ಎಷ್ಟೇ ಆದರೂ ಆತ ಕಳ್ಳನಲ್ಲವೇ, ಆತ ದೆವ್ವದ ವೇಷ ಧರಿಸಿದ್ದರೂ ಪದೇಪದೆ ಸಿಸಿಟೀವಿ ಕ್ಯಾಮರಾಗಳ ಕಡೆಗೆ ಕಣ್ಣು ಹಾಯಿಸುವುದು, ಕ್ಯಾಮರಾದಿಂದ ತಪ್ಪಿಸಿಕೊಳ್ಳುವುದು, ಗೋಡೆಯ ಹಿಂದೆ ಅಡಗಿಕೊಳ್ಳುವುದು
ಮಾಡಿದ್ದಾನೆ. ಆದರೆ ಇಷ್ಟಲ್ಲಾ ಕಸರತ್ತು ಮಾಡಿದರೂ ಆತನಿಗೆ ಮನೆಯಿಂದ ಏನನ್ನೂ ಕದಿಯ ಲಾಗಿಲ್ಲ. ಇಷ್ಟಲ್ಲದೇ ಆತ ಮತ್ತೂಂದು ಎಡವಟ್ಟು ಮಾಡಿದ್ದಾನೆ. ಕ್ಯಾಮರಾವನ್ನು ನೋಡಿಕೊಂದು ಆತ ಬಿಳಿ ವಸ್ತ್ರ ಧರಿಸಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್