Udayavni Special

ಸೆಲ್ಫಿ ಪ್ರಿಯರೇ ಗಮನಿಸಿ : ಇಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ್ರೆ ಜೈಲೂಟ ಗ್ಯಾರಂಟಿ!


Team Udayavani, Jul 6, 2021, 3:33 PM IST

hjhgfdfghjkjhg

ಭಾರತದಲ್ಲಿ ನೋಡಲು ನೂರಾರು ಪ್ರವಾಸಿ ತಾಣಗಳಿವೆ. ಈ ಜಾಗಗಳ ವೈಶಿಷ್ಟ್ಯ ಕೂಡ ಜನರನ್ನು ಆನಂದಿಸುತ್ತವೆ. ಅಂತ ತಾಣಗಳಿರುವ ರಾಜ್ಯಗಳ ಪೈಕಿ ಗುಜರಾತ್‌ ಕೂಡ ಒಂದು. ಇಲ್ಲಿ ನಯನ ಮನೋಹರ ಜಾಗಗಳಿರು ಒಂದು ಜಿಲ್ಲೆ ಇದೆ. ಅದೇ  ದಾಂಗ್. ಆದ್ರೆ ಈ ಜಿಲ್ಲೆಯ ವಿಚಿತ್ರ ಏನಂದ್ರೆ ಕೆಲವು ಕಡೆ ಸೆಲ್ಫಿಯನ್ನು ಬ್ಯಾನ್ ಮಾಡಲಾಗಿದೆ. ಅಲ್ಯಾಕೆ ಸೆಲ್ಫಿ ಬ್ಯಾನ್ ಮಾಡಲಾಗಿದೆ ಎಂಬುನ್ನು ನೋಡೋಣ. ಅದಕ್ಕೂ ಮೊದಲು ಆ ಜಾಗಗಳು ಯಾವುವು ಎಂಬುದನ್ನು ತಿಳಿಯೋಣ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಅನೇಕ ಜಾಗಗಳು ದಾಂಗ್  ಜಿಲ್ಲೆಯಲ್ಲಿವೆ.

ದಾಂಗ್ ನ ಸಪುತಾರಾ ಎಂಬ ಹಿಲ್‌ ಸ್ಟೇಶನ್‌ ನಲ್ಲಿರುವ ಟ್ರೈಬಲ್‌ ಮ್ಯೂಸಿಯಂ ಜಗತ್ತು ಪ್ರಸಿದ್ಧ . ಪಶ್ಚಿಮ ಘಟ್ಟಗಳ ನಡುವೆ ಇರುವ ಈ ಹಿಲ್‌ ಸ್ಟೇಶನ್‌ನಲ್ಲಿ ಏನಿದೆ ಏನಿಲ್ಲ. ಚೆಂದದ ಝರಿ, ಜಲಪಾತಗಳಿವೆ, ಅದ್ಭುತ ಸೀನಿಕ್‌ ಬ್ಯೂಟಿ ಇರುವ ತಾಣಗಳಿವೆ, ಸುಂದರವಾದ ಸರೋವರವಿದೆ. ಇಲ್ಲಿ ಬೋಟಿಂಗ್‌ ಇತ್ಯಾದಿ ಮನರಂಜನೆಗೆ ಅವಕಾಶ ಒದಗಿಸಲಾಗಿದೆ.

ವಿವಿಧ ಸಸ್ಯ ಸಂಪತ್ತಿನಿಂದ ಕೂಡಿದ ವೈಲ್ಡ್ ಲೈಫ್‌ ಸ್ಯಾಂಚ್ಯುರಿ ಇದೆ. ಜೊತೆಗೆ ಇಲ್ಲಿ ಸಾಕಷ್ಟು ಮಂದಿ ಬುಡಕಟ್ಟು ಜನರಿದ್ದಾರೆ. ಅವರ ಕಲೆ, ಆಚರಣೆಗಳ ಬಗ್ಗೆ ತಿಳಿದುಕೊಳ್ಳಬಹುದು. ಅವರ ಬದುಕು, ಜನಪದಗಳನ್ನು ಬಿಂಬಿಸೋ ಒಂದು ಮ್ಯೂಸಿಯಂ ಸಹ ಇಲ್ಲಿದೆ. ಇಲ್ಲಿ ಆರ್ಟಿಸ್ಟ್‌ ವಿಲೇಜ್‌ ಇದೆ. ಅಲ್ಲಿಗೆ ವಿಸಿಟ್‌ ಮಾಡಿ ಕಲೆ ಅರಳೋದನ್ನು ಕಂಡು ಬರಬಹುದು.

ಈ ಪ್ರದೇಶದಲ್ಲಿ ಗಿರಾ ಫಾಲ್ಸ್‌, ವನ್ಸದಾ ನ್ಯಾಶನಲ್‌ ಪಾರ್ಕ್ ಹೀಗೆ ಹಲವು ತಾಣಗಳಿವೆ. ಪ್ರಶಾಂತವಾಗಿರುವ ಈ ಜಾಗಗಳು ಹೆಚ್ಚು ಗಲಾಟೆ ಇಲ್ಲದೇ ನೋಡುಗರನ್ನು ತನ್ನತ್ತ ಸೆಳೆಯುವ ಹಾಗಿದೆ.

ಮತ್ತೊಂದು ವಿಶೇಷ ಅಂದ್ರೆ ಭಾರತದಲ್ಲಿಯೂ ಬೆತ್ತಲೆ ಬೀಚ್ ಗಳು ಇವೆ. ಇಲ್ಲಿ ಜಾಗ ಚೆಂದವಾಗಿದೆ, ಇಲ್ಲಿ ಸೆಲ್ಫಿ ತಗೊಳ್ತೀನಿ ಅಂತ ನಿಂತುಕೊಂಡ್ರೆ  ನಿಮ್ಮನ್ನು ಜೈಲಿಗೆ ಹಾಕ್ತಾರೆ. ಇಲ್ಲಿ ಸೆಲ್ಫಿ ತೆಗೆದುಕೊಳ್ಳೋದು ಅಪರಾಧ.

ದೇಶದಲ್ಲಿಯೇ ಸೆಲ್ಫಿ ಬ್ಯಾನ್ ಮಾಡಿದ ಮೊದಲ ಜಿಲ್ಲೆ ಅನ್ನೋ ಹೆಗ್ಗಳಿಕೆಗೆ ದಾಂಗ್‌ ಪಾತ್ರವಾಗಿದೆ. ಟಿ ಕೆ ದಮೋರ್‌ ಅನ್ನೋ ಇಲ್ಲಿನ ಆಡಳಿತಾಧಿಕಾರಿ ಜೂ.23 ರಿಂದ ಇಂಥದ್ದೊಂದು ನಿಯಮ ತಂದಿದ್ದಾರೆ. ಇದಕ್ಕೂ ಮೊದಲು ವಾಘೈ ಹಾಗೂ ಸಪುತಾರಾ ಹೈವೇ, ಜಲಪಾತ ಮೊದಲಾದೆಡೆ ಸೆಲ್ಫಿ ಬ್ಯಾನ್ ಮಾಡಲಾಗಿತ್ತು. ಈಗ ಈ ಊರುಗಳಲ್ಲಿ ಸೆಲ್ಫಿ ಬ್ಯಾನ್ ಮಾತ್ರ ಅಲ್ಲ, ಇಲ್ಲಿನ ಸ್ಥಳೀಯರೂ ಮಳೆಗಾಲದಲ್ಲಿ ನದೀ ತೀರಕ್ಕೆ ಬಟ್ಟೆ ತೊಳೆಯೋದಕ್ಕೆ, ಸ್ನಾನಕ್ಕೆ ಹೋಗುವುದಕ್ಕೂ ನಿಷೇಧ ಹೇರಲಾಗಿದೆ.

ಈ ಕಾನೂನನ್ನು ಯಾಕೆ ಜಾರಿಗೆ ತಂದರು ಅಂತ ನೋಡೋಣ. ಪ್ರಕೃತಿ ಸೌಂದರ್ಯವನ್ನು ಸವಿಯಲು ಅಪಾರ ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರ್ತಾರೆ.  ಹೀಗೆ ಬಂದವರು ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ತೆಗೆಯುತ್ತಾರೆ. ಇದರಿಂದ ಈ ಜಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಾಯುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಜನರು ಅಪಾಯ ಸ್ಥಳಗಳಲ್ಲಿ ಅಂದ್ರೆ ಜಲಪಾತ, ಬೆಟ್ಟದ ಅಂಚು, ನದಿ ದಂಡೆ, ಇಳಿಜಾರುಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಾರೆ. ಮಳೆಗಾಲವಾದ ಕಾರಣ ತೇವಾಂಶಕ್ಕೆ ಕಾಲು ಜಾರಿ ಬಿದ್ದು ಗಂಭೀರ ಗಾಯ ಮಾಡಿಕೊಳ್ಳುತ್ತಾರೆ, ಇಲ್ಲವೇ ಸಾವನ್ನಪ್ಪುತ್ತಾರೆ. ಈ ಕಾರಣದಿಂದ ಈ ಜಾಗಗಳಿಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳಲು ನಿಷೇಧ ಹೇರಲಾಗಿದೆ.

ಇಲ್ಲಿನ ಜಿಲ್ಲಾಡಳಿತ ಇಂಥದ್ದೊಂದು ಕಠಿಣ ಕಾನೂನು ತಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೋವಿಡ್‌ ಕಾರಣಕ್ಕೆ ಮುಚ್ಚಲಾಗಿದ್ದ ಪ್ರವಾಸಿ ತಾಣಗಳು ತೆರೆಯುತ್ತವೆ. ಆಗ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ಸುರಕ್ಷತೆಗಾಗಿ ಜಿಲ್ಲಾಡಳಿತ ಈ ನಿಯಮ ತಂದಿದೆ.

ಟಾಪ್ ನ್ಯೂಸ್

Untitled-1-Recovered

ಬಂಡಾಯ ನೆಲದ ನಾಯಕ ಮುನೇನಕೊಪ್ಪ

fgh

ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್

iyg

ಬೀದಿಗೆ ಬಿದ್ದ ಹನಿ ಸಿಂಗ್ ದಾಂಪತ್ಯ ಕಲಹ: ಪತಿ ವಿರುದ್ಧ ಪತ್ನಿ ಶಾಲಿನಿ ಗಂಭೀರ ಆರೋಪ

Siddaramaiah alleges that ED’s attack on Zameer’s house is politically motivated

ಜಮೀರ್ ಮನೆ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ ಆರೋಪ

ತಂದೆಯ ಶವವನ್ನು ಮನೆಯಲ್ಲೇ ಅಡಗಿಸಿಟ್ಟ ಸಹೋದರಿಯರು: ಆತ್ಮಹತ್ಯೆ ಯತ್ನ

ತಂದೆಯ ಶವವನ್ನು ಮನೆಯಲ್ಲೇ ಅಡಗಿಸಿಟ್ಟ ಸಹೋದರಿಯರು: ಆತ್ಮಹತ್ಯೆ ಯತ್ನ

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

Parliament disrupted to protect interest of one family: Ravi Shankar Prasad attacks Congress on Pegasus row

ಒಂದು ಕುಟುಂಬದ ಹಿತಾಸಕ್ತಿಗಾಗಿ ಸಂಸತ್ ಕಾರ್ಯ ನಿರ್ವಹಿಸುವುದಿಲ್ಲ : ರವಿಶಂಕರ್ ಪ್ರಸಾದ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CEO takes 90% pay cut to raise staff’s minimum salary to £50,000 – and the company is now thriving

ಸಿಬ್ಬಂದಿಗಳ ಸಂಬಳ ಹೆಚ್ಚಳಕ್ಕೆ ಶೇಕಡಾ. 90ರಷ್ಟು ಸಂಬಳವನ್ನು ಕಡಿತಗೊಳಿಸಿಕೊಂಡ ಸಿಇಒ..!

ಏನಿದು ಮ್ಯುಯಾನುಗಳು? ಭೌತವಿಜ್ಞಾನದ ಬುಡವೇ ಅಲುಗಾಡುತ್ತಿದೆಯೇ…

ಏನಿದು ಮ್ಯುಯಾನುಗಳು? ಭೌತವಿಜ್ಞಾನದ ಬುಡವೇ ಅಲುಗಾಡುತ್ತಿದೆಯೇ…

Why is there a COVID-19 spike in Kerala?

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

ಭಾರತೀಯ ಕ್ರೀಡಾ ಮುಕುಟ “ಮಣಿ’ಪುರ

ಭಾರತೀಯ ಕ್ರೀಡಾ ಮುಕುಟ “ಮಣಿ’ಪುರ

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

MUST WATCH

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

udayavani youtube

ಪಾಕಿಸ್ತಾನ ಹಿಂದೂ ದೇವಾಲಯದ ಮೇಲೆ ದಾಳಿ , ಧ್ವಂಸ !

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

ಹೊಸ ಸೇರ್ಪಡೆ

Yakshagana

ಜನಪ್ರಿಯ ಯಕ್ಷಗಾನ ಮಂಡಳಿ ಮುಂಬಯಿ: ನವೀಕೃತ ಕಚೇರಿಯ ಉದ್ಘಾಟನೆ

Untitled-1-Recovered

ಬಂಡಾಯ ನೆಲದ ನಾಯಕ ಮುನೇನಕೊಪ್ಪ

Terror-Attack

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಉಗ್ರರ ಕರಿನೆರಳು

fgh

ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್

iyg

ಬೀದಿಗೆ ಬಿದ್ದ ಹನಿ ಸಿಂಗ್ ದಾಂಪತ್ಯ ಕಲಹ: ಪತಿ ವಿರುದ್ಧ ಪತ್ನಿ ಶಾಲಿನಿ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.