Udayavni Special

ನೆನಪಿರಲಿ..ನಿಮ್ಮನ್ನು ಪ್ರಶ್ನಿಸುವವರು ನೀವೇ ಆಗಬೇಕು..!

ಪ್ರಶ್ನೆಗಳು ನಮ್ಮನ್ನು ಕೇಳಿಕೊಳ್ಳುವುದು ಅದು ನಮ್ಮನ್ನು ನಾವು ಸಮೀಕ್ಷಿಸಿಕೊಳ‍್ಳುವುದಲ್ಲ.

ಶ್ರೀರಾಜ್ ವಕ್ವಾಡಿ, Apr 9, 2021, 10:00 AM IST

Ask Yourself First and Receve the answer and Practice it.

ಸಾಂದರ್ಭಿಕ ಚಿತ್ರ

ಇಂಗ್ಲಿಷ್ ನಲ್ಲಿ ಒಂದು ಮಾತಿದೆ. ‘ಆಸ್ಕ್ ಯುವರ್ ಸೆಲ್ಫ್ ಫಸ್ಟ್, ರಿಸೀವ್ ದಿ ಆನ್ಸರ್, ಆ್ಯಂಡ್ ಪ್ರ್ಯಾಕ್ಟಿಸ್ ಇಟ್, ಯು ವಿಲ್ ಬಿ ಸಕ್ಸಸ್ ಫುಲ್’ ಅಂತ. ಹೌದು. ನಮ್ಮನ್ನು ನಾವು ಪ್ರಶ್ನಿಸಿಕೊಂಡು ಶೋಧಿಸಿಕೊಂಡು ನಾವು ನಮ್ಮಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದರೆ ನಾವು ನಮ್ಮ ಬದುಕಿನಲ್ಲಿ ಏನಾದರೂ ಸಾಧಿಸುವುದಕ್ಕೆ ಸಾಧ್ಯವಿದೆ. ಪ್ರಶ್ನೆಗಳು ಇನ್ನೊಬ್ಬರೊಂದಿಗೆ ತರ್ಕಕ್ಕಾಗಿ ಮಾತ್ರ ಮಾಡಬಹುದಷ್ಟೇ. ಅದು ಯಾವುದೂ ಪ್ರಯೋಜನವಿಲ್ಲದೆ, ಪ್ರಶ್ನೆಯಾಗಿಯೇ ಉಳಿದು ಬಿಡುವ ಖಾಲಿ ವಸ್ತು ಅಥವಾ ವಿಷವಾಗಿ ಬಿಡುತ್ತದೆ ಅಷ್ಟೇ. ಆದರೇ, ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ನಾವು ನಿಜಕ್ಕೂ ಮೇಲ್ಮುಖವಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ.

ನಮ್ಮನ್ನು ನಾವು ಕೇಳಿಕೊಳ್ಳುವ ಪ್ರಶ್ನೆಗಳಿಂದ ನಮಗೆ ಏನಾದರೂ ಪ್ರಯೋಜನವಾಗುತ್ತಿದೆ ಎಂದು ತಿಳಿಯುವುದು ನಾವು ಕೇಳಿಕೊಂಡ ಪ್ರಶ್ನೆಯಿಂದ ದೊರಕಿದ ಉತ್ತರವನ್ನು ಅಭ‍್ಯಾಸ ಮಾಡಿದಾಗ ಮಾತ್ರ. ಇಲ್ಲವೆಂದರೇ, ಎಲ್ಲವೂ ವ್ಯರ್ಥವಾಗಿ ಬಿಡುತ್ತವೆ.

ಪ್ರಶ್ನೆಗಳು ನಮ್ಮನ್ನು ಕೇಳಿಕೊಳ್ಳುವುದು ಅದು ನಮ್ಮನ್ನು ನಾವು ಸಮೀಕ್ಷಿಸಿಕೊಳ‍್ಳುವುದಲ್ಲ. ಅದು ನಮ್ಮನ್ನು ನಾವು ವಿಮರ್ಶಿಸಿಕೊಳ್ಳುವುದಕ್ಕೆ ಹಾಗೂ ಶೋಧಿಸಿಕೊಳ್ಳುದಕ್ಕೆ.

ಪ್ರಶ್ನೆಗಳು ನಾವು ನಮ್ಮನ್ನು ಕೇಳಿಕೊಳ್ಳುವ ಪ್ರಶ್ನೆಗಳು ಸುಪ್ತ ವರ್ತನೆಗಳು ಅಥವಾ ಗುಣಲಕ್ಷಣಗಳನ್ನು ನಿರ್ಧರಿಸಲು ಸಹಾಯ ಮಾಡುವ ಮಾಪಕಗಳನ್ನು ನಿರ್ಮಿಸಲು ನಮಗೆ ಅನುಮತಿಸುತ್ತದೆ. ಆದ್ಯತೆಗಳು, ನಡವಳಿಕೆಗಳು, ಪ್ರವೃತ್ತಿಗಳನ್ನು ಅಳೆಯಲು ಹಾಗೂ ತಿಳಿದುಕೊಳ್ಳಲು ನಮಗೆ ಇದು ಸಹಾಯ ಮಾಡುತ್ತದೆ.

ಬದುಕಿನ ಏರಿಳಿತಗಳ ದಾರಿಯಲ್ಲಿ ಆತ್ಮ ಪರಿಶೀಲನೆ ಬಹಳ ಮುಖ್ಯವಾಗುತ್ತದೆ. ಆತ್ಮ ಪರಿಶೀಲನೆಯಿಂದ ನಮ್ಮ ಆಂತರ್ಯದ ಶುದ್ಧಿಯಾಗುತ್ತದೆ ಎನ್ನುವುದು ಪದಶಃ ಸತ್ಯ. ಜೀವನದಲ್ಲಿ ಆಗಾಗ ಹುಟ್ಟುವ ವಿರುಕ್ತಿಗಳು ನಮ್ಮನ್ನು ನಾವೇನೆಂದು ತಿಳಿದುಕೊಳ್ಳಲು ನಮಗೆ ಪ್ರೇರೇಪಿಸುತ್ತವೆ. ನಾವೇನೆಂದು, ನಮ್ಮ ಆತ್ಮಶಕ್ತಿಯೇನೆಂದು ನಮ್ಮನ್ನು ಪರಿಶೀಲಿಸುವಂತೆ ಮಾಡುತ್ತದೆ.

ನಮ್ಮ ಬಗ್ಗೆ ನಾವು ಪ್ರಶಾಂತವಾಗಿ ಆಲೋಚಿಸಬಹದು. ಆತ್ಮಾವಲೋಕನ ಮಾಡಿಕೊಳ್ಳಬಹುದು. ನಾವು ಮಾಡುವ ಕೆಲಸಗಳನ್ನು ನಮ್ಮ ಪ್ರವರ್ತನಗಳನ್ನು ನಾವೇ ಅಭಿನಂದಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ನಾವು ಮಾಡಿದ ಕೆಲಸಗಳು ನಮಗೆ ಇಷ್ಟವಾಗದೇ ಇರಬಹುದು. ಇವು ಪುನರಾಲೋಚನೆಯಿಂದ , ಮರು ಪ್ರಶ್ನಿಸಿಕೊಳ್ಳುವುದರಿಂದ ನಮ್ಮನ್ನು ನಾವು ನಮ್ಮ ಇರುವಿಕೆಯನ್ನು ಸರಿ ಪಡಿಸಿಕೊಳ್ಳಬಹುದು. ಇವೆಲ್ಲವೂ ನಮ್ಮ ಅಂತರಂಗದೊಳಗೆ ಅಥವಾ ಅಂತರಂಗದೊಂದಿಗೆ ಮಾಡುವ ಪುನರಾಲೋಚನೆ ಅಥವಾ ಮರು ಪ್ರಶ್ನೆಗಳಿಂದ ಸಾಧ್ಯವಾಗುತ್ತದೆ.

ನಮ್ಮಲ್ಲಿನ ಪ್ರಶಾಂತತೆಗೆ ನಮಗೆ ಅಡಚಣೆಯನ್ನು ಮಾಡಲು ನಮ್ಮಲ್ಲಿರುವ ಅರಿಷಡ್ವರ್ಗಗಳು ಅಂದರೇ, ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹ ನಮ್ಮನ್ನು ಒಮ್ಮೊಮ್ಮೆ ಕೆರಳಿಸುತ್ತದೆ. ಕಾಮ ಅಂದರೇ ಕೋರಿಕೆ, ಬಯಕೆ, ಅದು ಲಭಿಸದೆ ಇದ್ದರೇ, ಅದನ್ನು ಹೇಗಾದರೂ ಸಾಧಿಸಬೇಕೆಂಬ ಪ್ರಲೋಭ(ಛಲ), ಅದರ ಮೇಲೆ ಮತ್ತಷ್ಟು ಹೆಚ್ಚಾಗುವ ವ್ಯಾಮೋಹ. ಅದು ಕೂಡ ತೀರದಿದ್ದರೇ ಮದ ಮತ್ಸರ ಇವುಗಳು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದಕ್ಕೂ ಒಮ್ಮೊಮ್ಮೆ ತೊಡಕುಂಟು ಮಾಡುತ್ತವೆ.

ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದು ನಮ್ಮ ಭವಿಷ್ಯಕ್ಕೆ ಅದೊಂದು ಗಟ್ಟಿಯಾದ ಬುನಾದಿ ಹಾಕಿಕೊಡುತ್ತದೆ. ನಾವು ನಾವಾಗಿಯೆ ನಮ್ಮನ್ನು ಕೇಳಿಕೊಳ್ಳುವ ಪ್ರಶ್ನೆಗಳು ಒಮ್ಮೊಮ್ಮೆ ಹಿತವೂ ಎನ್ನಿಸಬಹುದು ಅಥವಾ ದುಃಖವೂ ತರಿಸಬಹುದು. ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ.

ನಾವು ಇನ್ನೊಬ್ಬರೊಂದಿಗೆ ವ್ಯವಹರಿಸುವಾಗ ನಮಗೆ ಪ್ರಶ್ನಿಸಿಕೊಳ್ಳುವುದಕ್ಕೆ ವ್ಯವದಾನವಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸಮಯವೂ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಜಾಗರೂಕತೆಯಿಂದಿರುವುದು ಒಳ್ಳೆಯದು. ಮತ್ತು ಅವರೊಂದಿಗೆ ಮಾತು ಮುಗಿಸಿದ ಮೇಲೆ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ನಿಮಗೆ ಅದು ಮಹತ್ತರವಾದದ್ದನ್ನು ನೀಡುತ್ತದೆ. ನೆನಪಿರಲಿ ನಿಮ್ಮನ್ನು ಶೋಧಿಸುವವರು ನೀವೇ ಆಗುವುದು ನಿಮಗೂ, ನಿಮ್ಮ ವ್ಯಕ್ತಿತ್ವಕ್ಕೂ ಒಳ್ಳೆಯದು.

-ಶ್ರೀರಾಜ್ ವಕ್ವಾಡಿ

ಓದಿ : ಕಾಂಗೋದಲ್ಲಿ ತಾಂಡವಾಡುತ್ತಿರುವ ಹಸಿವು : ವಿಶ್ವ ಸಂಸ್ಥೆಯಿಂದ ಎಚ್ಚರಿಕೆ  

ಟಾಪ್ ನ್ಯೂಸ್

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ghjghjfghjfg

ಲಾಕ್ ಡೌನ್ ಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ: ಜನತೆಗೆ ಸುರೇಶ್ ಕುಮಾರ್ ಮನವಿ

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

ಕೋವಿಡ್ ಸೋಂಕಿಗೆ ಹೆದರಿದ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ!

ಕೋವಿಡ್ ಸೋಂಕಿಗೆ ಹೆದರಿದ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ!

Success is the state or condition of meeting a defined range of expectations. It may be viewed as the opposite of failure

ಮೊದಲ ಅವಕಾಶದಲ್ಲೇ ಆಕಾಶಕ್ಕೆ ಏಣಿ ಇಡುವ ಪ್ರಯತ್ನ ಮೂರ್ಖತನದ ಪರಮಾವಧಿ

fgdfgrtrtr

ಬಿಗ್‍ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ.ನೀಡಿದ ನಟ ಸುದೀಪ್

ಬೈಕ್ ನಿಂದ ಕೆಳಕ್ಕೆ ಬಿದ್ದ ಮಹಿಳೆಗೆ ಆರೈಕೆ ಮಾಡಿ ಮಸ್ಕಿ ಶಾಸಕ ತುರವಿಹಾಳ

ಬೈಕ್ ನಿಂದ ಕೆಳಕ್ಕೆ ಬಿದ್ದ ಮಹಿಳೆಗೆ ಆರೈಕೆ ಮಾಡಿದ ಮಸ್ಕಿ ಶಾಸಕ ತುರವಿಹಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hsegere

ಮನಸೂರೆಗೊಳಿಸುವ ಸುಂದರ ಪ್ರವಾಸಿತಾಣ ‘ಉತ್ಸವ ರಾಕ್ ಗಾರ್ಡನ್’

ಬೌಲಿಂಗ್ ಟು ಬ್ಯಾಟಿಂಗ್: ಬ್ಯಾಟ್ ಹಿಡಿದು ಮಿಂಚಿದ ಬೌಲರ್ ಗಳು…!

ಬೌಲಿಂಗ್ ಟು ಬ್ಯಾಟಿಂಗ್: ಬ್ಯಾಟ್ ಹಿಡಿದು ಮಿಂಚಿದ ಬೌಲರ್ ಗಳು…!

Premenstrual syndrome (PMS) is a combination of emotional, physical, and psychological disturbances

ಹರೆಯದ ಯುವತಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಪಿ ಎಮ್ ಎಸ್..! ಸಂಪೂರ್ಣ ಮಾಹಿತಿ ಇಲ್ಲಿದೆ

Untitled-1

ಬೀಡಿ ಕಟ್ಟಿ ಉಳಿಸಿದ 2 ಲಕ್ಷ ರೂಪಾಯಿಯನ್ನು ಕೋವಿಡ್ ನಿಧಿಗೆ ಕೊಟ್ಟ 63 ರ ವೃದ್ಧ.!

incognito

ಇನ್ ಕಾಗ್ನಿಟೋ ಮೋಡ್: ಇದರ ಉಪಯೋಗ ಹಾಗೂ ಪತ್ತೆದಾರನ ಮುಖದ ಹಿಂದಿರುವ ಸೀಕ್ರೇಟ್ ಗೊತ್ತಾ ?

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

jkhjkuuyi

ಕೆ.ಬಿ. ಶಾಣಪ್ಪ ನಿಧನಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸಂತಾಪ

Disinfectant spray

ಸೋಂಕು ನಿವಾರಕ ಸಿಂಪಡಣೆ

Survey in each village for prevention of infection

ಸೋಂಕು ತಡೆಗೆ ಪ್ರತಿ ಗ್ರಾಮದಲ್ಲಿ ಸಮೀಕ್ಷೆ ನಡೆಸಿ

ghjghjfghjfg

ಲಾಕ್ ಡೌನ್ ಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ: ಜನತೆಗೆ ಸುರೇಶ್ ಕುಮಾರ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.