ಈರುಳ್ಳಿ ಜತೆಗೆ ಆಸೀಸ್ ಸಂಸ್ಥೆಗೆ ಬಂದಿದೆ ಕೋಪ
Team Udayavani, Nov 15, 2018, 4:38 AM IST
ಆಸ್ಟ್ರೇಲಿಯಾದಲ್ಲಿ ಈ ವಾರ ವಿಚಿತ್ರವೊಂದು ನಡೆದಿದೆ.ಅಲ್ಲಿನ ಜನಪ್ರಿಯ ಹಾರ್ಡ್ವೇರ್ ಸಂಸ್ಥೆಗೆ ಈರುಳ್ಳಿಯ ಮೇಲೆ ಯಾಕೋ ಸಿಟ್ಟು ಬಂದಂತೆ ಇದೆ. ತನ್ನ ಸಿಬ್ಬಂದಿಗೆಆದೇಶವೊಂದನ್ನು ಹೊರಡಿಸಿ ಸ್ಯಾಂಡ್ವಿಚ್ ಸೇರಿದಂತೆ ಯಾವುದೇ ತಿನಸಿನಲ್ಲಿ ಈರುಳ್ಳಿ ನೀಡುವುದಿದ್ದರೆ, ಅದನ್ನು ಆಹಾರ ಕೆಳಗೆ ಇರಿಸಿಯೇ ನೀಡಬೇಕು ಎಂದು ಕಟ್ಟಪ್ಪಣೆ ಮಾಡಿದೆ.
ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ನಿಯಮ ಜಾರಿ ಮಾಡುತ್ತಿದ್ದೇವೆ ಎಂದು ಸೂಚನೆಯಲ್ಲಿ
ಹೇಳಿ ಕೊಂಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಯಾಗಿದೆ ಮಾತ್ರವಲ್ಲ, ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಬಳಿಯೂ ಪತ್ರಕರ್ತರು ಪ್ರಶ್ನೆ ಕೇಳುವಂತಾಗಿದೆ.
ಸದ್ಯ ಅವರು ಸಿಂಗಾಪುರದಲ್ಲಿ ನಡೆಯುತ್ತಿರುವ ಆಸಿಯಾನ್ ಮತ್ತು ಪೂರ್ವ ಏಷ್ಯಾ ಸಮ್ಮೇಳನದಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಿದ್ದಾರೆ. ಮಾಧ್ಯಮದವರು ಎಲ್ಲಾ ವಿಚಾರಗಳ ಬಗ್ಗೆಯೂ ಪ್ರಶ್ನೆ ಕೇಳಿದ ಬಳಿಕ ಹಾರ್ಡ್ವೇರ್ ಸಂಸ್ಥೆಯ ನಿರ್ದೇಶನವನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಜಾಣತನದಿಂದಲೇ ಉತ್ತರಿಸಿದ ಆಸೀಸ್ ಪ್ರಧಾನಿ “ನಾನು ಬ್ರೆಡ್ ಮಾತ್ರ ಸಾಸ್ ಬಳಸುತ್ತೇನೆ. ಉಳಿದವಕ್ಕೆ ಬಳಕೆ ಮಾಡುವುದಿಲ್ಲ’ ಎಂದರು.