ಅಳುತ್ತಿದ್ದ ಮಗುವನ್ನು ಕಾಲಿನಿಂದ ಒದ್ದು ಕೊಂದ ಮಹಿಳೆ!


Team Udayavani, Jan 15, 2017, 11:45 AM IST

child-rape.jpg

ಬೆಂಗಳೂರು: ಅಳುತ್ತಿದ್ದ ಮಗುವನ್ನು ಸಮಾಧಾನ ಮಾಡಲಾಗದ ಮಹಿಳೆಯೊಬ್ಬಳು ಹಲ್ಲೆ ನಡೆಸಿ ಕೊಲೆಗೈದಿರುವ ಹೃದಯ ವಿದ್ರಾವಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನೀಲಸಂದ್ರದ ಆರ್ಮುಗಂ ಮತ್ತು ಶಾರದಾ ದಂಪತಿಯ 2 ವರ್ಷದ ವಿಜಯ್‌ ಕೊಲೆಯಾದ ಹಸುಳೆ. ಜ. 9ರಂದು ಮಗು ಮೃತಪಟ್ಟಿತ್ತು.

ಪಾಲಕರು ಮಗು ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಭಾವಿಸಿದ್ದರು. ಆದರೆ, ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಗುವಿನ ಮೇಲೆ ತೀವ್ರ ಹಲ್ಲೆ ನಡೆದಿರುವುದು ಬಯಲಿಗೆ ಬಂದಿದ್ದು, ವಿಚಾರಣೆ ನಡೆಸಿದಾಗ ಆರ್ಮುಗಂ ಅವರ ಹಿರಿಯ ಮಗ ಕೆಲಸ ಮಾಡುತ್ತಿದ್ದ ಪ್ರಿಟಿಂಗ್‌ ಪ್ರಸ್‌ನ ಮಾಲೀಕನ ಪತ್ನಿಯಾದ ನೀಲಸಂದ್ರದ ಎಂ.ಜಿ. ಗಾರ್ಡನ್‌ ನಿವಾಸಿ ಕಸ್ತೂರಿ ಬಾಯಿ (42) ಮಗುವಿನ ಮೇಲೆ ಮಾರಕ ಹಲ್ಲೆ ನಡೆಸಿದ್ದಳು ಎಂಬುದು ಗೊತ್ತಾಗಿದೆ. ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕಟ್ಟಡ ಕಾರ್ಮಿಕರ ಪುತ್ರ

ನೀಲಸಂದ್ರದ ಆರ್ಮುಗಂ ಮತ್ತು ಶಾರದಾ ದಂಪತಿಯು ನಿರ್ಮಾಣ ಹಂತದ ಕಟ್ಟಡ ಕಾರ್ಮಿಕರಾಗಿದ್ದು, ಇವರಿಗೆ ಮೂವರು ಗಂಡು ಮಕ್ಕಳು. ಆರೋಪಿ ಮಹಿಳೆ ಇವರ ಮನೆ ಬಳಿ ಪ್ರಿಟಿಂಗ್‌ ಪ್ರಸ್‌ ಹೊಂದಿದ್ದು, ಈಕೆಯ ಬಳಿ ದಂಪತಿಯ ಮೊದಲ ಮಗ ಪ್ರಿಂಟಿಂಗ್‌ ಕೆಲಸಕ್ಕೆ ಹೋಗುತ್ತಿದ್ದ.

ಜ.9ರಂದು ದಂಪತಿಯ ಎರಡನೇ ಮಗ, ತನ್ನ ಎರಡು ವರ್ಷದ ಮಗುವನ್ನು ಕರೆದುಕೊಂಡು ಪ್ರಿಂಟಿಂಗ್‌ ಪ್ರಸ್‌ಗೆ ತೆರಳಿದ್ದ. “ನಿಮ್ಮ ಅಣ್ಣ ಕೆಲಸಕ್ಕೆ ಬಂದಿಲ್ಲ, ಎಲ್ಲಿ ಹೋಗಿದ್ದಾನೋ ನೋಡಿಕೊಂಡು ಬಾ’ ಎಂದು ಹೇಳಿ ಆತನನ್ನು ಕಳುಹಿಸಿದ್ದಳು. ಆ ವೇಳೆ ಮಗುವು ಕಸ್ತೂರಿಬಾಯಿ ಅವರ ಸುಪರ್ದಿಯಲ್ಲಿತ್ತು. ಈ ಸಂದರ್ಭದಲ್ಲಿ ಮಗು ತುಂಬಾ ಅತ್ತಿದ್ದರಿಂದ ಸಿಟ್ಟಾದ ಆಕೆ ಮಗುವಿಗೆ ಕಾಲಿನಿಂದ ಒದ್ದಿದ್ದಳು. ಬಳಿಕ ಪುಟ್ಟ ಕಡೆಗೋಲಿನಿಂದ ಮಗುವಿನ ಮೇಲೆ ಹÇÉೆ ನಡೆಸಿದ್ದಳು. ತೀವ್ರವಾಗಿ ಗಾಯಗೊಂಡ ಮಗು ಪ್ರಜ್ಞಾಹೀನವಾಗಿತ್ತು. ಮಗುವಿನ ಅಣ್ಣ ಮನೆಗೆ ವಾಪಸ್‌ ಬಂದಾಗ ಕಸ್ತೂರಿ ಮಗುವನ್ನು ಕೊಂಡೊಯ್ಯುವಂತೆ ಹೇಳಿದ್ದಳು.

ಮನೆಗೆ ಹೋದ ಕೂಡಲೇ ಮಗು ಮಲ ವಿಸರ್ಜನೆ ಮಾಡಿಕೊಂಡಿತ್ತು. ಏನೂ ತಿಳಿಯದ ಮಕ್ಕಳು ಮಗುವನ್ನು ಶುಚಿಗೊಳಿಸಿ ಮಲಗಿಸಿದ್ದರು. ಬಳಿಕ ಸಂಜೆಯಾದರೂ ಮಗು ಎಚ್ಚರಗೊಂಡಿಲ್ಲ. ಮನೆಗೆ ಬಂದ ಪೋಷಕರು ಮಗುವನ್ನು ಸೇಂಟ್‌ ಫಿಲೋಮಿನಾ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಮಗುವನ್ನು ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದರು. ಮರುದಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದಾಗ ವರದಿಯಲ್ಲಿ ಹಲ್ಲೆಯಿಂದಾಗಿ ಮಗು ಮೃತಪಟ್ಟಿದೆ ಎಂಬ ಸತ್ಯ ಹೊರ ಬಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಮಹಿಳೆ ಕೊಲೆ ಮಾಡಿರುವುದು ತಿಳಿದಿದೆ.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.