ಮನಸ್ಸಿದ್ದರೆ ಮಾರ್ಗ… ಕೈ ಹಿಡಿದ ಬ್ರ್ಯಾಂಡ್ ‘ಕಾಶ್ಮೀರ್ ಶೈನ್ ‘ ಡಿಟರ್ಜೆಂಟ್ ಪೌಡರ್

ಕಾಶ್ಮೀರದ ಮೊದಲ ಸ್ವಂತ ಬ್ರ್ಯಾಂಡ್ ನಂತೆ ಜರ್ಕಾರ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಗೆ ಬರುತ್ತದೆ.

Team Udayavani, Sep 23, 2021, 2:35 PM IST

ಮನಸ್ಸಿದ್ದರೆ ಮಾರ್ಗ… ಕೈ ಹಿಡಿದ ಬ್ರ್ಯಾಂಡ್ ‘ಕಾಶ್ಮೀರ್ ಶೈನ್ ‘ ಡಿಟರ್ಜೆಂಟ್ ಪೌಡರ್

ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಅದೇ ಗುರಿ, ಉದ್ದೇಶವನ್ನಿಟ್ಟುಕೊಂಡು ಮುನ್ನುಗ್ಗಿದರೆ ಮನ್ನೆಡೆ ಸಿಗುವುದು ಖಂಡಿತ.  ಪ್ರತಿಯೊಬ್ಬರಲ್ಲಿ ಏನಾದ್ರು ಮಾಡಬೇಕು ಅನ್ನೋ ಕನಸು ಇದ್ದೇ ಇರುತ್ತದೆ. ಎಲ್ಲೋ ಒಂದು ಹಂತದವರೆಗೆ ಬರುವ ಕನಸು ಕೊನೆಗೆ ಜಂಜಾಟದ ನಡುವೆ ಮರೆಯಾಗಿಯೂ ಅಥವಾ ಇನ್ನಿತರ ಕಾರಣಗಳಿಂದಲೂ ದೂರವಾಗುತ್ತದೆ.

ಮದುವೆಯ ಬಳಿಕ ಹೆಣ್ಣು. ಅಡುಗೆ ಕೆಲಸಕ್ಕೆನೇ ಸಿಮೀತವಾಗಿ ಬಿಡುತ್ತಾಳೆ ಎನ್ನುವ ಎಷ್ಟೋ ಜನರ ನಂಬಿಕೆಗೆ ವಿರುದ್ಧವಾಗಿ ಸಾಧನೆಗೈದ ನಾರಿಯರು ಬಹಳ ಇದ್ದಾರೆ. ಗಂಡನ ಸಹಕಾರ,ಬೆಂಬಲವಿದ್ರೆ ವಿವಾಹಿತ ಹೆಣ್ಣು ಕೂಡ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು ಎನ್ನುವುದಕ್ಕೆ ಸಾಕ್ಷಿ ಜಮ್ಮು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಜರ್ಕಾ ತಂಜೀಲ್.

ಜರ್ಕಾ ತಂಜೀಲ್ ಎಲ್ಲರ ಹಾಗೆ ಯೌವನದಲ್ಲಿ ಭವಿಷ್ಯದ ಕನಸು ಕಾಣುತ್ತಾ ಬೆಳೆದ ಹುಡುಗಿ. ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಾಕೆಗೆ ಬುಡ್ಗಾಮ್ ಜಿಲ್ಲೆಯ ಸೈಯದ್ ತಂಜೀಲ್ ಅವರೊಂದಿಗೆ ಮದುವೆ ಆಗುತ್ತದೆ. ಮದುವೆ ಬಳಿಕ ಮನೆಯ ಕೆಲಸ, ಜವಬ್ದಾರಿಯಲ್ಲಿ ನಿರತರಾದ ಜರ್ಕಾ ಅವರಿಗೆ ತಾನು ಏನಾದರೂ ಮಾಡಬೇಕೆನ್ನುವ ತುಡಿತ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಈ ತುಡಿತವನ್ನು ತನ್ನ ಗಂಡನ ಜತಗೆ ಹೇಳಿಕೊಳ್ಳುತ್ತಾರೆ. ತಾನು ಸಮಾಜಕ್ಕಾಗಿ ಏನಾದರೂ ಮಾಡಬೇಕೆನ್ನುತ್ತಾರೆ.

ತಂಜೀಲ್ ಅವರ ಗಂಡ ಕೂಡ ಶಿಕ್ಷಿತರಾಗಿರುವುದರಿಂದ, ಹೆಂಡತಿಯ ಮಾತಿಗೆ ಒಪ್ಪಿಗೆ ನೀಡುತ್ತಾರೆ. ಏನು ಮಾಡಬೇಕೆಂದು, ಸೈಯದ್ ಹುಡುಕುತ್ತಾರೆ. ಈ ವೇಳೆ ಜರ್ಕಾ ಅವರಿಗೆ ಇಂಟರ್ ನೆಟ್ ನಲ್ಲಿ  ಡಿಟರ್ಜೆಂಟ್ ಪೌಡರ್ ಮಾಡುವ ಕುರಿತು ಕೆಲ ವಿಧಾನಗಳು ಸಿಗುತ್ತದೆ. ಇದನ್ನೇ ತನ್ನ ಗಂಡನಿಗೆ ಹೇಳುತ್ತಾರೆ. ಡಿಟರ್ಜೆಂಟ್ ಪೌಡರ್ ನ್ನು ತಯಾರಿಸಿ ಮಾರಾಟ ಮಾಡುವ, ಇದು ಹೆಂಗಸರ ವಿಚಾರವಾಗಿರುವುದರಿಂದ ಇದನ್ನು ನಾನು ನಿಭಾಯಿಸಬಲ್ಲೆ ಎನ್ನುವ ವಿಶ್ವಾಸವನ್ನು ಗಂಡನ ಬಳಿ ಹೇಳುತ್ತಾರೆ.

ಜರ್ಕಾ ಗೂಗಲ್ ನಲ್ಲಿ ಸಣ್ಣ ಉದ್ಯಮವನ್ನು ಆರಂಭಿಸುವುದು ಹೇಗೆ ಎಂದು ಹುಡುಕುತ್ತಾರೆ. ಆಗ ಅವರಿಗೆ ಸಿಕ್ಕಿದ್ದು ಡಿಟರ್ಜೆಂಟ್ ಯೂನಿಟ್ ಮಾಡುವ ಯೋಜನೆ. ಪ್ಲ್ಯಾನು ಏನೋ ಬಂತು. ಆದರೆ ಮಧ್ಯಮ ವರ್ಗದ ಕುಟುಂಬವಾಗಿರುವ ಕಾರಣ ಅದಕ್ಕೆ ಹಣ ಒದಗಿಸಲು ಜರ್ಕಾ ಕಷ್ಟ ಪಡುತ್ತಾರೆ. ಜರ್ಕಾರ ಅಪ್ಪ ಸರ್ಕಾರಿ ಉದ್ಯೋಗಿ ಆಗಿರುವ ಕಾರಣ ಮಗಳ ಆಸಕ್ತಿಗೆ ತನ್ನ ಉಳಿತಾಯದ ಹಣವನ್ನು  ಕೊಟ್ಟು ಪ್ರೋತ್ಸಾಹಿಸುತ್ತಾರೆ. ಜರ್ಕಾರ ಗಂಡ ಕೂಡ ಒಂದಿಷ್ಟು ಆರ್ಥಿಕ ಸಹಾಯ ಮಾಡುತ್ತಾರೆ.

ಡಿಟರ್ಜೆಂಟ್ ಪೌಡರ್ ಮಾಡುವ ಸಾಮಾಗ್ರಿಗಳೆಲ್ಲಾ ಬಂದ ಮೇಲೆ ಅವುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲು ಅಡ್ಡಿ ಆದದ್ದು ಕೋವಿಡ್ ಲಾಕ್ ಡೌನ್,  ಎರಡು ಬಾರಿಯೂ ಜರ್ಕಾ ಅವರಿಗೆ ತಯಾರಿಸಿದ ಡಿಟರ್ಜೆಂಟ್ ನ್ನು ಮಾರುಕಟ್ಟೆಗೆ ತಲುಪಿಸಲು ಲಾಕ್ ಡೌನ್ ಅಡ್ಡಿ ಆಗಿ ನಷ್ಟ ಆಗುತ್ತದೆ. ಈ ವೇಳೆ ಜರ್ಕಾಳಿಗೆ ಮಾನಸಿಕವಾಗಿ ಮನೆಯವರ ಬೆಂಬಲ ಸಿಗುತ್ತದೆ. ಸೋತು ಕೂರದಂತೆ, ಪ್ರೋತ್ಸಾಹಿಸುವ ಕೈಗಳು ಬೆನ್ನು ತಟ್ಟುತ್ತವೆ.

ಲಾಕ್ ಡೌನ್ ನಿಧಾನಕ್ಕೆ ತೆರವಾದಾಗ ಜರ್ಕಾ ತಮ್ಮ ಕನಸಿನ ಡಿಟರ್ಜೆಂಟ್ ಪೌಡರ್ ನ್ನು ಮತ್ತೆ ಪ್ರಾರಂಭಿಸುತ್ತಾರೆ. ಒಂದು ಸಣ್ಣ ಕೊಠಡಿಯ ಹಾಗಿರುವ ಜಾಗದಲ್ಲಿ ದೊಡ್ಡ ಯಂತ್ರದಲ್ಲಿ ಜರ್ಕಾರವರ ಲೋಕಲ್ ಬ್ರ್ಯಾಂಡ್ ‘ಕಾಶ್ಮೀರ್ ಶೈನ್ ‘ ಡಿಟರ್ಜೆಂಟ್ ಪೌಡರ್ ಸಿದ್ದವಾಗುತ್ತದೆ. ಕಾಶ್ಮೀರದ ಮೊದಲ ಸ್ವಂತ ಬ್ರ್ಯಾಂಡ್ ನಂತೆ ಜರ್ಕಾರ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಗೆ ಬರುತ್ತದೆ.

ಊರಿನ ಬ್ರ್ಯಾಂಡ್ ಅದಕ್ಕೊಂಡು, ಹೆಸರು, ಡಿಟರ್ಜೆಂಟ್ ಪೌಡರ್ ಅದರ ಮೇಲೆ ಹೆಸರು. ಅದರೊಳಗೆ ಡಿಟರ್ಜೆಂಟ್ ಪೌಡರ್, ನೋಡಾ ನೋಡುತ್ತಾ ಹಾಗೆ ಜರ್ಕಾರ ಡಿಟರ್ಜೆಂಟ್ ಹೆಸರುಗಳಿಸಲು ಪ್ರಾರಂಭವಾಗುತ್ತದೆ.

ಪೌಡರ್ ತಯಾರಾಗಲು ಒಂದು ಪುಟ್ಟ ಕಾರ್ಖಾನೆ, ಅದರಲ್ಲಿ 12 ಮಂದಿ ಕೆಲಸಗಾರರು ಇದ್ದಾರೆ. ತನ್ನ ಡಿಟರ್ಜೆಂಟ್ ಪೌಡರ್ ನ್ನು ಇನ್ನು ಮುಂದೆ ಎಲ್ಲೆಡೆ ಉತ್ಪಾದಿಸಿ, ತನ್ನ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಯುವತಿರಿಗೆ ಕೆಲಸ ನೀಡಬೇಕೆನ್ನುವುದು ಜರ್ಕಾರ ಕನಸು.  ಏನಾದರೂ ಮಾಡಬೇಕು ಎನ್ನುತ್ತಾ ಕೂರುವ ಬದಲು, ಏನಾದರೂ ಮಾಡಿ, ಸಾಧನೆಗೈದವರನ್ನು ನೋಡಿ ಸ್ಪೂರ್ತಿಗೊಂಡು, ಸಾಧಕರಾಗಿ..

 -ಸುಹಾನ್ ಶೇಕ್

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.