Updated at Wed,26th Jul, 2017 10:12AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಲಾ ನಿರ್ದೇಶಕ ಅರುಣ್‌ ಸಾಗರ್‌ ಗೋದಾಮಿಗೆ ಬೆಂಕಿ ;ಲಕ್ಷಾಂತರ ನಷ್ಟ 

ಬೆಂಗಳೂರು : ನಗರದ ಉತ್ತರಹಳ್ಳಿಯಲ್ಲಿರುವ ಕಲಾ ನಿರ್ದೇಶಕ ,ನಟ ಅರುಣ್‌ ಸಾಗರ್‌ ಅವರ ಗೋದಾಮಿನಲ್ಲಿ  ಫೆಬ್ರವರಿ 15 ರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು ಚಿತ್ರಗಳಿಗೆ ಬಳಸಿದ್ದ, ಬಳಸಬೇಕಾಗಿದ್ದ  ನೂರಾರು ಅಪೂರ್ವ ಕಲಾಕೃತಿಗಳು ಸುಟ್ಟು ಭಸ್ಮವಾಗಿದೆ. 

3 ಗೋದಾಮು ಗಳಲ್ಲಿ ದ್ದ ಅನೇಕ ಕಲಾಕೃತಿಗಳು ಭಸ್ಮವಾಗಿದ್ದು, ಅಗ್ನಿ 1.5 ಎಕರೆಯಷ್ಟು ಪ್ರದೇಶಕ್ಕೆ ವ್ಯಾಪಿಸಿದೆ. ಸುಮಾರು 75 ಲಕ್ಷ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಬೆಂಕಿಯನ್ನು ನಂದಿಸಲು ಸ್ಥಳೀಯರು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಅಗ್ನಿ ಶಾಮಕದಳದ ಸಿಬಂದಿಗಳು ಸ್ಥಳಕ್ಕಾಗಮಿಸುವಷ್ಟರಲ್ಲಿ  ಬೆಂಕಿಯ ಕೆನ್ನಾಲೆಗೆ ಗೋದಾಮುಗಳನ್ನು ಆಹುತಿ ಪಡೆದಿತ್ತು. 

ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರಬಹುದು, ನನಗೆ ಯಾರೂ ಬೆಂಕಿ ಕೊಟ್ಟಿರುವ ಬಗ್ಗೆ ಅನುಮಾನವಿಲ್ಲ ಎಂದು ಅರುಣ್‌ ಸಾಗರ್‌ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 


Back to Top