ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತೆ ಶಾರ್ಟ್ ಸರ್ಕ್ಯೂಟ್
Team Udayavani, Mar 26, 2020, 12:27 PM IST
ರಾಯಚೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಕರ್ತವ್ಯನಿರತ ಸಿಬ್ಬಂದಿ ಕಚೇರಿ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ.
ಇನ್ ವರ್ಟರ್ಗೆ ಬೆಂಕಿ ಕಾಣಿಸಿಕೊಂಡಿದೆ. ಕೆಲವು ತಿಂಗಳ ಹಿಂದೆಯಷ್ಟೇ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಚೇರಿ ಪಿಠೋಪಕರಣಗಳೆಲ್ಲ ಸುಟ್ಟಿದ್ದವು. ಅದನ್ನು ದುರಸ್ತಿ ಮಾಡಲು ಸಾಕಷ್ಟು ದಿನಗಳ ಕಾಲ ಡಿಸಿ ಕಚೇರಿ ಸಭಾಂಗಣಕ್ಕೆ ಕಚೇರಿ ಸ್ಥಳಾಂತರಿಸಲಾಗಿತ್ತು. ಅದಾಗಿ ಕೆಲ ತಿಂಗಳು ಕಳೆಯದೇ ಈಗ ಮತ್ತೆ ಅವಘಡ ಸಂಭವಿಸಿದೆ
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚನ ಅನಾಹುತಕ್ಕೆ ತಪ್ಪಿಸಿದ್ದಾರೆ.