ತರಕಾರಿ ಜೊತೆ ಹಾವು ಕತ್ತರಿಸಿ ಪಲ್ಯ ಮಾಡಿ ತಿಂದರು!
Team Udayavani, Jul 29, 2017, 9:52 AM IST
ತರಕಾರಿ ಕತ್ತರಿಸುವಾಗ ಕಣ್ತಪ್ಪಿನಿಂದಾಗಿ ಚಿಕ್ಕ ಕ್ರಿಮಿ, ಹುಳಗಳು ತರಕಾರಿಯ ಜೊತೆ ಸೇರಿ ಹೋಗುವುದುಂಟು. ಆದರೆ ಹಾವಿನ ಮರಿಯನ್ನು ತರಕಾರಿ ಜೊತೆ ಕತ್ತರಿಸಿ ಬೇಯಿಸಿ ತಿಂದ ಘಟನೆಗಳ ಕುರಿತು ಕೇಳಿರುವುದು ಅಪರೂಪವಲ್ಲವೇ? ಅಮ್ಮ ಮಗಳು ತರಕಾರಿ ಜೊತೆ ಹಾವನ್ನೂ ಕತ್ತರಿಸಿ ಪಲ್ಯ ಮಾಡಿ ತಿಂದು ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಫ್ಜಾನ್ ಇಮಾಮ್ ಮತ್ತು ಮಗಳು ಆಮ್ನಾ(15) ಕೋಸನ್ನು ತಂದು ಅದನ್ನು ಕತ್ತರಿಸಿ, ಪಲ್ಯ ಮಾಡಿದ್ದಾರೆ. ಅದರಲ್ಲಿ ವಿಷಕಾರಿ ಹಾವಿನ ಮರಿ ಸೇರಿದ್ದು ಅವರ ಗಮನಕ್ಕೇ ಬಂದಿಲ್ಲ. ಅರ್ಧ ಊಟ ಆದ ನಂತರ ಪಾತ್ರೆಯಲ್ಲಿ ಮಿಕ್ಕಿದ್ದ ಪಲ್ಯದಲ್ಲಿ ಹಾವಿನ ಮರಿಯ ಚೂರುಗಳು ಪತ್ತೆಯಾಗಿವೆ. ಕೂಡಲೇ ಅವರಿಬ್ಬರೂ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅವರಿಬ್ಬರೂ ಆಸ್ಪತ್ರೆಗೆ ಬಂದಾಗ ವಾಂತಿ ಮಾಡಿಕೊಳ್ಳುತ್ತಿದ್ದರು. ಕೂಡಲೇ ಚಿಕಿತ್ಸೆ ನೀಡಲಾಗಿ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರಿಬ್ಬರ ಆರೋಗ್ಯದ ಮೇಲೆ ಈಗಲೂ ನಿಗಾ ವಹಿಸಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ