ಜರ್ಮನಿ ಸಲೂನಿನಲ್ಲಿ ಹೆಬ್ಬಾವಿನಿಂದ ಮಸಾಜ್!
Team Udayavani, Mar 20, 2017, 11:56 AM IST
ಸಲೂನ್‌ಗಳು, ಪಾರ್ಲರ್‌ಗಳು ಜನರನ್ನು ಆಕರ್ಷಿಸಲು ನಾನಾ ತರದ ಆಮಿಷಗಳನ್ನು ಒಡ್ಡುವುದು ನಿಮಗೆ ತಿಳಿದೇ ಇದೆ. ಜರ್ಮನಿಯ ಡ್ರೆಸ್ಡನ್‌ನ ಒಂದು ಸಲೂನ್ ವಿಲಕ್ಷಣ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ, ಜನ ಕೂಡ ಆ ಪಾರ್ಲರ್‌ಗೆ ಇನ್ನಿಲ್ಲದಂತೆ ಎಡತಾಕುತ್ತಿದ್ದಾರೆ. ಹಾಗಿದ್ದರೆ
ಆ ಆಕರ್ಷಣೆ ಏನು ಎಂದು ಕೇಳುತ್ತೀರಾ? ಹೆಬ್ಟಾವಿನಿಂದ ಕುತ್ತಿಗೆ ಮಸಾಜ್! ಹೌದು, ಈ ಪಾರ್ಲರ್‌ನಲ್ಲಿ
ಹೆಬ್ಟಾವೊಂದಿದೆ. ಅದರ ಹೆಸರು ಮಾಂಟಿ. ಈ ಹೆಬ್ಟಾವು ಗ್ರಾಹಕರ ಕೊರಳಿಗೆ ಸುತ್ತಿಕೊಳ್ಳುತ್ತದೆ. ಇದರಿಂದ ಗ್ರಾಹಕರಿಗೆ ಹಿತಾನುಭವವಾಗುತ್ತದಂತೆ. ಈ ಹೆಬ್ಟಾವಿನ ಸೇವೆ ಇಲ್ಲಿ 13 ವರ್ಷಗಳಿಂದ ನಡೆಯುತ್ತಿದೆಯಂತೆ. ಸಲೂನ್ ಮಾಲೀಕರು ಈ ಸೇವೆಗಾಗಿ ಹೆಚ್ಚುವರಿ ಹಣ ಪಡೆಯುವುದಿಲ್ಲ. ಇದು ಉಚಿತ ಸೇವೆ. ಆದರೆ ಗ್ರಾಹಕರು ಮಾಂಟಿಯ ಆಹಾರಕ್ಕಾಗಿ ಹಣ ನೀಡಬಹುದು. ಸಾಮಾನ್ಯವಾಗಿ ಹೆಬ್ಟಾವುಗಳು ಇತರ ಪ್ರಾಣಿಗಳ ಕೊರಳನ್ನು ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆ. ಆದರೆ ಈ ಹೆಬ್ಟಾವು ಕೊರಳಿಗೆ ಸುತ್ತಿಕೊಂಡು ಹಿತಾನುಭವ ನೀಡುವುದು ಅಚ್ಚರಿಯ ವಿಷಯವಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ