ಬರೀ ಚಡ್ಡಿಯಲ್ಲೇ ಟೀವಿ ರಾಜಕೀಯ ಚರ್ಚೆ!
Team Udayavani, Aug 7, 2017, 9:43 AM IST
ಟೀವಿ ಚಾನೆಲ್ಗಳಲ್ಲಿ ಕೆಲವೊಮ್ಮೆ ಆಗುವ ಎಡವಟ್ಟುಗಳು ಗೊತ್ತಿರುವುದೇ. ಇನ್ನು ಕೆಲವೊಮ್ಮೆ ಅದರಲ್ಲಿನ ಆ್ಯಂಕರ್ಗಳು ಮೇಲ್ಭಾಗ ಮಾತ್ರ ಸುಂದರವಾಗಿ ಕಾಣುವಂತೆ ಇರುತ್ತಾರೆ ಎನ್ನುವುದು ಬರೀ ಗುಸುಗುಸು ಆಗಿ ಏನೂ ಉಳಿದಿಲ್ಲ. ಕೆಲವೊಮ್ಮೆ ಇದು ನಿಜವೂ ಆಗುವುದಿದೆ. ಸಾಮಾನ್ಯವಾಗಿ ಟೀವಿಗಳಲ್ಲಿ ಸುದ್ದಿ ಓದುವವರ, ಸಂದರ್ಶಿತರ ಮೇಲ್ಭಾಗ ಮಾತ್ರ ಕಾಣಿಸುವುದರಿಂದ ನಿಜಕ್ಕೂ ಅವರು ಹೇಗಿದ್ದಾರೆ ಎನ್ನುವುದು ಗೊತ್ತೇ ಆಗೋದಿಲ್ಲ. ಜೋರ್ಡಾನ್ ರಾಜಕೀಯ ವಿಮರ್ಶಕರೊಬ್ಬರ ವಿಚಾರದಲ್ಲಿ ಇದು ಬಟಾಬಯಲಾಗಿದೆ. ಇಸ್ರೇಲ್ನ ಟೀವಿ ಚಾನೆಲೊಂದರ ಚರ್ಚೆಯಲ್ಲಿ ತಜ್ಞ ಮಜೀದ್ ಆಸ್ಫೋರ್ ಎಂಬುವವರು ಮೇಲ್ಭಾಗ ಕೋಟು, ಟೈನಲ್ಲಿ ಮಿಂಚುತ್ತಿದ್ದರೆ, ಕೆಳಭಾಗದಲ್ಲಿ ಬರೀ ಚಡ್ಡಿಯಲ್ಲಿದ್ದರು! ಇದು ವಿಡಿಯೋದಲ್ಲಿ ಕಾಣಿಸಿಲ್ಲ. ಬದಲಿಗೆ ಅವರ ನಿಜರೂಪವನ್ನು ಪುತ್ರ ಮನಾಫ್ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ. ಇದರಲ್ಲಿ ಸೋಫಾದಲ್ಲಿ ಚಡ್ಡಿಹಾಕಿ ಕೂತ ಮಜೀದ್ ಅವರು ತಲೆದಿಂಬುಗಳ ಮೇಲೆ ಲ್ಯಾಪ್ಟಾಪ್ ಇಟ್ಟು ಟಿಪ್ಟಾಪ್ ಆಗಿ ಕೂತ ಚಿತ್ರವಿದೆ. ಇದೀಗ ವೈರಲ್ ಆಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ