Cricket world cup; ನೆದರ್ಲೆಂಡ್ಸ್‌  ಎದುರು ಕೊನೆಗೊಂಡೀತೇ ಪಾಕ್‌ ಪರದಾಟ?

ಎರಡೂ ಅಭ್ಯಾಸ ಪಂದ್ಯಗಳನ್ನು ಸೋತಿರುವ ಪಾಕ್‌, ಅಸ್ಥಿರ ಪ್ರದರ್ಶನದ ಆತಂಕ

Team Udayavani, Oct 6, 2023, 6:35 AM IST

1-sadsads

ಹೈದರಾಬಾದ್‌: ಕೂಟದ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಪಾಕಿಸ್ಥಾನ ಶುಕ್ರವಾರ ನೆದರ್ಲೆಂಡ್ಸ್‌ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್‌ ಅಭಿಯಾನವನ್ನು ಆರಂಭಿಸಲಿದೆ. ಹೈದರಾಬಾದ್‌ನ “ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ’ನಲ್ಲಿ ಈ ಹಣಾಹಣಿ ಸಾಗಲಿದೆ.

1992ರ ವಿಶ್ವಕಪ್‌ ಗೆಲುವಿನ ಬಳಿಕ ಚಾಂಪಿಯನ್‌ ಪಟ್ಟ ಅಲಂಕರಿಸಲು ಹವಣಿಸುತ್ತಲೇ ಇರುವ ಪಾಕಿಸ್ಥಾನ ನೆರೆಯ ಭಾರತದ ಟ್ರಾÂಕ್‌ನಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಕಂಡೀತು ಎಂಬುದೊಂದು ಪ್ರಶ್ನೆ. ಶ್ರೀಲಂಕಾದಲ್ಲಿ ನಡೆದ ಕಳೆದ ಏಷ್ಯಾ ಕಪ್‌ ಟೂರ್ನಿಯಲ್ಲಿ ಬೇಗನೇ ನಿರ್ಗಮಿಸಿದ್ದ ಬಾಬರ್‌ ಪಡೆಗೆ ವಿಶ್ವಕಪ್‌ ಎಂಬುದು ಎಂದಿಗಿಂತ ದೊಡ್ಡ ಸವಾಲೆಂಬುದರಲ್ಲಿ ಅನುಮಾನವೇ ಇಲ್ಲ.

ಇನ್ನೊಂದೆಡೆ ನೆದರ್ಲೆಂಡ್ಸ್‌ಗೆ ಇದು 2011ರ ಬಳಿಕ ಮೊದಲ ವಿಶ್ವಕಪ್‌. ಅದು ಅರ್ಹತಾ ಸುತ್ತಿನಲ್ಲಿ ವೆಸ್ಟ್‌ ಇಂಡೀಸ್‌, ಐರ್ಲೆಂಡ್‌ ಮೊದಲಾದ ತಂಡಗಳನ್ನು ಹಿಂದಿಕ್ಕಿ ಬಂದ ಪಡೆ. ವಿಶ್ವಕಪ್‌ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಿದ್ದೇ ಸ್ಕಾಟ್‌ ಎಡ್ವರ್ಡ್ಸ್‌
ತಂಡದ ಪಾಲಿಗೊಂದು ಹೆಮ್ಮೆಯ ಸಂಗತಿ. ಉಳಿದೆಲ್ಲ ತಂಡಗಳು ನೆದರ್ಲೆಂಡ್ಸ್‌ಗಿಂತ ಹೆಚ್ಚಿನ ಅನುಭವ ಹೊಂದಿವೆ. ಒಂದೆರೆಡು ಏರುಪೇರಿನ ಫಲಿತಾಂಶ ದಾಖಲಿಸಿದರೆ ಅದೇ ಡಚ್ಚರ ಪಾಲಿಗೆ ಮೆಚ್ಚುಗೆ ಸೂಚಿಸುವ ಅಂಶವಾಗಲಿದೆ.

ಇದು ಇತ್ತಂಡಗಳ ನಡುವಿನ ಮೊದಲ ವಿಶ್ವಕಪ್‌ ಮುಖಾಮುಖೀ. ಬೇರೆ ಬೇರೆ ಸಂದರ್ಭಗಳಲ್ಲಿ ಪಾಕಿಸ್ಥಾನ-ನೆದರ್ಲೆಂಡ್ಸ್‌ 6 ಸಲ ಎದುರಾಗಿವೆ. ಆರರಲ್ಲೂ ಪಾಕಿಸ್ಥಾನವೇ ಗೆದ್ದು ಬಂದಿದೆ.

ಕಾಡುತ್ತಿದೆ ಅಭ್ಯಾಸದ ಸೋಲು
ಇದೇ ಅಂಗಳದಲ್ಲಿ ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಅನುಭವಿಸಿದ ಸೋಲು ಬಾಬರ್‌ ಸೇನೆಯನ್ನು ಕಾಡುತ್ತಲೇ ಇದೆ. ಮೊದಲು ನ್ಯೂಜಿಲ್ಯಾಂಡ್‌ ವಿರುದ್ಧ 335 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳಲು ವಿಫಲವಾಯಿತು. ಬಳಿಕ ಆಸ್ಟ್ರೇಲಿಯ ವಿರುದ್ಧ 14 ರನ್ನುಗಳಿಂದ ಎಡವಿತು. ಈ ಎರಡೂ ನೋವಿಗೆ ಉಪಶಮನ ಮಾಡಲೋ ಎಂಬಂತೆ ಪಾಕಿಸ್ಥಾನಕ್ಕೆ ಸುಲಭ ಎದುರಾಳಿಯೇ ಆರಂಭದಲ್ಲಿ ಸಿಕ್ಕಿದೆ ಎನ್ನಬಹುದು.

ಪಾಕಿಸ್ಥಾನ ಬಲಾಡ್ಯ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ. ಆದರೆ ಬೌಲಿಂಗ್‌ ವಿಭಾಗದಲ್ಲಿ ಗಂಭೀರ ಸಮಸ್ಯೆಗಳಿವೆ. ಇದನ್ನು ಹೋಗಲಾಡಿಸಿಕೊಂಡರೆ ಮುಂದೆ ಬಲಿಷ್ಠ ತಂಡಗಳ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕೆಲ್ಲ ನೆದರ್ಲೆಂಡ್ಸ್‌ ಮುಖಾಮುಖೀಯನ್ನು ಅದು ವೇದಿಕೆಯಾಗಿ ಬಳಸಿಕೊಳ್ಳಬೇಕಿದೆ.

ಬ್ಯಾಟಿಂಗ್‌ ಬಲಿಷ್ಠ, ಆದರೂ…
ಇಮಾಮ್‌ ಉಲ್‌ ಹಕ್‌, ಫಖಾರ್‌ ಜಮಾನ್‌, ನಾಯಕ ಬಾಬರ್‌ ಆಜಂ, ಕೀಪರ್‌ ಮೊಹಮ್ಮದ್‌ ರಿಜ್ವಾನ್‌, ಇಫ್ತಿಕಾರ್‌ ಆಹ್ಮದ್‌ ಅವರೆಲ್ಲ ಬ್ಯಾಟಿಂಗ್‌ ಸರದಿಯ ಆಧಾರಸ್ತಂಭಗಳಾಗಿದ್ದಾರೆ. ಇವರಲ್ಲಿ ಕೆಲವರಾದರೂ ಕ್ರೀಸ್‌ ಆಕ್ರಮಿಸಿಕೊಂಡರೆ ದೊಡ್ಡ ಮೊತ್ತಕ್ಕೇನೂ ಕೊರತೆ ಕಾಡದು. ಬಾಬರ್‌ ಹೇಳಿದಂತೆ, ಹೈದರಾಬಾದ್‌ ಅಂಗಳದ ಬೌಂಡರಿ ಲೈನ್‌ ಚಿಕ್ಕದಾಗಿದ್ದು, ಟ್ರ್ಯಾಕ್‌ ಕೂಡ ಬ್ಯಾಟಿಂಗ್‌ಗೆ ಸಹಕಾರ ನೀಡುತ್ತಿದೆ. ಹೀಗಾಗಿ ದೊಡ್ಡ ಮೊತ್ತ ಪೇರಿಸಲೇನೂ ಸಮಸ್ಯೆ ಆಗದು.

ಓಪನಿಂಗ್‌ ಮೇಲೆ ಅನುಮಾನ
ಆದರೆ ಪಾಕ್‌ ಓಪನಿಂಗ್‌ ಜೋಡಿಯಾದ ಇಮಾಮ್‌-ಫಖಾರ್‌ ಮೇಲೆ ಅನುಮಾನಗಳಿವೆ. ಇದು ಅಷ್ಟೇನೂ ಅಪಾಯಕಾರಿಯಾಗಿ ಗೋಚರಿಸುತ್ತಿಲ್ಲ. ಇಮಾಮ್‌ ಅವರೇನೋ 50 ಪ್ಲಸ್‌ ಎವರೇಜ್‌ ಹೊಂದಿದ್ದಾರೆ, ಆದರೆ ಫಖಾರ್‌ ಫಾರ್ಮ್ನಲ್ಲಿಲ್ಲ. ಇವರ ಬದಲು ಅಬ್ದುಲ್ಲ ಶಫೀಕ್‌ ಅವರನ್ನು ಆಡಿಸುವ ಯೋಜನೆಯೂ ಇದೆ. ಆದರೆ ಶಫೀಕ್‌ಗೆ ವಿಶ್ವ ಮಟ್ಟದ ಪಂದ್ಯಾವಳಿಯಲ್ಲಿ ಅನುಭವದ ಕೊರತೆ ಇದೆ. ಹೀಗಾಗಿ ಬಾಬರ್‌-ರಿಜ್ವಾನ್‌ ಮೇಲೆ ಒತ್ತಡ ಬೀಳಬಹುದು. ಇದು ಕೂಟದುದ್ದಕ್ಕೂ ಮುಂದುವರಿದರೆ ಕಷ್ಟ.

ಬೌಲಿಂಗ್‌ ಸಮಸ್ಯೆಗಳು…
ಆಲ್‌ರೌಂಡರ್‌ ಶದಾಬ್‌ ಖಾನ್‌ ಅವರ ಫಾರ್ಮ್ ಒಳ್ಳೆಯ ಹೊತ್ತಿನಲ್ಲೇ ಕೈಕೊಟ್ಟಿದೆ. ಕಳೆದ ಏಷ್ಯಾ ಕಪ್‌ನಲ್ಲಿ ಪಾಕ್‌ ವೈಫಲ್ಯಕ್ಕೆ ಇದೂ ಒಂದು ಕಾರಣ. ಹಾಗೆಯೇ ಅಪಾಯಕಾರಿ ಸೀಮರ್‌ ನಸೀಮ್‌ ಶಾ ಕೂಟದಿಂದಲೇ ಬೇರ್ಪಟ್ಟದ್ದು ಕೂಡ ಪಾಕ್‌ ಚಿಂತೆಗೆ ಕಾರಣವಾಗಿದೆ. ಬ್ಯಾಟಿಂಗ್‌ ಟ್ರ್ಯಾಕ್‌ ನಲ್ಲಿ ಅಫ್ರಿದಿ, ರವೂಫ್‌, ಹಸನ್‌ ಅಲಿ ಅವರ ದಾಳಿ ನಿರ್ಣಾಯಕವಾಗಲಿದೆ.

ಸೆಮಿ ಪ್ರೊಫೆಶನಲ್ಸ್‌ ಟೀಮ್‌
ನೆದರ್ಲೆಂಡ್ಸ್‌ “ಸೆಮಿ ಪ್ರೊಫೆಶನಲ್ಸ್‌’ಗಳಿಂದ ಕೂಡಿದ ತಂಡ. 2011ರಲ್ಲೂ ಆಡಿದ್ದ ವೆಸ್ಲಿ ಬರೇಸಿ ಈ ತಂಡದಲ್ಲೂ ಇದ್ದಾರೆ. ದಕ್ಷಿಣ ಆಫ್ರಿಕಾ ಮಾಜಿ ಸ್ಪಿನ್ನರ್‌ ರೋಲ್ಫ್ ವಾನ್‌ ಡರ್‌ ಮರ್ವ್‌ ಮತ್ತೋರ್ವ ಹಿರಿಯ ಆಟಗಾರ. ಮಧ್ಯಮ ಕ್ರಮಾಂಕದ ಬ್ಯಾಟರ್‌, ಆಂಧ್ರ ಮೂಲದ ತೇಜ ನಿಡಮನೂರು, ಆಲ್‌ರೌಂಡರ್‌ ಬಾಸ್‌ ಡಿ ಲೀಡ್‌ ಪ್ರಮುಖ ಆಟಗಾರರು. ತೇಜ ಅವರಿಗಿದು ತವರಿನ ಅಂಗಳ. ಬಾಸ್‌ ಡಿ ಲೀಡ್‌ ಸ್ಕಾಟ್ಲೆಂಡ್‌ ವಿರುದ್ಧ 92 ಎಸೆತಗಳಲ್ಲಿ 123 ರನ್‌ ಬಾರಿಸಿ ತಂಡದ ಅರ್ಹತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ನೆದರ್ಲೆಂಡ್‌ ತಂಡ ಕಳೆದುಕೊಳ್ಳುವುದೇನೂ ಇಲ್ಲ ನಿಜ, ಆದರೆ ಮುಖ್ಯ ಸುತ್ತು ಪ್ರವೇಶಿಸಿದ್ದಕ್ಕೆ ಒಂದಿಷ್ಟಾದರೂ ಗೌರವ ಕೊಡಲೇಬೇಕಲ್ಲ!

ಪಾಕ್‌ ಅಭಿಮಾನಿಗಳ ನಿರೀಕ್ಷೆಯಲ್ಲಿ ಬಾಬರ್‌
ಪಾಕಿಸ್ಥಾನ ತಂಡ ಭಾರತದ ನೆಲದಲ್ಲಿ ಶುಕ್ರವಾರ ಮೊದಲ ವಿಶ್ವಕಪ್‌ ಪಂದ್ಯವಾಡಲಿದೆ. ಬಾಬರ್‌ ಆಜಂ ಬಳಗಕ್ಕೆ ಹೈದರಾಬಾದ್‌ನಲ್ಲಿ ಅದ್ಧೂರಿಯ ಸ್ವಾಗತವನ್ನೂ ನೀಡಲಾಗಿತ್ತು. ಇದೀಗ ಹೋರಾಟ ಆರಂಭವಾಗಲಿದ್ದು, ತಮ್ಮ ದೇಶದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲಿಸಬೇಕು ಎಂಬುದಾಗಿ ಬಾಬರ್‌ ಅಭಿಲಾಷೆ ತೋಡಿಕೊಂಡಿದ್ದಾರೆ.

“ಭಾರತದಲ್ಲಿ ನಮಗೆ ಆತ್ಮೀಯ ಸ್ವಾಗತ ಲಭಿಸಿದೆ. ವಿಮಾನ ನಿಲ್ದಾಣದಿಂದ ಹೊಟೇಲ್‌ ವರೆಗಿನ ದಾರಿಯುದ್ದಕ್ಕೂ ನಮ್ಮನ್ನು ಆದರದಿಂದಲೇ ಬರಮಾಡಿಕೊಳ್ಳಲಾಗಿದೆ. ಆದರೆ ಪಂದ್ಯದ ವೇಳೆ ನಮ್ಮನ್ನು ಹುರಿದುಂಬಿಸಲು ನಮ್ಮ ದೇಶದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಆಗಮಿಸಬೇಕೆಂಬುದು ನಮ್ಮ ಬಯಕೆ’ ಎಂಬುದಾಗಿ ಬಾಬರ್‌ ಆಜಂ ವಿನಂತಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.