ಜಪಾನ್ನಲ್ಲಿ ನಾಯಿ ಕಾಟ: 14 ವಿಮಾನಗಳ ಹಾರಾಟ ವಿಳಂಬ!
Team Udayavani, Oct 10, 2017, 7:07 AM IST
ಜಪಾನ್ನ ವಿಮಾನ ನಿಲ್ದಾಣ ಒಂದರಲ್ಲಿ 14 ವಿಮಾನಗಳು ತಡವಾಗಿ ಹಾರಾಟ ಆರಂಭಿಸಿದವು. ಇಷ್ಟೆಲ್ಲ ಫಜೀತಿಗೆ ಒಂದು ನಾಯಿ ಕಾರಣ. ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಸರಕು ವಿಮಾನದಲ್ಲಿದ್ದ ಪೂಡಲ್ ತಳಿಯ ಮುದ್ದು ನಾಯಿಯನ್ನು ಜಪಾನ್ ಏರ್ಲೈನ್ಸ್ ವಿಮಾ
ನಕ್ಕೆ ಸ್ಥಳಾಂತರಿಸುವಾಗ ತಪ್ಪಿಸಿಕೊಂಡಿದೆ. ತನಗೆ ಸಿಕ್ಕ ಸ್ವಾತಂತ್ರ್ಯವನ್ನು ಈ ನಾಯಿ ಬಳಸಿಕೊಳ್ಳದೇ ಇರುತ್ತದೆಯೇ? 40 ನಿಮಿಷಗಳ ಕಾಲ ಯಾರ ಕೈಗೂ ಸಿಗದೇ ವಿಮಾನ ನಿಲ್ದಾಣದ ಹುಲ್ಲುಗಾವಲ ತುಂಬೆಲ್ಲಾ ಓಡಾಡಿದೆ. ಇದಕ್ಕಾಗಿ ನಿಲ್ದಾಣದ ಒಂದು ರನ್ವೇಯನ್ನೇ ಅಧಿಕಾರಿಗಳು
ಮುಚ್ಚಿಸಿದರು. ಇದರಿಂದ 14 ವಿಮಾನಗಳ ಸಂಚಾರ ವಿಳಂಬವಾಯಿತು. ಕಡೆಗೆ ನಾಯಿಯನ್ನು ಹಿಡಿಯಲು ಮಾಲೀಕರೇ ಬರಬೇಕಾಯಿತು.