Udayavni Special

ಇನ್ ಕಾಗ್ನಿಟೋ ಮೋಡ್: ಇದರ ಉಪಯೋಗ ಹಾಗೂ ಪತ್ತೆದಾರನ ಮುಖದ ಹಿಂದಿರುವ ಸೀಕ್ರೇಟ್ ಗೊತ್ತಾ ?


Team Udayavani, May 5, 2021, 8:00 AM IST

incognito

ಇನ್‘ಕಾಗ್ನಿಟೋ ಮೋಡ್ ಎಂಬುದು ಸೆಕ್ಯೂರ್ ಸೇಫ್ ಬ್ರೌಸರ್. ಇಂಟರ್ ನೆಟ್ ಬಳಕೆದಾರರ ಖಾಸಗಿತನವನ್ನು ಕಾಪಾಡುವ ವ್ಯವಸ್ಥೆಗೆ ಇನ್‘ಕಾಗ್ನಿಟೋ ಮೋಡ್ ಅಥವಾ ಪ್ರೈವೇಟ್ ಮೋಡ್ ಎಂದು ಕರೆಯುತ್ತಾರೆ. ಸುರಕ್ಷಿತ ಬ್ರೌಸಿಂಗ್ ಗೆ ಅವಕಾಶ ಮಾಡಿಕೊಡುವ ವ್ಯವಸ್ಥೆ ಇದು. ಗೂಗಲ್ ಕ್ರೋಮ್ ತನ್ನ ಬಳಕೆದಾರರ ಸುರಕ್ಷತೆಗಾಗಿ ಈ ಫೀಚರ್ ಅನ್ನು ಜಾರಿಗೆ ತಂದಿತ್ತು. ಇಂದು ಪ್ರತಿಯೊಬ್ಬರು ಈ ಮೋಡ್ ಅನ್ನು ಬಳಕೆ ಮಾಡುತ್ತಿದ್ದಾರೆ.

ಇನ್‘ಕಾಗ್ನಿಟೋ ಎಂಬುದು ಅಜ್ಞಾತ, ಗುರುತು ಮರೆಸಿಕೊಳ್ಳುವುದು ಎಂಬರ್ಥವನ್ನು ನೀಡುತ್ತದೆ.  ಖಾಸಗಿಯಾಗಿ ಬ್ರೌಸಿಂಗ್ ಮಾಡಲು ಅಂದರೇ ಇತರರು ನೆಟ್ ಜಾಲಾಟವನ್ನು ಹಿಂಬಾಲಿಸದಂತೆ ತಡೆಯುವ ವ್ಯವಸ್ಥೆ ಇದಾಗಿದೆ. ಯಾವುದೇ ಬ್ರೌಸರ್‘ನಲ್ಲಿರಬಹುದಾದ ಅಂತರ್ಜಾಲದ ಚಟುವಟಿಕೆಗಳನ್ನು ಬೇರೆಯವರಿಗೆ ತಿಳಿಯದಂತೆ ಮಾಡುವುದು. ಬ್ರೌಸರ್ ಮುಚ್ಚಿದಾಗ ಸರ್ಚ್ ಹಿಸ್ಟರಿ ಸ್ವಯಂಚಾಲಿತವಾಗಿ ಅಳಿಸಿ ಹೋಗುವ ವ್ಯವಸ್ಥೆ ಇದರಲ್ಲಿ ಕಂಡುಬರುವುದು.

ಹಾಗಾಗಿ ವೆಬ್ ಸೈಟ್ ಗಳನ್ನು ಹೆಚ್ಚು ವ್ಯೆಯಕ್ತಿಕವಾಗಿ ಆ್ಯಕ್ಸಸ್ ಮಾಡಲು ಇದು ಸಹಾಯಕ. ಗೂಗಲ್ ಕೂಡ ನೀವು ಏನನ್ನು ಸರ್ಚ್ ಮಾಡಿದ್ದೀರಿ ಎಂಬುದನ್ನು ಟ್ರ್ಯಾಕ್ ಮಾಡುವುದಿಲ್ಲ.

ಇನ್‘ಕಾಗ್ನಿಟೋ ಮೋಡ್ ಬಳಸುವುದರಿಂದ ಏನು ಉಪಯೋಗ ?

ಆನ್‘ಲೈನ್‘ನಲ್ಲಿ ನೀವು ಏನನ್ನಾದರೂ ಖರೀದಿಸಲು ಮುಂದಾಗುವುದಿದ್ದರೆ ಈ ಮೋಡ್ ಬಳಸುವುದು ಬಹಳ ಸುರಕ್ಷಿತ. ಯಾಕೆಂದರೆ ಸಾಮಾನ್ಯ ಬ್ರೌಸರ್ ಬಳಸಿದಾಗ ನೀವು ಏನು ಸರ್ಚ್ ಮಾಡಿದ್ದೀರಿ ಎಂಬುದನ್ನು ಆಧರಿಸಿ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳು ಆಗಾಗ ಕಾಣಿಸಿಕೊಳ್ಳುತ್ತದೆ. ಇನ್‘ಕಾಗ್ನಿಟೋದಿಂದ  ಜಾಹೀರಾತುಗಳ ಕಿರಿಕಿರಿ ಕೂಡ ತಪ್ಪುತ್ತದೆ.

ಸೈಬರ್‘ಗಳಲ್ಲಿ ಅಥವಾ ಇತರರ ಕಂಪ್ಯೂಟರ್ ಗಳಲ್ಲಿ ಇಂಟರ್ ನೆಟ್ ಬಳಸುತ್ತಿರುವಿರಿ ಎಂದಾದರೇ ಈ ಮೋಡ್ ಬಳಸುವುದು ಸೂಕ್ತ. ಸಾಮಾನ್ಯ ಗೂಗಲ್ ಕ್ರೋಮ್ ಬ್ರೌಸರ್ ಬಳಸಿದಾಗ ನೀವು ಸರ್ಚ್ ಮಾಡಿದ ಡಾಟಾಗಳು ಅಲ್ಲೇ ಉಳಿದುಬಿಡುತ್ತದೆ. ಇದರಿಂದ ನಿಮ್ಮ ಮಾಹಿತಿಗಳು ಬೇರೆಯವರ ಪಾಲಾಗುವ ಸಾಧ್ಯತೆಯೂ ಇರುತ್ತದೆ.

ಆನ್ ಲೈನ್ ಬ್ಯಾಂಕಿಂಗ್ ವಹಿವಾಟು ಮಾಡುವಾಗಲೂ ಈ ಇನ್‘ಕಾಗ್ನಿಟೋ ಮೋಡ್ ಬಳಸುವುದು ಅತ್ಯವಶ್ಯಕ. ಈ ಮೋಡ್ ಹ್ಯಾಕರ್‘ಗಳಿಂದ, ಕಂಪ್ಯೂಟರ್ ವೈರಸ್ ತಂತ್ರಾಂಶಗಳಿಂದ, ಖಾಸಗಿತನಕ್ಕೆ ಧಕ್ಕೆಯಾಗದಂತೆ ಬಹುಪಾಲು ರಕ್ಷಿಸುತ್ತದೆ.

ಹಲವು ಅಕೌಂಟ್ ಗಳಿಗೆ ಸೈನ್‘ಇನ್ ಆಗುವ ಅವಕಾಶ: ಉದಾ: ಗೂಗಲ್ ಕ್ರೊಮ್‘ನಲ್ಲಿ ವಾಟ್ಸಾಪ್ ವೆಬ್ ಬಳಸುತ್ತಿದ್ದೀರಾ ಎಂದಿಟ್ಟುಕೊಳ್ಳಿ. ಅದೇ ಕ್ಷಣದಲ್ಲಿ ಮತ್ತೊಂದು ವಾಟ್ಸಾಪ್ ವೆಬ್ ಬಳಸುವ ಅವಶ್ಯಕತೆ ಎದುರಾದರೆ ಇನ್‘ಕಾಗ್ನಿಟೋ ಮೋಡ್ ಬಳಸಬಹುದು. ಅಂದರೇ ಒಂದೇ ವೇಳೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಅಕೌಂಟ್‘ಗಳಿಗೆ ಲಾಗಿನ್ ಆಗುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಗೂಗಲ್ ಮ್ಯಾಪ್‘ನಲ್ಲಿ ಕೂಡ ಇನ್‘ಕಾಗ್ನಿಟೋ ಮೋಡ್ ಅನ್ನು ಪರಿಚಯಿಸಲಾಗಿದೆ. ಈ ಮೋಡ್ ಬಳಸಿ ಉಪಯೋಗಿಸಿದರೆ ನಿಮ್ಮ ಲೊಕೇಶನ್ ಹಿಸ್ಟರಿ ಅಥವಾ ಗೂಗಲ್ ಮ್ಯಾಪ್ ಹುಡುಕಾಟದ ವಿವರವನ್ನು ಅದು ಶೇಖರಿಸಿಟ್ಟುಕೊಳ್ಳುವುದಿಲ್ಲ.

ಪತ್ತೆದಾರನ ಮುಖದ ಹಿಂದಿನ ಸೀಕ್ರೇಟ್ ಏನು ? ಕ್ರೋಮ್, ಇಂಟರ್ನೆಟ್ ಎಕ್ಸ್ ಪ್ಲೋರರ್, ಮೋಜಿಲ್ಲಾ ಅಥವಾ ಇನ್ಯಾವುದೇ ಬ್ರೌಸರ್ ಮೂಲಕ ಇನ್‘ಕಾಗ್ನಿಟೋ ಮೋಡ್ ತೆರೆದರೆ ಕನ್ನಡಕಧಾರಿ ಪತ್ತೆದಾರನ ಮುಖದ ಐಕಾನ್ ಕಾಣಿಸುತ್ತದೆ. ಈ ಪತ್ತೆದಾರ ನಿಮ್ಮ ಮಾಹಿತಿಯನ್ನು ಇನ್ನೊಬ್ಬರ ಪಾಲಾಗದಂತೆ ತಡೆದು ಸುಳಿವು ದೊರಕದಂತೆ ಮಾಡುತ್ತಾನೆ. ಹಾಗಾಗಿ ಪ್ರೈವೇಟ್ ಮೋಡ್ ಗೆ ಪತ್ತೆದಾರನ ಐಕಾನ್ ಬಳಸಿಕೊಳ್ಳಲಾಗಿದೆ.

ಕ್ರೋಮ್‘ನಲ್ಲಿ ಇನ್ ಕಾಗ್ನಿಟೋ ಮೋಡ್ ಬಳಸಲು ಉದ್ದೇಶಿಸಿದ್ದೀರಿ ಎಂದಿದ್ದರೆ shift+Control+N ಬಟನ್ ಕ್ಲಿಕ್ ಮಾಡಿದರಾಯಿತು. ಆಗ ಹೊಸದೊಂದು ಬ್ರೌಸರ್ ನ ಪ್ರೈವೇಟ್ ಮೋಡ್ ತೆರದುಕೊಳ್ಳುತ್ತದೆ.

ಎಕ್ಸ್‘ಪ್ಲೋರರ್ ಮತ್ತು ಫೈರ್ ಫಾಕ್ಸ್ ಬಳಸುತ್ತಿದ್ದರೆ shift+Control+P ಬಟನ್ ಒತ್ತಿದರೆ ಪ್ರೈವೇಟ್ ಮೋಡ್ ತೆರೆದುಕೊಳ್ಳುತ್ತದೆ. ಇಲ್ಲವಾದಲ್ಲಿ ಬ್ರೌಸರ್‘ನ ಮೇಲ್ಭಾದಲ್ಲಿರುವ ಫೈಲ್ಸ್ ಅಥವಾ ಟೂಲ್ಸ್ ಮೆನು ಕ್ಲಿಕ್ ಮಾಡಿದರೆ ಸೆಟ್ಟಿಂಗ್ ನಲ್ಲಿ ಇನ್‘ಕಾಗ್ನಿಟೋ ಮೋಡ್ ಆಯ್ಕೆ ಕಾಣಿಸಿಕೊಳ್ಳುತ್ತದೆ.

ಆದರೆ ಕೆಲ ಡೆವಲಪರ್ ಗಳು ಆನ್‘ಲೈನ್ ನಲ್ಲಿ ಲಭ್ಯವಿರುವ ಕೆಲ ಟೂಲ್ ಗಳನ್ನು ಬಳಸಿ ಇನ್‘ಕಾಗ್ನಿಟೋ ಮೋಡ್ ಅನ್ನು ಜಾಲಾಡುತ್ತಾರೆ ಮಾತ್ರವಲ್ಲದೆ ಖಾಸಗಿ ಮಾಹಿತಿ ಪಡೆದು ಅದನ್ನು ಜಾಹೀರಾತಿಗೆ ಬಳಸಿಕೊಳ್ಳುತ್ತಾರೆ ಎಂಬ ಆರೋಪವಿದೆ. ಏನೇ ಆದರೂ ಇಂಟರ್ ನೆಟ್ ಬಳಕೆದಾರರ ಮಾಹಿತಿಯನ್ನು ಕಾಪಾಡಲು ಇನ್‘ಕಾಗ್ನಿಟೋ ಮೋಡ್ ಎಂಬುದು ಹೇಳಿ ಮಾಡಿಸಿದಂತಿದೆ.

ಟಾಪ್ ನ್ಯೂಸ್

hkkjhjhiyuuy

ಸಾವಿನ ಸರಣಿ ಮಧ್ಯೆಯೂ ರೆಂಟಿ ಹೊತ್ತ ರೈತ

ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ: ರೈತರಿಗೆ ಹರ್ಷ

ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ: ರೈತರಿಗೆ ಹರ್ಷ

ಡಿಸಿಎಂ ಸವದಿ ಸಹೋದರನ ಮಗ ಕೋವಿಡ್ ಗೆ ಬಲಿ

ಡಿಸಿಎಂ ಸವದಿ ಸಹೋದರನ ಮಗ ಕೋವಿಡ್ ಗೆ ಬಲಿ

mike hussey

ಸಿಎಸ್ ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿಗೆ ಮತ್ತೊಮ್ಮೆ ಕೋವಿಡ್ ಪಾಸಿಟಿವ್

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರು

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರು

ffffffffffff

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 4,205 ಮಂದಿ ಕೋವಿಡ್ ಗೆ ಬಲಿ!

ಚಿಕ್ಕಮಗಳೂರು : ಶೃಂಗೇರಿ ಬಿಇಓ ನಾಗರಾಜ್ ಕೋವಿಡ್ ಸೋಂಕಿಗೆ ಬಲಿ

ಚಿಕ್ಕಮಗಳೂರು : ಶೃಂಗೇರಿ ಬಿಇಓ ನಾಗರಾಜ್ ಕೋವಿಡ್ ಸೋಂಕಿಗೆ ಬಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

honda

ಸತತ ಪ್ರಯತ್ನದ ಮೂಲಕ ಅಟೋಮೊಬೈಲ್ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಛಲದಂಕಮಲ್ಲ ಹೋಂಡಾ !

11-4

ಆಯಸ್ಕಾಂತೀಯ ವಲಯಗಳಲ್ಲಿ ಸಂಚರಿಸುತ್ತವೆ ಶಾರ್ಕ್ ಮೀನುಗಳು..!

Here is an easy solution to acidity

ಅಸಿಡಿಟಿ ನಿವಾರಣೆಗೆ ಇಲ್ಲಿವೆ ಸುಲಭ ಪರಿಹಾರ

hsegere

ಮನಸೂರೆಗೊಳಿಸುವ ಸುಂದರ ಪ್ರವಾಸಿತಾಣ ‘ಉತ್ಸವ ರಾಕ್ ಗಾರ್ಡನ್’

ಬೌಲಿಂಗ್ ಟು ಬ್ಯಾಟಿಂಗ್: ಬ್ಯಾಟ್ ಹಿಡಿದು ಮಿಂಚಿದ ಬೌಲರ್ ಗಳು…!

ಬೌಲಿಂಗ್ ಟು ಬ್ಯಾಟಿಂಗ್: ಬ್ಯಾಟ್ ಹಿಡಿದು ಮಿಂಚಿದ ಬೌಲರ್ ಗಳು…!

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

ujftyrytr

ಹುಬ್ಬಳ್ಳಿ:  ಪಿಎಸ್‌ಐ-ಇಬ್ಬರು ಪೇದೆ ಅಮಾನತು

hhhhhhhhhhhhhhhhhhhh

ಮಾಸ್ಕ್ ಧಾರಣೆ; ಜನಜಾಗೃತಿ ಅಭಿಯಾನ

jjjjjjjjjjjjjjjjjjjjjjjjjjj

ಕೊರೊನಾ ನಿಯಂತ್ರಣದಲ್ಲಿ ವಿಫಲ: ಪಾಟೀಲ

hkkjhjhiyuuy

ಸಾವಿನ ಸರಣಿ ಮಧ್ಯೆಯೂ ರೆಂಟಿ ಹೊತ್ತ ರೈತ

rrrrrrrrrrrrrrrrrrrrrrrrrrrr

“ಕೈ ಮುಗಿಯುವೆ, ಅನಗತ್ಯ ಸಂಚರಿಸಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.