ಒಂದೇ ದಿನ ಹೊಡೀತು ಎರಡು ಲಾಟರಿ!
Team Udayavani, Nov 6, 2017, 6:07 AM IST
ಜೀವನ ಪೂರ್ತಿ ಲಾಟರಿ ಟಿಕೆಟ್ ಖರೀದಿಸುತ್ತಾ, ಬಹುಮಾನ ಬಂದೀತೇ ಅಂತ ಕಾದು ಕೂತ ಕೋಟ್ಯಂತರ ಜನರಿದ್ದಾರೆ. ದೇವರು ಅವರ ಲಾಟರಿ ಸಂಖ್ಯೆಯನ್ನು ನೋಡೇ ಇಲ್ಲ ಎನಿಸುತ್ತದೆ. ಆದರೆ ಅಮೆರಿಕದ ನಾರ್ತ್ ಕೆರೊಲಿನಾದ ಮಹಿಳೆಯೊಬ್ಬಳ ಅದೃಷ್ಟ ಅದೆಂಥ ಅದ್ಭುತವಾಗಿದೆ ಎಂದರೆ ಒಂದೇ ದಿನ ಎರಡೆರಡು ಲಾಟರಿ ಹೊಡೆದಿದೆ! ಕಳೆದ ವಾರ 40 ಲಕ್ಷ ಡಾಲರ್ನ (26 ಕೋಟಿ ರೂ.) ಡೈಮಂಡ್
ಡಾಝರ್ ಲಾಟರಿ ಟಿಕೆಟ್ ಅನ್ನು ಕಿಂಬರ್ಲೆ ಖರೀದಿಸಿದ್ದಳು. ಸೋಮವಾರ ಪ್ರಕಟವಾದ ಫಲಿತಾಂಶದಲ್ಲಿ ಆಕೆ ಖರೀದಿಸಿದ ಟಿಕೆಟ್ಗೆ 10 ಸಾವಿರ ಡಾಲರ್ (6.5 ಲಕ್ಷ ರೂ.) ಬಹುಮಾನ ಬಂದಿತ್ತು. ಆದರೆ ಆಕೆಗೆ 1 ಮಿಲಿಯನ್ ಡಾಲರ್ (6.5 ಕೋಟಿ ರೂ.)ಲಾಟರಿ ಬರಬೇಕು ಎಂದು ಆಸೆ ಇತ್ತು. ಅದೇ ದಿನವೇ ಲಾಟರಿ ಕಚೇರಿಗೆ ತೆರಳಿ ಹಣ ಪಡೆದು ಬಂದಳು. ಆದರೆ ಬರುತ್ತಾ ಮಾರುಕಟ್ಟೆಗೆ ಹೋಗಿ ಮತ್ತೂಂದು ಟಿಕೆಟ್ ತೆಗೆದುಕೊಂಡು ಬಂದಿದ್ದಳು. ಮನೆಗೆ ಬರುತ್ತಿದ್ದ ಹಾಗೆಯೇ ದೇವರು ಕಣ್ಣುಬಿಟ್ಟಿದ್ದ. ಆಕೆಗೆ ಲಾಟರಿ ಕಚೇರಿಯಿಂದ ಕರೆ ಬಂದಿತ್ತು. ಆಗ ಉಂಟಾದ ಖುಷಿಯನ್ನು ಹೇಳಲು ಅಸಾಧ್ಯ ಎಂದು ಮೋರಿಸ್ ಹೇಳುತ್ತಾರೆ. ತೆರಿಗೆಯೆಲ್ಲ ಕಳೆದು 4 ಲಕ್ಷ ಡಾಲರ್ (2.6 ಕೋಟಿ ರೂ.) ಹಣ ಕೈಗೆ ಬಂದಿದೆ.