Udayavni Special

ರಾಜ್ಯ ರಾಜಕಾರಣದಲ್ಲಿ ಸಿಡಿದ ಸಿ.ಡಿಗಳ ಹಿಂದಿದೆ ದೊಡ್ಡ ಕಥೆ…!

ರಾಜ್ಯ ರಾಜಕಾರಣವನ್ನು ಕಾಡಿದ ಸಿ.ಡಿಗಳು...!

Team Udayavani, Mar 4, 2021, 2:47 PM IST

c-d-politics-in-karnataka

ರಾಜ್ಯ ರಾಜಕಾರಣದಲ್ಲಿ ಸಿ.ಡಿ ಸಿಡಿದಿದ್ದು ಇದೇ ಮೊದಲಲ್ಲ. 2006 ರಲ್ಲಿ ಆರಂಭವಾದ ಈ ರಾಜಕೀಯ ವಲಯದ ಹೈಡ್ರಾಮ ಇಂದಿನ ತನಕವೂ ಬಾರಿ ಸದ್ದು ಮಾಡಿದೆ. ರಾಜಕೀಯ ವಲಯದಲ್ಲಿ ಅನೇಕ ತಿರುವುಗಳನ್ನು ಕಂಡುಕೊಂಡಿದೆ. ಅನೇಕ ಹೈವೋಲ್ಟೇಜ್ ರಾಜಕೀಯ ನಾಯಕರ ಬುಡಕ್ಕೆ ಕಿಡಿ ಹೊತ್ತಿಸಿದೆ ಎನ್ನುವುದರಲ್ಲಿ ಏನು ಸಂಶಯ ಬೇಕಾಗಿಲ್ಲ.

ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಈ ಹಿಂದೆ  ಸಿ.ಡಿ ಪ್ರಕರಣಗಳು ಅನೇಕ ಬಾರಿ ಕೇಳಿಬಂದಿದೆ. ಅನೇಕ ರಾಜಕೀಯ ನಾಯಕರ ವೈಯಕ್ತಿಕ ವರ್ಚಸ್ಸಿಗೆ ಕುತ್ತುಂಟು ಮಾಡಿದ್ದಲ್ಲದೇ, ರಾಜಕೀಯ ಭವಿಷ್ಯವನ್ನೇ ಕಿತ್ತುಕೊಂಡಿದೆ.

ಓದಿ : ಒಂದು ವಾರ ಸದನದಿಂದ ಸಂಗಮೇಶ್ ಅಮಾನತು:  ನಾನು ಯಾವುದಕ್ಕೂ ಹೆದರುವುದಿಲ್ಲಎಂದ ಶಾಸಕ

ರಾಜಕೀಯ ವೈರತ್ವಗಳನ್ನು ಸಾಧಿಸಿಕೊಳ್ಳಲು ಈ “ಸಿಡಿ’ ಎನ್ನುವ ಶಬ್ದ ಈಗೀಗ ಒಂದು ಹೊಸ ಅಸ್ತ್ರವಾಗಿ ಬಿಟ್ಟಿದೆ. ಬಹಳ ಪ್ರಮುಖವಾಗಿ ಬಿ ಎಸ್ ವೈ ಮುಖ್ಯಮಂತ್ರಿಯಾಗಿದ್ದಲೇ ಅನೇಕ ಬಾರಿ ಈ ವಿಚಾರ ಗಿರಕಿ ಹೊಡೆಯುತ್ತಲೆ ಇದೆ.

ಒಮ್ಮಿಂದೊಮ್ಮೆಲೆ ಸಿಡಿದುಬಿಡುವ ಈ ಸಿಡಿ ಸ್ಫೋಟದಿಂದ ಚೇತರಿಸಿಕೊಂಡವರು ಕೆಲವೇ ಕೆಲವರು. ಚುನಾವಣೆ, ಬಜೆಟ್ ಸಂದರ್ಭ ಹಾಗೂ ರಾಜಕೀಯ ಬಿಕ್ಕಟ್ಟುಗಳು ಸೃಷ್ಟಿಗೊಂಡಾಗ ಒಂದಿಲ್ಲೊಂದು ಪ್ರಕರಣ ಹೊರಬರುತ್ತದೆ. ಅದು ರಾಜಕೀಯ ಪಡಸಾಲೆಯಲ್ಲಿ ಬಹುದೊಡ್ಡ ಚರ್ಚೆಯನ್ನೇ ಸೃಷ್ಟಿ ಮಾಡಿ ಬಿಡುತ್ತದೆ.

ಯಾವಾಗಲೂ ವಿವಾದದಲ್ಲೆ ಇರುವ ಬಿಜೆಪಿ ಪಕ್ಷದ  ಹಿರಿಯ ನಾಯಕ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ನೇರವಾಗಿ ಸಿ.ಡಿ ಬಗ್ಗೆ ಆರೋಪಿಸಿದ್ದು, ಈಗ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮಹಿಳೆಯೊಂದಿಗಿನ ಅಶ್ಲೀಲ ಸಿ.ಡಿ ಬಿಡುಗಡೆ ಮತ್ತು ಪ್ರಕರಣಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಿಲುಕಿದ್ದು, ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದರಾದರೂ ರಾಜಕೀಯ ವಲಯದಲ್ಲಿ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ರಾಜಕೀಯ ರಂಗದಲ್ಲಿ ಸಿಡಿದ ಸಿ.ಡಿಗಳು..!

ಸಿ.ಡಿ ವಿಚಾರ 2006ರಿಂದಲೂ ರಾಜಕೀಯದಲ್ಲಿ ಒಂದು ಅಸ್ತ್ರವಾಗಿ ಬಳಕೆಯಾಗುತ್ತಿದೆ. ವಿರೋಧಿಗಳು ಎದುರಾಳಿಗಳ ವಿರುದ್ಧ ಪ್ರಯೋಗಿಸುವ ದೊಡ್ಡ ಅಸ್ತ್ರ ಸಿ.ಡಿ.

2006ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಅಕ್ರಮ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ಆ ಸಿ.ಡಿಯ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಅನೇಕ ಬೆಳವಣಿಗೆಗೆ ಕಾರಣವಾಗಿದೆ.

ಮಾಜಿ ಸಚಿವ ಚನ್ನಿಗಪ್ಪ ಗಣಿ ಸಚಿವರಾಗಿದ್ದ ಸಂದರ್ಭದಲ್ಲಿ ಗಣಿ ಉದ್ಯಮಿಗಳಿಂದ ₹150 ಕೋಟಿ ರೂ.ಪಡೆದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ನೀಡಿದ್ದಾರೆ ಎಂಬ ಆರೋಪದ ಸಿ.ಡಿ ಬಿಡುಗಡೆ ಮಾಡಿದ್ದರು. ನಂತರದ ಕೆಲ ತಿಂಗಳು ಇದು ರಾಜ್ಯ ರಾಜಕೀಯದಲ್ಲಿ ಅನೇಕ ತಿರುವುಗಳಿಗೆ ಕಾರಣವಾಗಿತ್ತು. ಚೆನ್ನಿಗಪ್ಪ ಗಣಿ ಉದ್ಯಮಿಗಳ ಜೊತೆ ಕುಳಿತಿರುವ ಒಂದು ಫೋಟೋ ಬಿಡುಗಡೆ ಮಾಡಲಾಗಿತ್ತು. ಇದು ಇಂದಿಗೂ ಕುಮಾರಸ್ವಾಮಿ ಹಾಗೂ ಜನಾರ್ದನರೆಡ್ಡಿ ನಡುವೆ ದೊಡ್ಡ ಬಿರುಕು ಹಾಗೆಯೇ ಉಳಿಯುವ ಹಾಗೆ ಮಾಡಿದೆ.

ಓದಿ : ರಮೇಶ್ ಜಾರಕಿಹೊಳಿ ರಾಜಿನಾಮೆ ಕೊಟ್ಟಾಗ ಕಣ್ಣೀರು ಹಾಕಿದ್ದೆ : ರೇಣುಕಾಚಾರ್ಯ

2008 ರಲ್ಲಿ ಮೊದಲ ಬಾರಿ ಬಿಜೆಪಿ ರಾಜ್ಯದ ಅಧಿಕಾರವನ್ನು ಹಿಡಿದಾಗ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ತಮ್ಮ ತವರು ಜಿಲ್ಲೆಯ ಸಂಪುಟದ ಸಹೋದ್ಯೋಗಿ ಹರತಾಳು ಹಾಲಪ್ಪ ರಾಸಲೀಲೆ ಆರೋಪಕ್ಕೆ ಸಿಲುಕಿದ ಪ್ರಕರಣ ರಾಜಕೀಯದಲ್ಲಿ ಯಡಿಯೂರಪ್ಪನವರ ವರ್ಚಸ್ಸಿಗೆ ಧಕ್ಕೆ ತಂದಿತ್ತು. ಹಾಲಪ್ಪ ತಮ್ಮ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಿಲುಕಿಕೊಂಡಿದ್ದರು. ಇಲ್ಲಿಂದ ಯಡಿಯೂರಪ್ಪನವರನ್ನು ಅಂಟಿಕೊಂಡ ಸಿ.ಡಿ ರಗಳೆ ಇಂದಿನ ತನಕವೂ ಹೋಗಿಲ್ಲ.

2009 ರ ನವೆಂಬರ್ ನಲ್ಲಿ ತಮ್ಮ ಪತ್ನಿಯ ಮೇಲೆ ಸಚಿವ ಹಾಲಪ್ಪ ಅತ್ಯಾಚಾರ ಮಾಡಿದ್ದಾರೆ ಎಂದು ಹಾಲಪ್ಪರ ಸ್ನೇಹಿತ ವೆಂಕಟೇಶ ಮೂರ್ತಿ 2010 ರ ಮೇ ತಿಂಗಳಿನಲ್ಲಿ ದೂರು ಸಲ್ಲಿಕೆ ಮಾಡಿದ್ದರು. ಆದರೆ 2017ರಲ್ಲಿ ಹಾಲಪ್ಪಗೆ ಈ ಕೇಸ್​​ನಲ್ಲಿ ಕ್ಲೀನ್​ ಚಿಟ್​ ಸಿಕ್ಕಿತ್ತು. ಈ ಆರೋಪದಿಂದಾಗಿ ಯಡಿಯೂರಪ್ಪನವರ ತವರೂರಿನ ಸಂಪುಟ ಸದಸ್ಯರಾಗಿದ್ದ ಹಾಲಪ್ಪ ಸ್ವಲ್ಪ ಸಮಯದ ತನಕ ರಾಜಕೀಯದಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಬರುತ್ತದೆ.ರಾಜ್ಯ ರಾಜಕಾರಣದ ಆಡಳಿತ ವ್ಯವಸ್ಥೆಯಲ್ಲಿ ಮುನ್ನೆಲೆಯಲ್ಲಿರಬೇಕಾಗಿದ್ದ ಹಾಲಪ್ಪ ಈಗ ಹಿಂದೆ ಸರಿದಿದ್ದಾರೆ.

ಸದನದಲ್ಲಿ ಸವದಿ ನೀಲಿ ಚಿತ್ರ ವಿಕ್ಷಣೆ :

2012ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸದನದಲ್ಲಿ ನೀಲಿಚಿತ್ರ ವೀಕ್ಷಿಸಿ ಹಾಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿವಾದಕ್ಕೊಳಗಾಗಿದ್ದರು. ಈ ವಿಚಾರವೂ ಕೂಡ ಬಿಜೆಪಿಗೆ ರಾಜಕೀಯವಾಗಿ ಧಕ್ಕೆ ತಂದಿತ್ತು. ಈಗ ರಾಜ್ಯ ರಾಜಕೀಯದ ಆಡಳಿತದಲ್ಲಿ ಉಪ ಮುಖ್ಯ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಸಚಿವನಲ್ಲದವನೊಬ್ಬನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕಾಗಿಯೂ ರಾಜ್ಯ ಬಿಜೆಪಿ ಪ್ರತಿಪಕ್ಷಗಳ ಟೀಕೆಗೂ ಮೂಲ ವಸ್ತುವಾಯಿತು.

ಓದಿ : ಭಾರತದಲ್ಲಿ ಡಿಜಿಟಲ್ ಹೆಜ್ಜೆಗುರುತನ್ನು ಇನ್ನಷ್ಟು ವಿಸ್ತರಿಸಲು ಸಿದ್ಧರಿದ್ದೇವೆ : ಅಂಬಾನಿ

2014 ರಲ್ಲಿ ಮೈಸೂರು ಭಾಗದಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಎಸ್ ಎ ರಾಮದಾಸ್ ಹಾಘೂ ಪ್ರೇಮ ಕುಮಾರಿ ಎಂಬವರ ನಡುವೆ ನಡೆದ ಸಂಭಾಷಣೆಯೊಂದರ ಸಿ.ಡಿ ಬಿಡುಗಡೆಯಾಗಿತ್ತು. ಈ ಸಿ.ಡಿ ಪ್ರಕರಣ ರಾಮದಾಸ್ ಅವರ ರಾಜಕೀಯ ವರ್ಚಸ್ಸಿಗೆ ಮುಳುವಾಗಬಹುದು ಎಂದು ಹಲವರು ನಿರಿಕ್ಷಿಸಿದ್ದರು. ಆದರೇ, ರಾಮ್ ದಾಸ್ ಗೆ ಅಷ್ಟೊಂದು ಮಟ್ಟದಲ್ಲಿ ಈ ಪ್ರಕರಣ ಅವರಿಗೆ ಮುಳುವಾಗಿರಲಿಲ್ಲ.

ಸಿದ್ದರಾಮಯ್ಯ ಸರ್ಕಾರವನ್ನೂ ಕಾಡಿದ ಕಾ’ಮೇಟಿ’ ರಾಸಲೀಲೆ:

ಈ ಹಿಂದೆ ಐದು ವರ್ಷದ ಆಡಳಿತ ಪೂರ್ಣಗೊಳಿಸಿದ್ದ ಸಿದ್ದರಾಮಯ್ಯ ಸಂಪುಟದಲ್ಲೂ ಇಂತಹದ್ದೇ ರಾಸಲೀಲೆ ವೀಡಿಯೊ ಬಹಿರಂಗವಾಗಿತ್ತು, ವರ್ಗಾವಣೆ ಬೇಡಿಕೆ ಇಟ್ಟುಕೊಂಡು ಬಂದಿದ್ದ ಮಹಿಳೆಯೊಬ್ಬರನ್ನು ಸಚಿವ ಹೆಚ್.ವೈ ಮೇಟಿ ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಹೇಳಲಾದ ಅಶ್ಲೀಲ ವೀಡಿಯೋವನ್ನು ಸಚಿವರ ಗನ್ ಮ್ಯಾನ್ ಸೆರೆ ಹಿಡಿದಿದ್ದರು. ನಂತರ ಆ ರಾಸಲೀಲೆ ವೀಡಿಯೊ ಬಹಿರಂಗವಾಗುತ್ತಿದ್ದಂತೆ ಸಚಿವ ಸ್ಥಾನಕ್ಕೆ ಮೇಟಿ ರಾಜೀನಾಮೆ ನೀಡುವಂತಾಯ್ತು. ಕಾಂಗ್ರೆಸ್ ​​​ನ ಮಾಜಿ ಸಚಿವ ಎಚ್​​ ವೈ ಮೇಟಿ ಅವರ ಭವಿಷ್ಯವನ್ನು ಸಿ.ಡಿ ನುಂಗಿ ಹಾಕಿದೆ. 2016ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಸಿ.ಡಿಯಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾಜಿ ಸಚಿವರಿದ್ದ ದೃಶ್ಯ ದೊಡ್ಡ ಸಂಚಲನ ಮೂಡಿಸಿತ್ತು. ಇದರಿಂದಾಗಿ ಸಚಿವ ಸ್ಥಾನ ಕಳೆದುಕೊಂಡ ಮೇಟಿ 2018ರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಸೋಲುಂಡರು. ಈ ಸಿ.ಡಿ ಬಹುತೇಕ ಇವರ ರಾಜಕೀಯ ಬದುಕನ್ನು ಅಂತ್ಯಗೊಳಿಸಿದೆ.

ಓದಿ : ತಾಯಿಯಾಗುವ ಖುಷಿಯಲ್ಲಿ ಗಾಯಕಿ ಶ್ರೇಯಾ ಘೋಷಾಲ್

2018 ರಲ್ಲಿ ಈಶ್ವರಪ್ಪ ಆಪ್ತ ಸಹಾಯಕ ವಿನಯ್​ ಅವರನ್ನು ಯಡಿಯೂರಪ್ಪ ಆಪ್ತ ಸಹಾಯಕ ಎಂ.ಆರ್.ಸಂತೋಷ್ ಅಪಹರಣ ಮಾಡಿದ್ದರು. ಈ ಸಂಬಂಧ ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಬಳಿ ಇರುವ ಮಾಹಿತಿಯನ್ನು ಕಾಂಗ್ರೆಸ್ ಹಿರಿಯ ನಾಯಕ, ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಡೆದುಕೊಂಡಿದ್ದರು. ಸಿ.ಡಿ ವಿಚಾರಕ್ಕಾಗಿ ಅಪಹರಣ ನಡೆದಿದೆ ಎಂದು ಸಹ ಅವರು ಆರೋಪಿಸಿದ್ದರು.

2019ರಲ್ಲಿ ಆಪರೇಷನ್ ಕಮಲಕ್ಕೆ ಮುಂದಾದ ಬಿ.ಎಸ್.ಯಡಿಯೂರಪ್ಪ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣಗೌಡಗೆ ಆಮೀಷವೊಡ್ಡಿದ ಎರಡು ಕ್ಲಿಪ್ ಬಿಡುಗಡೆಯಾಗಿತ್ತು. ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ಮೇರೆಗೆ ಶರಣಗೌಡ ಅವರೇ ₹25 ಕೋಟಿ ನೀಡುವ ಆಮೀಷದ ಆಡಿಯೋ ಬಿಡುಗಡೆ ಮಾಡಿದ್ದರು.

ಅರವಿಂದ ಲಿಂಬಾವಳಿ ವಿರುದ್ಧವೂ ದೊಡ್ಡ ಆರೋಪ ಕೇಳಿಬಂದಿತ್ತು. ಮಹದೇವಪುರ ಶಾಸಕರಾಗಿದ್ದ ಹಾಲಿ ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಕೂಡ ಒಂದು ಅಶ್ಲೀಲ ಸಿ.ಡಿ ಬಿಡುಗಡೆಯಾಗಿತ್ತು. ಈ ಸಿ.ಡಿ ಪ್ರಕರಣ ಲಿಂಬಾವಳಿಯ ರಾಜಕೀಯ ಓಟಕ್ಕೆ ಬ್ರೇಕ್ ಹಾಕಿತ್ತು, ಒಂದಿಷ್ಟು ತಿಂಗಳು ಸಚಿವ ಸ್ಥಾನ ಸಿಗದಂತೆ ತಡೆದಿತ್ತು. ಅರವಿಂದ ಲಿಂಬಾವಳಿ ರಾಜಕೀಯ ಬದುಕಿಗೆ ಇದು ದೊಡ್ಡ ಧಕ್ಕೆ ಉಂಟು ಮಾಡದಿದ್ದರೂ ಅವರ ರಾಜಕೀಯ ವರ್ಚಸ್ಸಿಗೆ ತೀರ್ವ ಮುಜುಗರವನ್ನುಂಟುಮಾಡಿತ್ತು.

ಓದಿ : ವಿಧಾನಮಂಡಲ ಅಧಿವೇಶನದಲ್ಲಿ ಅಂಗಿ ಬಿಚ್ಚಿದ ಶಾಸಕ ಸಂಗಮೇಶ್! ಕಿಡಿಕಾರಿದ ಸ್ಪೀಕರ್

ಈಗ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿದೆ. ಇದು ಬರುವ ಬಜೆಟ್ ಗೂ ಕೂಡ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಿದೆ.  ಕ್ಷಣ ಕ್ಷಣಕ್ಕೂ ಹೊಸ ತಿರುವು ಕಂಡುಕೊಳ್ಳುತ್ತಿರುವ ಸಚಿವ ಜಾರಕಿಹೊಳಿ ಅವರ ಪ್ರಕರಣ ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆ ಎಂದು ಕಾದುನೋಡಬೇಕಾಗಿದೆ.

 

ಟಾಪ್ ನ್ಯೂಸ್

ಎವರೆಸ್ಟ್‌ ತಲುಪಿದ ಸೋಂಕು; ಪರ್ವತಾರೋಹಿಗೂ ಕೋವಿಡ್ ಪಾಸಿಟಿವ್‌

ಎವರೆಸ್ಟ್‌ ತಲುಪಿದ ಸೋಂಕು; ಪರ್ವತಾರೋಹಿಗೂ ಕೋವಿಡ್ ಪಾಸಿಟಿವ್‌

ಸರಕಾರಿ ಬಸ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು, ಮಹಿಳೆಗೆ ಗಂಭೀರ ಗಾಯ

ಸರಕಾರಿ ಬಸ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸಾವು, ಮಹಿಳೆಗೆ ಗಂಭೀರ ಗಾಯ

ಬೆಳ್ತಂಗಡಿ ಬಾಲಕನ ಅಪಹರಣ ಪ್ರಕರಣ: ಆರೋಪಿಗಳಿಬ್ಬರಿಗೆ ಜಾಮೀನು ಮಂಜೂರು

ಬೆಳ್ತಂಗಡಿ ಬಾಲಕನ ಅಪಹರಣ ಪ್ರಕರಣ: ಆರೋಪಿಗಳಿಬ್ಬರಿಗೆ ಜಾಮೀನು ಮಂಜೂರು

ವೀಕೆಂಡ್ ಕರ್ಫ್ಯೂ : ಶನಿವಾರ, ಭಾನುವಾರ ಮೆಟ್ರೋ ಸಂಚಾರ ಬಂದ್‌

ವೀಕೆಂಡ್ ಕರ್ಫ್ಯೂ : ಶನಿವಾರ, ಭಾನುವಾರ ಮೆಟ್ರೋ ಸಂಚಾರ ಬಂದ್‌

ವೀಕೆಂಡ್‌ ಕರ್ಫ್ಯೂ: ಉಡುಪಿ ಜಿಲ್ಲೆಯಾದ್ಯಂತ ಏನಿದೆ? ಏನಿಲ್ಲ?

ವೀಕೆಂಡ್‌ ಕರ್ಫ್ಯೂ: ಉಡುಪಿ ಜಿಲ್ಲೆಯಾದ್ಯಂತ ಏನಿದೆ? ಏನಿಲ್ಲ?

ಮನಬಗವ್ದಗಹ

ಮಾಸ್ಕ್ ಖರೀದಿಸಲು ಹಣವಿಲ್ಲ : ಹಕ್ಕಿಯ ಗೂಡನ್ನೇ ಮಾಸ್ಕ್ ಮಾಡಿಕೊಂಡ ತಾತ.!

ಕೋವಿಡ್ 19: ಝೈಡಸ್ ಕಂಪನಿಯ ವಿರಾಫಿನ್ ತುರ್ತು ಬಳಕೆಗೆ ಡಿಜಿಸಿಐ ಅನುಮತಿ

ಕೋವಿಡ್ 19: ಝೈಡಸ್ ಕಂಪನಿಯ ವಿರಾಫಿನ್ ತುರ್ತು ಬಳಕೆಗೆ ಡಿಜಿಸಿಐ ಅನುಮತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

devdutt padikkal

ಕೇರಳ ಮೂಲದವನಾದರೂ ಕರ್ನಾಟಕದಲ್ಲಿ ಮಿಂಚುತ್ತಿರುವ ನೂತನ ಕ್ರಶ್ ದೇವದತ್ತ್ ಪಡಿಕ್ಕಲ್

Mother and Child Relation Should be lovely, not like foreign culture

ಇರಬೇಕು ಅಮ್ಮ, ಮಗು ಕೃಷ್ಣ ಯಶೋದೆಯರಂತೆ..! ‘ಪಕ್ಕಾ ಫಾರಿನ್ ಕಲ್ಚರ್’ ಅನ್ನಿಸುವಂತಲ್ಲ..!

whatsapp-pink

ವಾಟ್ಸಾಪ್ ಪಿಂಕ್ ಹೆಸರಿನಲ್ಲಿ ದಾಳಿಯಿಟ್ಟ ಹ್ಯಾಕರ್ಸ್: ನೀವು ಲಿಂಕ್ ಕ್ಲಿಕ್ ಮಾಡಿದ್ದೀರಾ ?

ನ್ಗಗದಸ಻

ಬೇಸಿಗೆಯಲ್ಲಿ ನಿಮ್ಮ ಗಡ್ಡಗಳನ್ನು ಹೀಗೆ ಆರೈಕೆ ಮಾಡಿದರೆ ಉತ್ತಮ

tourisum place in shivamogga

ಕೈಚಪ್ಪಾಳೆ ತಟ್ಟಿದರೆ ಗುಳ್ಳೆಗಳು ಏಳುವ ಗೌರಿಕೆರೆ! ಏನಿದರ ವಿಶೇಷತೆ?

MUST WATCH

udayavani youtube

ವರವಾಗಿದ್ದ Mask ಶಾಪವಾಯಿತೇ!?

udayavani youtube

ಕೋವಿಡ್ ಸಂಕಷ್ಟ: 2 ತಿಂಗಳು 5ಕೆಜಿ ಉಚಿತ ಪಡಿತರ ವಿತರಣೆ

udayavani youtube

ಮುಂದಿನ 15 ದಿನಗಳವರೆಗೆ ಎಲ್ಲವನ್ನೂ ಸಮರ್ಪಕವಾಗಿ ಎದುರಿಸಲು ದ.ಕ ಜಿಲ್ಲಾಡಳಿತ ಸಿದ್ಧ: DC

udayavani youtube

ಬೈಕ್ ಗೆ ನಾಯಿ ಕಟ್ಟಿ ರಾಕ್ಷಸೀಯ ಕೃತ್ಯ ಮೆರೆದಿದ್ದ ಆರೋಪಿ ಬಂಧನ

udayavani youtube

ಸಾಲಿಗ್ರಾಮ ಪಟ್ಟಣ ಪಂಚಾಯತ್ ಡಂಪಿಂಗ್‌ಯಾರ್ಡ್ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ

ಹೊಸ ಸೇರ್ಪಡೆ

ಎವರೆಸ್ಟ್‌ ತಲುಪಿದ ಸೋಂಕು; ಪರ್ವತಾರೋಹಿಗೂ ಕೋವಿಡ್ ಪಾಸಿಟಿವ್‌

ಎವರೆಸ್ಟ್‌ ತಲುಪಿದ ಸೋಂಕು; ಪರ್ವತಾರೋಹಿಗೂ ಕೋವಿಡ್ ಪಾಸಿಟಿವ್‌

ಜಹಗ್ಗ್ಗ್ಗ್ಗ

ಕೆವಿಜಿ ಅಧಿಕಾರಿ ವರ್ಗಾವಣೆ ರದ್ದತಿಗೆ ಮನವಿ

ಕಜಹಗರ

ಸರ್ಕಾರಿ ನೌಕರರಿಗೆ ಮಾಸ್ಕ್ ಕಡ್ಡಾಯ : ಡಿಸಿ

ಗ್ದಸ

ಡಾ| ಅಂಬೇಡ್ಕರ್ ಚಿಂತನೆ ಪಾಲಿಸಿ : ಮಹಾರಾಜನವರ

23-16

ಕೊರೊನಾ ಸೋಂಕು ನಿಯಂತ್ರಣಕ್ಕೆ ಸಹಕರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.