Udayavni Special

ಸತತ ಪ್ರಯತ್ನದ ಮೂಲಕ ಅಟೋಮೊಬೈಲ್ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಛಲದಂಕಮಲ್ಲ ಹೋಂಡಾ !


Team Udayavani, May 12, 2021, 8:00 AM IST

honda

ಕೆಲವರು ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸುತ್ತಲೇ ಅದ್ಭುತ ಪ್ರಗತಿಯನ್ನು ಸಾಧಿಸುತ್ತಾರೆ. ಯಶಸ್ವಿ ವ್ಯಕ್ತಿ ಹತ್ತು ಬಾರಿ ವಿಫಲನಾದರೇ ಹನ್ನೊಂದನೇ ಭಾರೀ ಯಶಸ್ಸನ್ನು ಸಾಧಿಸುತ್ತಾನೆ. ಇನ್ನೂ ಕೆಲವರು ಮೂರು-ನಾಲ್ಕು  ಭಾರೀ ಯಶಸ್ಸು ಪಡೆಯಲು ಪ್ರಯತ್ನಿಸಿ ಕೈಚೆಲ್ಲುತ್ತಾರೆ.

ಜಗದ್ವಿಖ್ಯಾತ ಹೋಂಡಾ ಅಟೋಮೊಬೈಲ್ ಸಾಮ್ರಾಜ್ಯದ ಸ್ಥಾಪಕ ಸೋಯಿಚಿರೋ ಹೋಂಡಾ. ಇಂದು ಹೋಂಡಾ ಅಂದರೇ ಸಾಮಾನ್ಯ ಜನರಿಗೂ ಪರಿಚಿತ. ಈ ಕಂಪೆನಿಯ ಕಾರು, ಬೈಕ್ ಎಲ್ಲವೂ ಜನರ ಮನಗೆದ್ದಿದೆ. ಈ ಸಂಸ್ಥೆ ಬೆಳೆಸಲು ಸೋಯಿಚಿರೋ ಪಟ್ಟ ಶ್ರಮ ಅಷ್ಟಿಸ್ಟಲ್ಲ. ಈತ ಕೆಳಮಧ್ಯಮವರ್ಗದಲ್ಲಿ 1906 ನವೆಂಬರ್ 17 ರಂದು ಜಪಾನ್ ನಲ್ಲಿ ಹುಟ್ಟಿದ.

ಈತನಿಗೆ ದಿನಕ್ಕೆ ಎರಡು ಹೊತ್ತು ಊಟ ಮಾತ್ರ ಸಿಗುತ್ತಿತ್ತು. ಆದರೇ ಚಿಕ್ಕವಯಸ್ಸಿನಿಂದಲೂ ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂಬ ತುಡಿತ, ಆದಮ್ಯ ಬಯಕೆ ಹೋಂಡಾಗಿತ್ತು.   ಆ ಕಾರಣದಿಂದಲೇ ಬಾಲ್ಯದಿಂದಲೇ ಯಂತ್ರೋಪಕರಣಗಳಲ್ಲಿ ಆಸಕ್ತಿ ಕಂಡುಕೊಂಡು ಇಂಜಿನಿಯರಿಂಗ್ ಕಾಲೇಜು ಸೇರಿದ. ಆಗಲೇ  ವಾಹನಗಳಿಗೆ ಪಿಸ್ಟನ್  ರಿಂಗ್ ಗಳನ್ನು ತಯಾರಿಸುವ ಐಡಿಯಾ ಆತನಿಗೆ ಹೊಳೆಯಿತು. ಕಾಲೇಜಿನ ವರ್ಕ್ ಶಾಫ್ ನಲ್ಲಿ  ಹಗಲು ರಾತ್ರಿ ಶ್ರಮಪಟ್ಟ. ಕೆಲವು ದಿನಗಳು ಅಲ್ಲೇ ನಿದ್ದೆ ಮಾಡಿರುವ ಉದಾಹರಣೆಗಳಿವೆ.

ಒಂದು ಅದ್ಭುತವಾದ ಡಿಸೈನ್ ತಯಾರಿಸಿ ಟಯೋಟ ಕಂಪೆನಿಗೆ ಮಾರುತ್ತೇನೆಂಬ ಬಲವಾದ ನಂಬಿಕೆ ಆತನಿಗಿತ್ತು. ಆಗಲೇ ಆತನ ವಯಸ್ಸು 20 ಆಗಿದ್ದರಿಂದ ಮದುವೆಯೂ  ನಡೆದುಹೋಯಿತು. ಪಿಸ್ಟನ್ ರಿಂಗ್  ತಯಾರಿಕೆಗೆ ಹಣದ ಕೊರತೆ ಎದುರಾದಾಗ ಹೆಂಡತಿಯ ಒಡವೆಯನ್ನು ಅಡವಿಟ್ಟ. ಹಲವು ಅಡೆತಡೆಗಳ ನಂತರ ಕೊನೆಗೂ ಅದನ್ನು ಸಿದ್ದಮಾಡಿ ಟಯೋಟಾ ಕಂಪೆನಿಗೆ ಕೊಂಡೋಯ್ದಾಗ. ಈ ಅದ್ಭುತ ಡಿಸೈನ್  ಅನ್ನು ಟಯೋಟ ಕಂಪೆನಿ ತಮ್ಮ ಗುಣಮಟ್ಟಕ್ಕೆ ತಕ್ಕಂತೆ ಇಲ್ಲವೆಂದು  ತಿರಸ್ಕರಿಸಿತು. ಹೋಂಡಾ ನಿರಾಸೆಯಿಂದ ತನ್ನ ವರ್ಕ್ ಶಾಪ್ ಗೆ  ಹಿಂದಿರುಗಿದಾಗ ಅಲ್ಲಿದ್ದ ಇತರ ಇಂಜಿನಿಯರ್ ಗಳು ನಿಮಗೆ ಮೊದಲೇ ಹೇಳಿದ್ದೆವು, ಇದೆಲ್ಲಾ ಆಗದ ಮಾತು ಎಂದು ನಗಲಾರಂಭಿಸುತ್ತಾರೆ. ಆದರೇ  ಹೊಂಡಾ ಮಾತ್ರ  ಮಂದಹಾಸ ಬೀರಿದ.

 

ಛಲಬಿಡದ ಹೋಂಡಾ ಮತ್ತೆ ಹೊಸ ಡಿಸೈನ್ ಒಂದನ್ನು  ತಯಾರಿಸಲು ಮುಂದಾದ. ಸುಮಾರು ಎರಡು ವರ್ಷದ ಪರಿಶ್ರಮದ ನಂತರ ಮತ್ತೊಂದು ಪಿಸ್ಟನ್ ರಿಂಗ್ ತಯಾರಿಸಿ  ಟಯೋಟಾ ಕಂಪೆನಿಯ ಕದತಟ್ಟಿದ. ಈ ಭಾರೀ ಟಯೋಟ ಕಂಪೆನಿ ಆ ಡಿಸೈನ್ ಕಂಡು ಸಂತೋಷಗೊಂಡು ಪಿಸ್ಟನ್ ರಿಂಗ್ ತಯಾರಿಸಲು ಆತನಿಗೆ ಕಾರ್ಖಾನೆಯನ್ನು ಆರಂಭಿಸಲು ಹಣವನ್ನು ಒದಗಿಸಿತು, ಟಯೋಟ ಕಂಪೆನಿಯ ಈ ಪ್ರೋತ್ಸಾಹದಿಂದ ಸಂತುಷ್ಟನಾದ ಹೋಂಡಾ ಫ್ಯಾಕ್ಟರಿಯನ್ನು ಎತ್ತರಕ್ಕೇರಿಸಲು ಮುಂದಾದ. ಈ ಸಮಯದಲ್ಲೆ ಜಪಾನ್ ನ ವಿವಿಧ ನಗರಗಳಿಗೆ ಭೂಕಂಪ ಅಪ್ಪಳಿಸಿತ್ತು. ಹೊಂಡಾ ಕಟ್ಟಿದ್ದ ಕಾರ್ಖಾನೆಯೂ ಧರೆಗುರುಳಿತ್ತು.

ಆತನ ಸಿಬ್ಬಂದಿ ಇದರಿಂದ ತೀವ್ರ ವಿಚಲಿತವಾದರೂ ಹೋಂಡಾ ಮಾತ್ರ ಸಂತಸದಿಂದಲೇ ಆದದ್ದಾಯಿತು ಮತ್ತೆ ಕಟ್ಟೋಣವೆಂದು ಕಾರ್ಖಾನೆ ನಿರ್ಮಾಣ ಕಾರ್ಯ ಆರಂಭಿಸಿದ. ಅದರ ಕೆಲಸಗಳು ಭರದಿಂದ ಸಾಗುತ್ತಿದ್ದವು. ಆದರೇ ಅದು ಪೂರ್ಣವಾಗುವ ಮೊದಲೇ ಜಪಾನ್ ಎರಡನೇ ಮಹಾಯುದ್ದವನ್ನು ಕಂಡಿತ್ತು. ಆ ಸಮಯದಲ್ಲಿ ದೇಶದಾದ್ಯಂತ ಸಿಮೆಂಟ್ ಪೂರೈಕೆ ಸ್ಥಗಿತಗೊಂಡಿತ್ತು. ಆಗಲೇ ಹೊಂಡಾ ಮತ್ತು ಆತನ ತಂಡ ಸಿಮೆಂಟ್  ತಯಾರಿಸುವ ಹೊಸ ವಿಧಾನವನ್ನು ಕಂಡುಹಿಡಿದರು. ಈ ರೀತಿಯಾಗಿ ಕಾರ್ಖಾನೆ ನಿರ್ಮಾಣವನ್ನು ಪೂರ್ಣಗೊಳಿಸಿದ.

ಆದರೆ ಅದೊಂದು ದಿನ ಅಮೆರಿಕಾ ಪಡೆಗಳು ಜಪಾನ್ ನ ಮೇಲೆ ವಾಯುದಾಳಿಯನ್ನು ನಡೆಸಿದಾಗ ಹೊಂಡಾ ಕಟ್ಟಿದ ಕಾರ್ಖಾನೆಯೂ ಬಾಂಬ್ ದಾಳಿಗೆ  ತುತ್ತಾಯಿತು.  ಮಾತ್ರವಲ್ಲದೆ ಜಪಾನ್ ನಲ್ಲಿ  ಸ್ಟೀಲ್ ನ ತೀವ್ರ  ಅಭಾವ ಉಂಟಾಯಿತು. ಆಗಲೂ ಹೊಂಡಾ ಕೈಚೆಲ್ಲಲಿಲ್ಲ. ಆ ಸಮಯದಲ್ಲಿ ಅಮೆರಿಕಾ ಯುದ್ಧವಿಮಾನಗಳೆಲ್ಲವೂ ಇಂಧನ ಟ್ಯಾಂಕ್ ಗಳನ್ನು ಹೊತ್ತು ಹಾರುತ್ತಿದ್ದವು. ಈ ಟ್ಯಾಂಕ್ ಗಳಲ್ಲಿನ ಇಂಧನವನ್ನು ಬಳಸಿದ ನಂತರ ಆಗಸದಿಂದ ಅದನ್ನು ಕಳಗೆ ಬಿಸಾಡಲಾಗುತ್ತಿತ್ತು. ಇದರಿಂದ ವಿಮಾನದ ಭಾರ ಕಡಿಮೆಯಾಗುತ್ತಿದ್ದವು. ಈ ರೀತಿ ಅಮೆರಿಕಾ ಯುದ್ಧವಿಮಾನಗಳು ಜಪಾನ್ ನ ತುಂಬೆಲ್ಲಾ ಸ್ಟೀಲ್ ಟ್ಯಾಂಕ್ ಗಳನ್ನು ಎಸೆದುಹೋಗುತ್ತಿದ್ದವು. ಇದನ್ನೆ  ಹೊಂಡಾ  ಸಂಗ್ರಹಿಸಿ ಅವುಗಳನ್ನು ಕರಗಿಸಿ ತನ್ನ ಫ್ಯಾಕ್ಟರಿ ನಿರ್ಮಾಣಕ್ಕೆ  ಬಳಸಿಕೊಂಡ. ಈ ಸ್ಟೀಲ್ ಟ್ಯಾಂಕ್ ಗಳನ್ನು ಹೊಂಡಾ ಅಮೆರಿಕಾದ ಅಧ್ಯಕ್ಷ ಟ್ರೂಮನ್ ನ ಕೊಡುಗೆ ಎಂದು ಕರೆದ.

ಆದರೂ ಸಮಸ್ಯೆಗಳ ಸರಮಾಲೆ ನಿಲ್ಲಲಿಲ್ಲ. ಯುದ್ಧ ನಂತರ ಜಪಾನ್ ನಲ್ಲಿ ತೀವ್ರ ಇಂಧನ ಅಭಾವವುಂಟಾಯಿತು. ಇಂಧನಗಳೇ ಇಲ್ಲವೆಂದರೇ ಕಾರುಗಳನ್ನು ಕೊಳ್ಳುವರಾರು ?  ಹೀಗಾಗಿ ಟಯೋಟಾ ಕಂಪೆನಿ ಕಾರು ಉತ್ಪಾದನೆಯನ್ನು ನಿಲ್ಲಿಸಿತು. ಪರಿಣಾಮವಾಗಿ ಹೋಂಡಾಗೆ ಪಿಸ್ಟನ್ ರಿಂಗ್ ಗಳಿಗೆ ಆರ್ಡರ್ ಬರಲಿಲ್ಲ. ಇಂಧನ ಕೊರೆತೆಯಿದ್ದ ಕಾರಣ ಜನಸಾಮಾನ್ಯರು ಕಾಲ್ನಡಿಗೆಯಲ್ಲಿ ಅಥವಾ ಸೈಕಲ್ ಗಳಲ್ಲಿ ಸಾಗಬೇಕಿತ್ತು. ಇದನ್ನು ಕಂಡ ಹೋಂಡಾ ಸೈಕಲ್ ಗಳಿಗೆ ಇಂಜಿನ್ ಕೂರಿಸಿದರೆ ಹೇಗೆ ಎಂದು ಚಿಂತಿಸಲಾರಂಭಿಸಿದ. ಯಾಕೆಂದರೇ ಸೈಕಲ್  ಇಂಜಿನ್ ಗಳಿಗೆ ಹೆಚ್ಚು ಇಂಧನ ಬೇಕಾಗಿರಲಿಲ್ಲ. ಮಾತ್ರವಲ್ಲದೆ ತನ್ನ ಆಲೋಚನೆಯನ್ನು ಕಾರ್ಯರೂಪಕ್ಕಿಳಿಸಿ ಬೈಕ್ ಇಂಜಿನ್ ತಯಾರಿಸಿದ. ಕೆಲವೇ ವರ್ಷಗಳಲ್ಲಿ ಹೊಂಡಾ ಕಂಪೆನಿಯ ಬೈಕ್ ಇಂಜಿನ್ ಗಳು  ಎಷ್ಟು ಪ್ರಖ್ಯಾತವಾದವೆಂದರೇ ಅವುಗಳನ್ನು ಯೂರೋಪ್ ಮತ್ತು ಅಮೆರಿಕಾಕ್ಕೂ ಸರಬರಾಜು ಮಾಡಲಾಯಿತು. ಮುಂದಿನದು ಇತಿಹಾಸ !

1970ರ ವೇಳೆಗೆ ಹೋಂಡಾ ಕಂಪೆನಿ ಚಿಕ್ಕ ಕಾರುಗಳನ್ನು ಉತ್ಪಾದಿಸಲು ಆರಂಭಿಸಿತು. ಅದು ಕೂಡ ಜನಪ್ರಿಯವಾದವು. ಇಂದಿಗೂ ಕೂಡ ಹೊಂಡಾ ಕಂಪೆನಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಆ ಮೂಲಕ  ಸತತ ಪ್ರಯತ್ನವೇ ಸಾಧನೆಯ ರಹಸ್ಯ ಎಂದು ಸೋಯಿಚಿರೋ ಹೋಂಡಾ ತೊರಿಸಿಕೊಟ್ಟನು.

ಟಾಪ್ ನ್ಯೂಸ್

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

54

ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟವರ ವಿರುದ್ಧ ಶೀಘ್ರವೇ ಕಠಿಣ ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Life is a characteristic that distinguishes physical entities that have biological processes, such as signaling and self-sustaining processes, from those that do not, either because such functions have ceased (they have died), or because they never had such functions and are classified as inanimate.

ಇಲ್ಲಿ ಎಲ್ಲದಕ್ಕೂ “ಅರ್ಥ” ನಮ್ಮ ಇರುವಿಕೆಯನ್ನು ಆಧರಿಸಿರುತ್ತದೆ..!

Untitled-1

3500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್ ಲೈನ್ ಶಿಕ್ಷಣವನ್ನು ಬೋಧಿಸುವ ಶಿಕ್ಷಕ.!

9

ನಕಲಿ ಖಾತೆಗಳ ವಿರುದ್ಧ ಟ್ವಿಟರ್ ಸಮರ : ಸೆಲೆಬ್ರಿಟಿಗಳಿಗೆ ಶುರುವಾದ ಆತಂಕ

ಸದಚವಬನಬವಚಷ

ಶಿವಗಂಗೆ ಬೆಟ್ಟ ಟ್ರೆಕ್ಕಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ ಜಾಗ

The power of memory

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬೇಕೆ?  ಇಲ್ಲಿದೆ ಸರಳ ಮಾರ್ಗ

MUST WATCH

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

udayavani youtube

ಯಾರೋ ಒಬ್ಬಿಬ್ಬರು ಮಾತನಾಡಿದರೆ ಗೊಂದಲವಾಗುವುದಿಲ್ಲ CM B S Yediyurappa

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಹೊಸ ಸೇರ್ಪಡೆ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

18-21

ಮಲೆನಾಡಲ್ಲಿ ಮುಂಗಾರು ಮಳೆ ಅಬ್ಬರ

18-20

ಆನ್‌ಲೈನ್‌ ಕೋರ್ಸ್‌: ಕುವೆಂಪು ವಿವಿಗೆ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.