ಚಳಿಗೆ ಹಿತಕರ: ದಿಢೀರ್ ಅಂತ ರುಚಿಯಾದ ನಿಂಬೆಹಣ್ಣಿನ ತಿಳಿ ಸಾರು ಮಾಡಿ…
Team Udayavani, Nov 29, 2020, 9:27 AM IST
ಈ ನಿಂಬೆ ಹಣ್ಣು ಮಿಟಮಿನ್ ಸಿ ಯ ಸಮೃದ್ಧ ಅಗರ. ಅಡುಗೆಯಲ್ಲಿ ಆರೋಗ್ಯಕ್ಕೆ ಹೀಗೆ ಹತ್ತು ಹಲವು ವಿಧಗಳಲ್ಲಿ ನಿಂಬೆ ಅತ್ಯುಪಯುಕ್ತ. ನಿಂಬೆರಸದ ಸಾರು ಚಳಿಗೆ ಹಿತಕರ ಮತ್ತು ಹತ್ತು ನಿಮಿಷದಲ್ಲೇ ತಯಾರು ಮಾಡಬಹುದಾದ ಸುಲಭ ಸಾರು.
ನಿಂಬೆ – ಪುದೀನಾ ಸಾರು
ಬೇಕಾಗುವ ಸಾಮಗ್ರಿಗಳು
ನಿಂಬೆ ಹಣ್ಣು 4 ರಿಂದ 5, ಪುದೀನಾ ಸೊಪ್ಪು-1ಕಟ್ಟು, ತುಪ್ಪ 2 ಚಮಚ, ಕೊತ್ತಂಬರಿ 1ಚಮಚ, ಜೀರಿಗೆ 3 ಚಮಚ, ಹಸಿಮೆಣಸು 3, ತೆಂಗಿನ ತುರಿ 1ಚಮಚ, ಮೆಂತೆ 1 ಚಮಚ,ಬೆಲ್ಲ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ಸಾಸಿವೆ ಸ್ವಲ್ಪ, ಕರಿಬೇವು,ಒಣಮೆಣಸು,ಹಿಂಗು
ತಯಾರಿಸುವ ವಿಧಾನ
ಎರಡು ಮುಷ್ಠಿಯಷ್ಟು ಪುದೀನಾ ಎಲೆಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಕಾವಲಿಯಲ್ಲಿ ತುಪ್ಪ,ಸ್ವಲ್ಪ ಕೊತ್ತಂಬರಿ,ಜೀರಿಗೆ,ಹಸಿ ಮೆಣಸು , ತೆಂಗಿನ ತುರಿ ,ಮೆಂತ್ಯೆ ಹುರಿದು ಬಳಿಕ ಪುದೀನಾ ಎಲೆ ಸೇರಿಸಿ ಬಾಡಿಸಿ ಎಲ್ಲವನ್ನು ರುಬ್ಬಿ ನೀರು ಸೇರಿಸಿ ತೆಳ್ಳಗೆ ಮಾಡಿ ಉಪ್ಪು ಬೆರಸಿ ಕುದಿಸಿ. ಸಾಸಿವೆ, ಕರಿಬೇವು, ಒಣಮೆಣಸು,ಇಂಗಿನ ಒಗ್ಗರಣೆ ಹಾಕಿ ನಂತರ ಅರ್ಧ ನಿಂಬೆ ರಸ ಬೆರಸಿ ಸ್ವಲ್ಪ ಬೆಲ್ಲ ಸೇರಿಸಿರಿ.
ನಿಂಬೆ ಸಾರು:
ಒಂದು ಚಮಚ ಅಕ್ಕಿ,ಒಂದು ಚಮಚ ಗೋಧಿ ,ಒಂದು ಗಂಟೆ ನೆನೆಸಿಡಿ. ಬಳಿಕ ಸ್ವಲ್ಪ ತೆಂಗಿನ ತುರಿ,4 ಹಸಿ ಮೆಣಸು,ಬೆಲ್ಲ,ಉಪ್ಪು,2 ಚಮಚ ಜೀರಿಗೆ,ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿ ಬೆರಸಿ ಎಲ್ಲವನ್ನು ನೆನೆಸಿದ ಅಕ್ಕಿ ಮತ್ತು ಗೋಧಿಯೊಂದಿಗೆ ನಯವಾಗಿ ಅರೆಯಬೇಕು.ಬಳಿಕ ನೀರು ಸೇರಿಸಿ ಕುದಿಸಿ ಕೊನೆಯಲ್ಲಿ ಒಂದು ನಿಂಬೆರಸ ಬೆರಸಬೇಕು.ತುಪ್ಪದಲ್ಲಿ ಸಾಸಿವೆ ,ಕರಿಬೇವು ,ಇಂಗು ,ಮೆಣಸಿನ ಒಗ್ಗರಣೆ ನೀಡಬೇಕು.
ಆರೋಗ್ಯ ರಕ್ಷಕ ನಿಂಬೆ ಹಣ್ಣು
ಹೌದು ನಿಂಬೆಹಣ್ಣು ನೋಡಲು ಗಾತ್ರದಲ್ಲಿ ಚಿಕ್ಕದಾಗಿರಬಹುದು ಆದರೆ ಇದರ ಕೆಲಸ ಮಾತ್ರ ಅದ್ಬುತ ಅಂತಲೇ ಹೇಳಬಹುದು ನಿಮಗೆ ಸುಲಭವಾಗಿ ಸಿಗುವಂತ ಈ ನಿಂಬೆ ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಸಹಕರಿಸುತ್ತದೆ ಎಂದು ತಿಳಿಯೋಣ…
1.ನಿಂಬೆ ರಸ ,ಈರುಳ್ಳಿ ರಸ ಮತ್ತು ಜೇನು ಬೆರಸಿ ಕುಡಿದರೆ ವಾಂತಿ ಹತೋಟಿಗೆ ಬರುತ್ತದೆ.
2.ನೆಗಡಿ,ಕೆಮ್ಮು,ಕಫ ಇರುವಾಗ ಬಿಸಿ ನೀರಿಗೆ ನಿಂಬೆ ಹಿಂಡಿ,ಕರಿ ಮೆಣಸು ಬೆರಸಿ ಕುಡಿಯುವುದರಿಂದ ನೆಗಡಿ,ಕೆಮ್ಮು,ಕಫ ನಿವಾರಣೆಯಾಗುವುದು.
3.ಬಾಯಿ ಹುಣ್ಣಿಗೆ ನೀರಿನಲ್ಲಿ ನಿಂಬೆ ರಸ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿದರೆ ಹುಣ್ಣುಗಳು ನಿವಾರಣೆಯಾಗುವುದು.
4. ತುರಿಕೆ ,ಕಜ್ಜಿ ಇರುವ ಭಾಗದಲ್ಲಿ ನಿಂಬೆರಸ,ಅರಸಿನ ಪುಡಿ,ಉಪ್ಪು ಬೆರಸಿ ತಿಕ್ಕಿದರೆ ಪರಿಹಾರ.
5.ನಿಂಬೆ ರಸ,ಉಪ್ಪು ಬೆರಸಿ ಹಲ್ಲು ವಸಡುಗಳನ್ನು ತಿಕ್ಕುವುದರಿಂದ ಹಲ್ಲು ಶುಭ್ರವಾಗುವುದು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444