ಹೊನ್ನಿನ ಹುಡುಗನ ಮಣ್ಣಿನ ಕನಸು…

ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತವ್ಸ ,ಇತರರಿಗೆ ಪ್ರೇರಣೆಯಾದ ಸಾಧಕ ವಿದ್ಯಾರ್ಥಿಗಳ ಮಾತು

Team Udayavani, Nov 29, 2020, 9:19 AM IST

ಹೊನ್ನಿನ ಹುಡುಗನ ಮಣ್ಣಿನ ಕನಸು…

ಬೆಂಗಳೂರು: “ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಗೆ ರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತ ಚೌಕಟ್ಟು ರೂಪಿಸುವ ಅಗತ್ಯವಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ.ಕೆ.ಶಿವನ್‌ ತಿಳಿಸಿದರು.

ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಶನಿವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, “ಬೆಂಗಳೂರು ದೇಶದ ಸಾಫ್ಟ್ವೇರ್‌ಗಳ ರಾಜಧಾನಿ ಯಾಗಿದೆ. ಆದರೆ, ಕೃಷಿ ವಿಜ್ಞಾನ ಮತ್ತು ಮೀನುಗಾರಿಕೆ ವಿಜ್ಞಾನದ ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ನಾವು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಚೌಕಟ್ಟು ರೂಪಿಸಿ, ಆ ಮೂಲಕ ಐಟಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು’ ಎಂದು ಹೇಳಿದರು.

2030ರ ವೇಳೆಗೆ ವಿಶ್ವದ ಜನಸಂಖ್ಯೆ ಸಾವಿರ ಕೋಟಿ ಆಗಲಿದೆ. ಆಗ ಆಹಾರಉತ್ಪಾದನೆ ಪ್ರಮಾಣ ಶೇ.70 ಹೆಚ್ಚಳ ಆಗಬೇಕಾಗುತ್ತದೆ.ಈನಿಟ್ಟಿನಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಭವಿಷ್ಯದಲ್ಲಿ ಎದುರಾಗ ಬಹುದಾದ ಆಹಾರ ಭದ್ರತೆ ಕಡೆಗೆ ತನ್ನ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ರಾಜ್ಯದಲ್ಲಿ ಒಟ್ಟು 6 ಕೃಷಿ ವಿವಿಗಳಿವೆ. ಇವು ಪ್ರತಿ ವರ್ಷ ಕನಿಷ್ಠ ತಲಾ4ಗ್ರಾÊುಗÙ ‌ ‌ನ್ನು ದತ್ತು ಪಡೆದು, ಅಲ್ಲಿಕೃಷಿ ಜತೆಗೆ ಸಮಗ್ರ ಅಭಿವೃದ್ಧಿಪಡಿಸಿ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಬೇಕು ಎಂದರು. 20 ವರ್ಷಗಳಿಂದ ರಾಜ್ಯದ ಕೃಷಿ ಇಲಾಖೆವೃಂದ-ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ಆಗಿರಲಿಲ್ಲ. ತಾನುಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದಕ್ಕೆ ತಿದ್ದುಪಡಿ ತರಲಾಗಿದೆ. ಆಹಾರ ಮತ್ತು ಕೃಷಿ ಎಂಜಿನಿಯರಿಂಗ್‌ ವಿಷಯಗಳಲ್ಲಿ ಪದವಿ ಪಡೆದವರಿಗೆ ಶೇ.15ರಷ್ಟು ಹುದ್ದೆ ಮೀಸಲಿಡಲಾಗಿದೆ ಎಂದು ಹೇಳಿದರು.  ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಉಪಸ್ಥಿತರಿದ್ದರು.

ಒಟ್ಟಾರೆ 986 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.638 ಪದವಿ, 280 ಸ್ನಾತಕೋತ್ತರ ಹಾಗೂ 68 ವಿದ್ಯಾರ್ಥಿಗಳಿಗೆ ಡಾಕ್ಟೋರಲ್‌ ಪದವಿ ಪ್ರದಾನ ಮಾಡಲಾಯಿತು.ಕುಲಾಧಿಪತಿಗಳೂ ಆದ ರಾಜ್ಯಪಾಲ ವಜೂಭಾಯಿ ವಾಲ ಪರವಾಗಿ ಸಹ ಕುಲಾಧಿಪತಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ ಪದವಿ ಪ್ರದಾನ ಮಾಡಿದರು.

ಉದಯವಾಣಿ’ಯೊಂದಿಗೆಖುಷಿ ಹಂಚಿಕೊಂಡ ಸಾಧಕರು :

ಚಿನ್ನದ ಹುಡುಗಿ ಶೀಲಾ :

ಬಿಎಸ್ಸಿ (ಕೃಷಿ)ಯಲ್ಲಿ ಒಂಬತ್ತು ಚಿನ್ನದ ಪದಕಗಳನ್ನು ಗಳಿಸಿದ ಹಾಸನದ ಆರ್‌. ರಾಹುಲ್‌ ಗೌಡ, ಡಾಕ್ಟರ್‌ ಆಗಬೇಕೆಂಬ ಕನಸುಕಂಡಿದ್ದರು. ಆದರೆ, ಸೀಟು ಸಿಗದಕಾರಣ ಬಿಎಸ್ಸಿ (ಕೃಷಿ) ಆಯ್ಕೆ ಮಾಡಿಕೊಂಡಿದ್ದಾರೆ. “ನನ್ನ ಆಯ್ಕೆ ಮತ್ತು ಸಾಧನೆ ತೃಪ್ತಿ ತಂದಿದೆ. ಜೀವವೈವಿಧ್ಯ ವಿಷಯದ ಮೇಲೆ ಆಸಕ್ತಿ ಇದ್ದು, ಇದುಕೃಷಿಯ ಭಾಗವೂ ಆಗಿದೆ. ಆದ್ದರಿಂದ ಭಾರತೀಯ ಅರಣ್ಯ ಸೇವೆ ಅಥವಾ ನಾಗರಿಕ ಸೇವೆ ಬಯಕೆ ಇದೆ. ಈಗಾಗಲೇ ಯುಪಿಎಸ್ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದೇನೆ’ ಎಂದರು.

ಕೃಷಿಯಲ್ಲೇ ನನ್ನಭವಿಷ್ಯವೂ… : ಬಿಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)ಯಲ್ಲಿ ಏಳು ಚಿನ್ನದ ಪದಕಗಳನ್ನು ಗಳಿಸಿದ ಪಿ.ಹಂಸಕೂಡ ಭವಿಷ್ಯದಲ್ಲಿಕೃಷಿ ಮತ್ತು ಸಹಕಾರಕ್ಷೇತ್ರದಲ್ಲಿಕಾರ್ಯನಿರ್ವಹಿಸುವ ಗುರಿ ಇದೆ. ಈ ಮೂಲಕ ನಾವು ಕಲಿತದ್ದು ರೈತರ ಜಮೀನು ತಲುಪ ಬೇಕು. ಇದರೊಂದಿಗೆ ಸೇವೆ ಮಾಡುವ ಗುರಿ ಹೊಂದಿದ್ದಾರೆ. “ಡಾಕ್ಟರ್‌ ಆಗುವ ಆಸೆ ಇತ್ತು. ಆದರೆ, ಸೀಟು ಸಿಗದಿದ್ದರಿಂದ ಬಿಎಸ್ಸಿ(ಕೃಷಿ) ಆಯ್ಕೆ ಮಾಡಿಕೊಂಡೆ. ಈಗ ಇದು ಫೆವರಿಟ್‌ ಆಗಿದೆ. ದೇಶದ ಭವಿಷ್ಯಕೃಷಿ ಮೇಲೆ ನಿಂತಿದೆ. ಸಹಜವಾಗಿ ಅದರಲ್ಲಿ ನನ್ನ ಭವಿಷ್ಯವನ್ನೂ ರೂಪಿಸಿಕೊಳ್ಳುವ ಕನಸು ಹೊಂದಿ ದ್ದೇನೆ. ನನ್ನ ಗುರಿ ಸಾಧನೆಗೆ ಪೋಷಕರ ಬೆಂಬಲ ಇದೆ’ ಎಂದರು.

ಬೇಸಾಯ ಮಾಡುವ ಗುರಿ ಹೊಂದಿದ್ದೇನೆ : “ನನಗೆ ಯಾರ ಹಂಗಿನಲ್ಲೂ ಕೆಲಸ ಮಾಡಲು ಇಷ್ಟವಿಲ್ಲ. ಸ್ವಾವಲಂಬಿ ಹಾಗೂ ನೆಮ್ಮದಿಯ ಬದುಕುಕಟ್ಟಿಕೊಳ್ಳುವ ಆಸೆ ಇದೆ. ಇದು ಕೃಷಿಯಿಂದ ಮಾತ್ರ ಸಾಧ್ಯ ಎಂದು ನಾನು ನಂಬಿದ್ದೇನೆ. ಹಾಗಾಗಿ, ಓದು ಮುಗಿದ ಮೇಲೆಊರಿನಲ್ಲಿ ಬೇಸಾಯ ಮಾಡುವ ಗುರಿ ಹೊಂದಿದ್ದೇನೆ’. – ಚಿನ್ನದ ಹುಡುಗ ಶರತ್‌ಕೊತಾರಿಯಕನಸು ಇದು. 2018-19ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಶರತ್‌ಕೊತಾರಿ ಬಿಎಸ್ಸಿ (ಕೃಷಿ)ಯಲ್ಲಿ ಅತಿ ಹೆಚ್ಚು11 ಚಿನ್ನದ ಪದಕಗಳ ಜತೆಗೆ ಎರಡು ದಾನಿಗಳ ಚಿನ್ನದ ಪ್ರಮಾಣಪತ್ರ ಬಾಚಿಕೊಂಡಿದ್ದಾರೆ. ಶನಿವಾರ ಬೆಂಗಳೂರುಕೃಷಿ ವಿಶ್ವವಿದ್ಯಾಲಯದ54ನೇ ಘಟಿಕೋತ್ಸವದಲ್ಲಿ ಪದಕಗಳನ್ನು ಸ್ವೀಕರಿಸಿ ಎಲ್ಲರ ಗಮನಸೆಳೆದರು. ಈ ವೇಳೆ “ಉದಯವಾಣಿ’ಯೊಂದಿಗೆ ಖುಷಿ ಕ್ಷಣಗಳನ್ನು ಹಂಚಿಕೊಂಡರು.  “ಕೃಷಿಯಲ್ಲಿ ಲಾಭವಿಲ್ಲ ಎಂಬುದರಲ್ಲಿ ಹುರುಳಿಲ್ಲ. ವೈಜ್ಞಾನಿಕ ಮತ್ತು ವ್ಯವಸ್ಥಿತವಾಗಿ ನಿರ್ವಹಿಸಿದರೆ, ಖಂಡಿತ ಹೆಚ್ಚು ಲಾಭ ಗಳಿಸಬಹುದು.3-4 ವರ್ಷಗಳಲ್ಲಿ ನನ್ನ ಓದು ಮುಗಿಸಿ, 4-5 ಎಕರೆ ಭೂಮಿ ತೆಗೆದುಕೊಂಡುಕೃಷಿ ಮಾಡುವ ಗುರಿ ಇದೆ’ ಎಂದು ಶರತ್‌ಕೊತಾರಿ ತಿಳಿಸಿದರು.

ಇಷ್ಟೊಂದು ಪದಕ ಪಡೆದಿದ್ದೀರಿ. ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳ ಬಾಗಿಲು ತೆರೆಯಲಿವೆ. ಯಾಕೆ ಕೃಷಿಯಲ್ಲೇ ಆಸಕ್ತಿ ಎಂದು ಕೇಳಿದಾಗ, “ಬೇರೊಬ್ಬರ ಕೈಕೆಳಗೆ ಕೆಲಸ ಮಾಡಲು ನನಗೆ ಇಷ್ಟವಿಲ್ಲ. ಹಾಗೂ ನೆಮ್ಮದಿ ಬದುಕು ನನಗೆ ಮುಖ್ಯ. ಅಷ್ಟಕ್ಕೂ ಮೂಲತಃ ನಮ್ಮದುಕೃಷಿ ಕುಟುಂಬ. ಶಿರಸಿಯ ಹೊನ್ನೆಹಕ್ಕಲು ಗ್ರಾಮದಲ್ಲಿ ಒಂದು ಎಕರೆ ಜಮೀನು ಇದೆ. ಅದರಲ್ಲಿ ಅಪ್ಪ ವ್ಯವಸಾಯ ಮಾಡುತ್ತಿದ್ದಾರೆ. ಓದು ಮುಗಿದ ಮೇಲೆ ನಾನೂ ಸಮಗ್ರ ಮತ್ತು ಸಂರಕ್ಷಿತಕೃಷಿ ಮಾಡುವ ಬಯಕೆ ಇದೆ’ ಎಂದರು

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.