ಫಿನ್ಲ್ಯಾಂಡ್ನಲ್ಲೊಂದು ಮಹಿಳೆಯರ ದ್ವೀಪ
Team Udayavani, Feb 18, 2018, 9:23 AM IST
ಒಂದು ಸುಂದರ ದ್ವೀಪ. ಅಲ್ಲಿ ಪುರುಷರೇ ಇಲ್ಲ. ಮಹಿಳೆಯರು ಯೋಗ, ನೃತ್ಯ, ಧ್ಯಾನ, ಪಾರ್ಟಿ ಮಾಡುತ್ತಾ ತಮ್ಮದೇ ಆದ ಲೋಕದಲ್ಲಿ ಸ್ವಚ್ಛಂದವಾಗಿ ಸಮಯ ಕಳೆಯುತ್ತಿರುತ್ತಾರೆ. ಇಂಥದ್ದೊಂದು ದ್ವೀಪವನ್ನು ಮಹಿಳೆಯರು ಊಹಿಸಿಕೊಳ್ಳಿ. ಪುರುಷರಿರದಂಥ ಸ್ಥಳವೂ ಇರುತ್ತದೆಯೇ ಎಂದು ಮೂಗು ಮುರಿಯಬೇಡಿ.
ಈ ರೀತಿಯ ದ್ವೀಪವೊಂದು ಫಿನ್ ನ್ಲಂಡ್ನಲ್ಲಿ ಇದೆ. ಇದರ ಹೆಸರು “ಸುಪರ್ಶಿà ಐಲ್ಯಾಂಡ್’. ಎಲ್ಲಾ ವಯೋಮಾನದ ಮಹಿಳೆಯರು ನೆಮ್ಮದಿಯಾಗಿ ಸಮಯ ಕಳೆಯಲೆಂದೇ ಬಾಲ್ಟಿಕ್ ಸಮುದ್ರದ ಸುಂದರವಾದ ದ್ವೀಪವೊಂದನ್ನು ಕ್ರಿಸ್ಟಿನಾ ರೋತ್ ಎಂಬುವವರು ಮಹಿಳೆಯರ ದ್ವೀಪವನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲಿ ಮಹಿಳೆಯರಿಗೆ ಯೋಗ ಕಲಿಕೆ, ಆರೋಗ್ಯ. ಫಿಟ್ನೆಸ್ ಕುರಿತು ತರಬೇತಿಯನ್ನೂ ನೀಡುತ್ತಾರಂತೆ.