ನೂರಾರು ಜನರ ಜೀವ ಉಳಿಸಿದ “ಕಾಲೇಜು ವಿದ್ಯಾರ್ಥಿಗಳ ಬ್ಲಡ್ ಬ್ಯಾಂಕ್”

ಈ ಸ್ಟಾರ್ಟಪ್‌ ಆಗಲೇ 18,000 ಅಧಿಕೃತ ರಕ್ತದಾನಿಗಳನ್ನು ಹೊಂದಿದೆ.

Team Udayavani, Jan 7, 2022, 12:48 PM IST

ನೂರಾರು ಜನರ ಜೀವ ಉಳಿಸಿದ “ಕಾಲೇಜು ವಿದ್ಯಾರ್ಥಿಗಳ ಬ್ಲಡ್ ಬ್ಯಾಂಕ್”

ದೇಶದಲ್ಲಿ ಕೋವಿಡ್ ಅಲೆಗಳ ಮಧ್ಯೆ ತತ್‌ಕ್ಷಣ ರಕ್ತದಾನಿಗಳು ಬೇಕೆಂದರೆ ಪರದಾಡುವ ಪರಿಸ್ಥಿತಿ ಉಂಟಾಗಿದ್ದನ್ನು ನೆನಪಿಸಿಕೊಳ್ಳಿ. ಕೋವಿಡ್ ಹಿನ್ನೆಲೆ ಯಾವುದೇ ಬ್ಲಡ್‌ ಬ್ಯಾಂಕ್‌ಗೆ ಹೋದರೂ ಸ್ಟಾಕ್‌ ಇಲ್ಲ. ಒಂದು ವೇಳೆ ನಮ್ಮ ಪರಿಚಯಸ್ಥರು, ಸ್ನೇಹಿತರ ಪೈಕಿ ನಮಗೆ ಬೇಕಾದ ಮಾದರಿಯ ರಕ್ತ ಹೊಂದಿದವರಿದ್ದರೂ ದಾನ ಮಾಡಲು ಹಿಂsದೆಮುಂದೆ ನೋಡುವ ಕಾಲ. ಈ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಚೆನ್ನೈಯಲ್ಲಿ ಇಬ್ಬರು ಯುವಕರು ಸೇರಿ ನಗರದ ರಕ್ತದ ಆವಶ್ಯಕತೆಯನ್ನು ನೀಗಿಸಲು ಬೋಲ್ಡ್ ಇನ್‌ (www.bold.in) ಎಂಬ ಸ್ಟಾರ್ಟಪ್‌ ಆರಂಭಿಸಿದ್ದು, ನಗರದ ನೂರಾರು ಮಂದಿಗೆ ಸಹಾಯಕವಾಗಿದೆ.

ಸ್ನೇಹಿತರಾದ ವರುಣ್‌ ನಾಯರ್‌ ಮತ್ತು ಆದಿತ್ಯ ವಿಕ್ರಮ್‌ ಅವರ ಈ ಸ್ಟಾರ್ಟ್‌ಪ್‌ ಜುಲೈ 11ರಿಂದ ಕಾರ್ಯಾರಂಭಿಸಿದ್ದು, ಇದನ್ನು ಕಾಲೇಜು ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ಆರಂಭವಾದ ಈ ಸ್ಟಾರ್ಟಪ್‌ ಆಗಲೇ 18,000 ಅಧಿಕೃತ ರಕ್ತದಾನಿಗಳನ್ನು ಹೊಂದಿದೆ. ಈ ವರೆಗೆ ಸುಮಾರು 160ಕ್ಕೂ ಅಧಿಕ ಮಂದಿಗೆ ಕಾಲೇಜು ಯುವಕರ ಈ ಹೊಸ ಆಲೋಚನೆ ಮರುಜೀವ ನೀಡಿದೆ. ಈ ವೆಬ್‌ ಸೈಟ್‌ನಲ್ಲಿ ಪ್ರದೇಶದ ಪಿನ್‌ ಕೋಡ್‌ ಹಾಕುವ ಮೂಲಕ ಪ್ರದೇಶದ ರಕ್ತದಾನಿಗಳ ದೂರವಾಣಿ ಸಂಖ್ಯೆಯನ್ನು ಪಡೆಯಬಹುದು.

 ಆರಂಭವಾಗಿದ್ದು ಹೇಗೆ

ಕೋವಿಡ್ ಎರಡನೇ ಅಲೆಯ ಸಂದರ್ಭ ರಕ್ತದ ಆವಶ್ಯಕತೆ ಅಧಿಕವಾಗಿ ಕಂಡುಬಂದಿದ್ದು, ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ರಕ್ತ ಬೇಕಾಗಿದೆ ಎಂಬಿತ್ಯಾದಿ ಪೋಸ್ಟರ್ ಗಳು ಹರಿದಾಡುತ್ತಿದ್ದವು. ಇವನ್ನು ನೋಡಿದ ಬಳಿಕ ತಮ್ಮ ಊರಿನಲ್ಲಿ ಸುಲಭವಾಗಿ ರಕ್ತದಾನಿಗಳನ್ನು ಪತ್ತೆಹಚ್ಚಲು ಈ ಬೋಲ್ಡ್. ಇನ್‌ ಅನ್ನು ಆರಂಭಿಸಲಾಯಿತು ಎನ್ನುತ್ತಾರೆ ಈ ಸ್ಟಾರ್ಟಪ್‌ನ ಸ್ಥಾಪಕರಲ್ಲಿ ಒಬ್ಬರಾದ ಮೆಡಿಕಲ್‌ ಎಂಜಿನಿಯರಿಂಗ್‌ ಪದವೀಧರ ವರುಣ್‌ ನಾಯರ್‌.

ತನ್ನ ಸಂಬಂಧಿಕರೊಬ್ಬರಿಗೆ ರಕ್ತದ ಆವಶ್ಯಕತೆಯಿದ್ದಾಗ ಕೋವಿಡ್ ಹಿನ್ನೆಲೆ ರಕ್ತದಾನಿಗಳನ್ನು ಪಡೆಯಲು ತಾನು ಪಟ್ಟ ಕಷ್ಟದಿಂದ ಇದು ಆರಂಭವಾಯಿತು. ಕೋವಿಡ್‌ ಸಂದರ್ಭದಲ್ಲಿ ಜನರಲ್ಲಿ ರಕ್ತದಾನಿಗಳನ್ನು ಎಲ್ಲಿ ಹುಡುಕುವುದು ಎಂಬ ಚಿಂತೆ ಕಾಡಿತ್ತು. ಈಗಾಗಲೇ ಈ ಕುರಿತಂತೆ ಅನೇಕ ವೆಬ್‌ ಸೈಟ್‌ಗಳಿದ್ದರೂ, ಅದರಲ್ಲಿರುವ ಮಾಹಿತಿಗಳು ಅನಧಿಕೃತವಾಗಿರುವುದರಿಂದ ಚಿಂತೆಗೀಡುಮಾಡುತ್ತಿತ್ತು. ಈ ರೀತಿಯ ಸಮಸ್ಯೆಗಳಿಂದ ಜನರ ಅಮೂಲ್ಯ ಸಮಯ ಹಾಳಾಗುತ್ತಿತ್ತು. ಒಂದು ವೇಳೆ ದಾನಿಗಳು ಲಭ್ಯವಾದರೂ ಕೋವಿಡ್ ಹಿನ್ನೆಲೆ ಸಂಚಾರ ನಿರ್ಬಂಧ ಇವೆಲ್ಲವನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು ಎನ್ನುತ್ತಾರೆ ಅವರು.

ತನ್ನ ಮತ್ತು ಜನರ ಕಷ್ಟವನ್ನು ನೋಡಿದ್ದ ಅವರು ನಗರದ ಜನರಿಗೆ ತಮ್ಮ ಆಸುಪಾಸಿನಲ್ಲಿರುವ ಅಧಿಕೃತ ದಾನಿಗಳನ್ನು ತಲುಪಲು ಸುಲಭವಾಗಲು ವೆಬ್‌ ಸೈಟ್‌ ಅನ್ನು ಆರಂಭಿಸುವ ಚಿಂತನೆ ನಡೆಸುತ್ತಾರೆ. ತನಗೆ ಕೋಡಿಂಗ್‌ ಗೊತ್ತಿಲ್ಲದ ಹಿನ್ನೆಲೆ ಸುಮಾರು 128 ಗಂಟೆಗಳ ಕಲಿಕೆಯಲ್ಲಿ ಜಾವಾ, ಪೈತಾನ್‌ ಪ್ರೊಗ್ರಾಮಿಂಗ್‌ ಲ್ಯಾಂಗ್ವೇಜ್‌ ಕಲಿತು ವೆಬ್‌ ಸೈಟ್‌ ರಚಿಸಿದ್ದಾರೆ ಅವರು. ಈ ಸಂದರ್ಭದಲ್ಲಿ ಅವರ ಸಹಾಯಕ್ಕೆ ಬಂದ ಕಂಪ್ಯೂರ್ಟ ಸೈನ್ಸ್ ಎಂಜಿನಿಯರಿಂಗ್‌ ಕಲಿಯುತ್ತಿರುವ ಸ್ನೇಹಿತ ಆದಿತ್ಯ ವಿಕ್ರಮ್‌ ಅವರು ವೆಬ್‌ ಸೈಟ್‌ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವಂತೆ ಮಾಡುವಲ್ಲಿ ಕೈಜೋಡಿಸಿದ್ದರು.

ಮೊದಮೊದಲು ವೆಬ್‌ಸೈಟ್‌ನಲ್ಲಿರುವ ಮಾಹಿತಿಗಳು ಅಧಿಕೃತವಾಗಿರುವಂತೆ ನೋಡಿಕೊಳ್ಳಲು ಎಲ್ಲ ನೋಂದಣಿ ಮಾಡಿಕೊಂಡಿದ್ದ ದಾನಿಗಳಿಗೆ ಕರೆ ಮಾಡಿ ಖಚಿತ ಪಡಿಸಿಕೊಳ್ಳುತ್ತಿದ್ದರು. ಬಳಿಕ ಈ ಕೆಲಸ ಸುಲಭ ಮಾಡಲು ಸಾಫ್ಟ್ ವೇರ್ ಕಂಡುಹಿಡಿದಿದ್ದಾರೆ. ಸದ್ಯ ಈ ವೆಬ್‌ಸೈಟ್‌ನಲ್ಲಿ ನಗರದ ಸುಮಾರು 4,000 ರಕ್ತದಾನಿಗಳು ನೋಂದಣಿ ಮಾಡಿಕೊಂಡಿದ್ದಾರೆ.

 ಬೆಳಗ್ಗೆ ಕಾಲೇಜು ರಾತ್ರಿ ಕೆಲಸ

ಸದ್ಯ ಈ ತಂಡದಲ್ಲಿ ಸುಮಾರು 30 ಮಂದಿ ಕಾಲೇಜು ವಿದ್ಯಾರ್ಥಿಗಳಿದ್ದು, ಪ್ರತಿದಿನ ಕಾಲೇಜು ಮುಗಿದ ಬಳಿಕ ರಾತ್ರಿ ಸುಮಾರು 2-3 ಗಂಟೆಗಳ ಕಾಲ ಕೆಲಸಮಾಡಿ ವೆಬ್‌ಸೈಟ್‌ನನ್ನು ಸಕ್ರಿಯವಾಗಿಡಲಾಗಿದೆ ಎನ್ನುತ್ತಾರೆ ಸಹಸಂಸ್ಥಾಪಕ ಆದಿತ್ಯ ವಿಕ್ರಮ್ ತಂಡ ಇನ್‌ಸ್ಟಾಗ್ರಾಮ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳ ಮೂಲಕ ದಾನಿಗಳು ಮತ್ತು ರಕ್ತದ ಆವಶ್ಯಕತೆ ಇರುವವರನ್ನು ತಲುಪುತ್ತಿದೆ. ಸದ್ಯ ಈ ವೆಬ್‌ ಸೈಟ್‌ ತಮಿಳುನಾಡು ವ್ಯಾಪ್ತಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲಾಗುವುದು ಎಂದವರು ಹೇಳಿದ್ದಾರೆ.

*ಜಯಶಂಕರ್

ಟಾಪ್ ನ್ಯೂಸ್

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

1dsadsa

ಗೋವಾ :ಮಹಿಳಾ ಸಬಲೀಕರಣಕ್ಕಾಗಿ ಕಣದಿಂದ ಹಿಂದೆ ಸರಿದ ಮಾಜಿ ಸಿಎಂ ಫಲೈರೊ

6arrest

ಕುಣಿಗಲ್: ಕತ್ತು ಸೀಳಿ ಹತ್ಯೆ; ಆರೋಪಿಗಳಿಬ್ಬರ ಬಂಧನ

ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16

ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16

ICC U-19 World Cup: Afghanistan beat Sri Lanka

ಲಂಕಾಗೆ ಶಾಕ್ ನೀಡಿದ ಅಫ್ಘಾನ್ ಹುಡುಗರು: ಸೆಮಿ ಫೈನಲ್ ತಲುಪಿದ ಅಫ್ಘಾನ್ ಅಂಡರ್ 19 ತಂಡ

ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

28-1

ಕಾರು-ಬೈಕ್ ಢಿಕ್ಕಿ: ಓರ್ವ ಸಾವು, ಇಬ್ಬರು ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!

ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!

h gygghjklm

ಹೀಗೊಂದು ಮೊಬೈಲ್ ಮಾರ್ಚ್ಯುರಿ !

ಚಾರಣ ಪ್ರಿಯರ ನೆಚ್ಚಿನ ತಾಣ ಕುಮಾರ ಪರ್ವತ…

ಚಾರಣ ಪ್ರಿಯರ ನೆಚ್ಚಿನ ತಾಣ ಕುಮಾರ ಪರ್ವತ…

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಹೊಟೇಲಿಗನ ಪ್ರಾಕ್ಟಿಕಲ್‌ ವೇದಾಂತ

ಹೊಟೇಲಿಗನ ಪ್ರಾಕ್ಟಿಕಲ್‌ ವೇದಾಂತ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ

1dsadsa

ಗೋವಾ :ಮಹಿಳಾ ಸಬಲೀಕರಣಕ್ಕಾಗಿ ಕಣದಿಂದ ಹಿಂದೆ ಸರಿದ ಮಾಜಿ ಸಿಎಂ ಫಲೈರೊ

vವಿಧಾನ ಪರಿಷತ್ ಸದಸ್ಯರಾಗಿ ಸೂರಜ್ ರೇವಣ್ಣ ಪ್ರಮಾಣವಚನ

ವಿಧಾನ ಪರಿಷತ್ ಸದಸ್ಯರಾಗಿ ಸೂರಜ್ ರೇವಣ್ಣ ಪ್ರಮಾಣವಚನ

6arrest

ಕುಣಿಗಲ್: ಕತ್ತು ಸೀಳಿ ಹತ್ಯೆ; ಆರೋಪಿಗಳಿಬ್ಬರ ಬಂಧನ

5power

ಪಂಪ್‌ಸೆಟ್‌ಗೆ ತ್ರಿಫೇಸ್‌ ವಿದ್ಯುತ್‌ ನೀಡಲು ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.