Bihar: ಮನೆಗೆ ಬಂದ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಪ್ರಿಯತಮೆ.!
Team Udayavani, Mar 5, 2024, 2:34 PM IST
ಪಾಟ್ನಾ: ಯುವತಿಯೊಬ್ಬಳು ಪ್ರಿಯಕರನನ್ನು ಮನೆಗೆ ಕರೆದು ಆತನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದಿರುವ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದಿದೆ.
ಪ್ರಿಯತಮೆ ಪ್ರಿಯಕರ ಅನಿಲ್ ಗೊಂಡ್(25) ನನ್ನು ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾಳೆ. ಮನೆಗೆ ಬಂದ ಪ್ರಿಯಕರನ ಮೇಲೆ ಯುವತಿ ಹಲ್ಲೆ ನಡೆಸಿದ್ದು, ಆತನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಿಯಕರನನ್ನು ನೋಡಿ ಆತ ಸತ್ತು ಹೋಗಿದ್ದಾನೆ ಎಂದು ಭಾವಿಸಿ ಯುವತಿ ಅಲ್ಲಿಂದ ಪರಾರಿ ಆಗಿದ್ದಾಳೆ.
ಆದರೆ ತೀವ್ರವಾಗಿ ಗಾಯಗೊಂಡಿದ್ದ ಪ್ರಿಯಕರ ಅಲ್ಲಿಂದ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ, ಬಳಿಕ ವಿಚಾರವನ್ನು ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.
ಅನಿಲ್ ತನ್ನ ಗೆಳತಿಯ ಮನೆಗೆ ಕರೆದ ನಂತರ ದುಮ್ರಾನ್ನಲ್ಲಿರುವ ಮನೆಗೆ ಹೋಗಿದ್ದ. ಈ ವೇಳೆ ಈ ಕೃತ್ಯ ನಡೆದಿದೆ ಎಂದು ಸಹೋದರ ಪ್ರಮೋದ್ ಕುಮಾರ್ ಹೇಳಿದ್ದಾರೆ.
ಸದ್ಯ ಅನಿಲ್ ಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ನಮಗೆ ಮಾಹಿತಿ ದೊರೆತ ತಕ್ಷಣ ನಾವು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಕೃತ್ಯದ ಹಿಂದಿನ ಕಾರಣವೇನು ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಡುಮ್ರಾನ್ ಪೊಲೀಸ್ ಅಧಿಕಾರಿ ಅನಿಶಾ ರಾಣಾ ಹೇಳಿದ್ದಾರೆ.
ಅನಿಲ್ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!