ರಾಮಾ ರಾಮಾ ರೇ ಮೇಕಿಂಗ್‌ ಪುಸ್ತಕ ಬರಲಿದೆ


Team Udayavani, Oct 24, 2017, 10:40 AM IST

Rama-Rama-re.jpg

ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡ ನೂರಾರು ಸಿನಿಮಾಗಳಿವೆ. ಆ ಪೈಕಿ ಬೆರಳೆಣಿಕೆ ಚಿತ್ರಗಳು, ಆ ಸಿನಿಮಾದ ಹುಟ್ಟು, ಪಟ್ಟ ಕಷ್ಟ ಪಡೆದ ಸಂಭ್ರಮ ಕುರಿತು ಪುಸ್ತಕ ಮೂಲಕ ಅಪರೂಪದ ವಿವರಗಳನ್ನು ದಾಖಲಿಸಿ ಬಿಡುಗಡೆ ಮಾಡಿದ್ದುಂಟು. ಅದರಲ್ಲೂ ದಶಕದ ಹಿಂದೆ ಬಂದ “ಮುಂಗಾರು ಮಳೆ’ ಚಿತ್ರ ಯಶಸ್ಸು ಕಂಡಿದ್ದೇ ತಡ, ಆ ಕುರಿತಾದ ಪುಸ್ತಕ ಬಿಡುಗಡೆಯಾಯಿತು.

ಆ ಬಳಿಕ “ಮಠ’, “ಎದ್ದೇಳು ಮಂಜುನಾಥ’ ಚಿತ್ರಗಳ ಬಗ್ಗೆಯೂ ಪುಸ್ತಕ ಹೊರಬಂತು. ಈಗ “ರಾಮಾ ರಾಮಾ ರೇ’ ಚಿತ್ರದ ಸರದಿ. ಹೌದು, ಹೊಸಬರೇ ಸೇರಿ ಮಾಡಿದ ‘ರಾಮಾ ರಾಮಾ ರೇ’ ಸಿನಿಮಾ ಯಶಸ್ಸು ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಆ ಸಿನಿಮಾ ಶುರುವಾಗಿದ್ದು, ಎಲ್ಲರೂ ಕಷ್ಟಪಟ್ಟಿದ್ದು, ಅನುಭವಿಸಿದ ನೋವು,ನಲಿವುಗಳ ಕುರಿತಾದ ಮೇಕಿಂಗ್‌ ಪುಸ್ತಕವೊಂದು ಹೊರಬರುತ್ತಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್‌ನಲ್ಲಿ “ರಾಮಾ ರಾಮಾ ರೇ’ ಪುಸ್ತಕ ಬಿಡುಗಡೆಯಾಗಲಿದೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ನಿರ್ದೇಶಕ ಸತ್ಯಪ್ರಕಾಶ್‌, “ನಮಗೆ ಚಿತ್ರದ ಮೇಕಿಂಗ್‌ ವೀಡಿಯೋ ಮಾಡಿ ರಿಲೀಸ್‌ ಮಾಡುವ ಆಸೆ ಇತ್ತು. ಆದರೆ, ಹಾರ್ಡ್‌ ಡಿಸ್ಕ್ ಕ್ರಾಷ್‌ ಆಗಿದ್ದರಿಂದ ಅದನ್ನು ಹೊರ ತರಲು ಆಗಲಿಲ್ಲ.

ಆದರೆ, ಚಿತ್ರಕ್ಕೆ ಕಥೆ ಹುಟ್ಟಿದ್ದು, ಚಿತ್ರಕಥೆ ಮಾಡಿದ್ದು, ಅದು ಶುರುವಾಗಿದ್ದು, ಅದಕ್ಕೊಂದು ಶೀರ್ಷಿಕೆ ಇಟ್ಟಿದ್ದು, ಎಲ್ಲರೂ ಸೇರಿ ಕಷ್ಟಪಟ್ಟು ಸಿನಿಮಾ ಮಾಡಿದ್ದರ ಮೇಕಿಂಗ್‌ ಕುರಿತು ಬರಹಗಳ ರೂಪದಲ್ಲಿ ಓದುಗರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಸದ್ಯಕ್ಕೆ ಮೂವರು ಪ್ರಕಾಶಕರು ಸಿಕ್ಕಿದ್ದಾರೆ. ಯಾರ ಬಳಿ ಪುಸ್ತಕ ಮುದ್ರಣ ಮಾಡಿಸಿ ಬಿಡುಗಡೆ ಮಾಡಬೇಕೆಂಬ ಬಗ್ಗೆ ಮಾತುಕತೆ ನಡೆಯುತ್ತಿದೆ.

ಈಗಷ್ಟೇ ಮುಖಪುಟ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು, ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಸಿದ್ದಲಿಂಗಯ್ಯ ಕಂಬಾಳು ಅವರೇ ಪುಸ್ತಕ ಬರೆದಿದ್ದಾರೆ. ಯಾಕೆಂದರೆ, ನಮ್ಮ ಬಗ್ಗೆ ನಾವೇ ಬರೆದುಕೊಳ್ಳಬಾರದು. ಅದೊಂದು ಕಾದಂಬರಿ ರೀತಿಯ ಫೀಲ್‌ ಆಗಿರಬೇಕು ಎಂಬ ಕಾರಣಕ್ಕೆ ಅವರಿಂದಲೇ ಪುಸ್ತಕ ಬರೆಸುತ್ತಿದ್ದೇವೆ. ಚಿತ್ರ ಶುರುವಾದಾಗಿನಿಂದ ರಿಲೀಸ್‌ ಆಗಿ, ಯಶಸ್ಸು ಪಡೆದವರೆಗೂ ಅಪರೂಪದ ಮಾಹಿತಿಗಳು ಇರಲಿವೆ.

ಕೊನೆಯಲ್ಲಿ ಚಿತ್ರಕಥೆ ಇರಲಿದೆ’ ಎಂದು ಹೇಳುತ್ತಾರೆ ಸತ್ಯಪ್ರಕಾಶ್‌. ಈ ಪುಸ್ತಕ ಬಿಡುಗಡೆ ಮಾಡುವ ಇನ್ನೊಂದು ವಿಶೇಷವೆಂದರೆ, ಈಗ ಚಿತ್ರ ಮಾಡಲು ಯುವ ನಿರ್ದೇಶಕರು ತುದಿಗಾಲ ಮೇಲಿದ್ದಾರೆ. ಅಂತಹವರಿಗೆ ನಿರ್ಮಾಪಕರು ಸಿಗುವುದಿಲ್ಲ. ಅವರೆಲ್ಲರೂ ಹೇಗೆ ಸಿನಿಮಾ ಮಾಡಬೇಕು ಎಂಬುದನ್ನು ಇಲ್ಲಿ ಹೇಳಹೊರಟಿದ್ದೇನೆ. ಈ ಪುಸ್ತಕದಿಂದ ಕೆಲ ಸಿನಿಪ್ರೇಮಿಗಳಿಗೆ ಅನುಕೂಲವಾದರೆ ಅಷ್ಟು ಸಾಕು’ ಎನ್ನುತ್ತಾರೆ ಅವರು.

ಟಾಪ್ ನ್ಯೂಸ್

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.