36 ವರ್ಷಗಳ ಹಿಂದೆ ನುಂಗಿದ್ದ ಪೆನ್ಗಳನ್ನು ಹೊರತೆಗೆದ ವೈದ್ಯರು!
Team Udayavani, May 13, 2017, 4:11 AM IST
ಚೀನಾದ 50 ವರ್ಷದ ವ್ಯಕ್ತಿ ವಾಂಗ್ ಎಂಬುವವರ ಕರುಳಿನಿಂದ 2 ಬಾಲ್ ಪೆನ್ಗಳನ್ನು ವೈದ್ಯರು ತೆಗೆದಿದ್ದಾರೆ. ಅವರು ಪೆನ್ನುಗಳನ್ನು ನುಂಗಿದ್ದು 36 ವರ್ಷಗಳ ಕೆಳಗೆ.
14 ವರ್ಷದವರಿದ್ದಾಗ ಸ್ನೇಹಿತರ ಜೊತೆ ಮದ್ಯಪಾನ ಮಾಡುತ್ತಿದ್ದ ವೇಳೆ ಬೆಟ್ನಲ್ಲಿ ಸೋತರಂತೆ. ಅದಕ್ಕೆ ಅವರ ಸ್ನೇಹಿತರು 2 ಬಾಲ್ ಪೆನ್ನುಗಳನ್ನು ತಿನ್ನುವಂತೆ ದಂಡ ವಿಧಿಸಿದ್ದರು. ಕುಡಿದ ಮತ್ತಿನಲ್ಲಿದ್ದ ವಾಂಗ್ ಪೆನ್ನುಗಳನ್ನು ನುಂಗಿದ್ದಾರೆ. ಆ ಪೆನ್ನುಗಳು ಅವರಿಗೆ ಯಾವ ತೊಂದರೆಯನ್ನೂ ನೀಡದ ಕಾರಣ ಅವು ಜೀರ್ಣಗೊಂಡಿವೆ ಎಂದೇ ಭಾವಿಸಿದ್ದರು. ಆದರೆ ಇತ್ತೀಚೆಗೆ ಸ್ಕಾನಿಂಗ್ಗೆ ಒಳಗಾಗಿದ್ದಾಗ 2 ಪೆನ್ನುಗಳು ಇರುವುದು ಪತ್ತೆಯಾಗಿತ್ತು. ಆ ಪೆನ್ನುಗಳು ಇನ್ನೂ ಸುಸ್ಥಿತಿಯಲ್ಲಿವೆಯಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್