ಕ್ರಿಸ್ಮಸ್ ಲೈಟ್ ಹಾಳು ಮಾಡಿದ್ದಕ್ಕೆ ಅಳಿಲಿಗೆ ಜೈಲು
Team Udayavani, Dec 5, 2017, 4:37 AM IST
ಜನಸಾಮಾನ್ಯರು ಅಪರಾಧವೆಸಗಿದರೆ ಅವರ ವಿರುದ್ಧ ದೂರು ದಾಖಲಿಸಿ ಪೊಲೀಸರು ಜೈಲಿಗೆ ಕಳುಹಿಸುವುದು ಸಹಜ. ಆದರೆ ಪ್ರಾಣಿಗಳು ಅಪರಾಧವೆಸಗಿದರೆ ಏನು ಮಾಡಬೇಕು ಎಂಬ ಪ್ರಶ್ನೆ ಹಲವು ಬಾರಿ ಎದ್ದಿದೆ. ಹಲವು ಬಾರಿ ಪ್ರಾಣಿಗಳು ಆಸ್ತಿಪಾಸ್ತಿ ಹಾನಿ ಮಾಡಿದಾಗ ಅವುಗಳನ್ನು ದೂರ ಬಿಟ್ಟು ಬರುವುದೂ ಇರುತ್ತವೆ. ಆದರೆ ಅಮೆರಿಕ ನ್ಯೂಜೆರ್ಸಿಯಲ್ಲಿ ಕ್ರಿಸ್ಮಸ್ಗೂ ಮುನ್ನ ಕ್ರಿಸ್ ಮಸ್ ಟ್ರೀಗೆ ಹಾಕಿದ ಲೈಟ್ಗಳನ್ನು ಹಾಳು ಮಾಡಿದ ಅಳಿಲುಗಳನ್ನು ಪೊಲೀಸರು ಹಿಡಿದಿದ್ದಾರೆ. ಬರಿ ಹಿಡಿದಿದ್ದಲ್ಲ, ರೆಡ್ಹ್ಯಾಂಡಾಗಿ ಹಿಡಿದಿದ್ದಾರೆ.
ಈ ಅಳಿಲುಗಳು ಹಗಲು ಹೊತ್ತಿನಲ್ಲಿ ಕ್ರಿಸ್ಮಸ್ ಟ್ರೀಗೆ ಹಾಕಿದ್ದ ಲೈಟ್ಗಳ ವೈರ್ಗಳನ್ನು ಕಡಿಯುತ್ತಿತ್ತು. ಇದರಿಂದ ಪ್ರತಿದಿನವೂ ಲೈಟ್ ಸರಿಪಡಿಸುವ ಸಮಸ್ಯೆ ಎದುರಾಗುತ್ತಿತ್ತು. ಸೀ ಗರ್ಟ್ ಎಂಬ ಜನಪ್ರಿಯ ಕ್ರಿಸ್ಮಸ್ ಟ್ರೀ ಪ್ರದರ್ಶನದಲ್ಲೇ ಈ ಸಮಸ್ಯೆ ಎದುರಾಗಿದ್ದು ಆಯೋಜಕರಿಗೆ ಚಿಂತೆಗೀಡು ಮಾಡಿತ್ತು. ಅಳಿಲುಗಳನ್ನು ಜೈಲಿಗಟ್ಟಿ ಈಗ ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರಂತೆ.