ನಾಯಿಗಳು ರಸ್ತೆಗಳಲ್ಲಿ ಮಲ ವಿಸರ್ಜಿಸಿದರೆ ಮಾಲಕರಿಗೆ ದಂಡ !
Team Udayavani, Oct 13, 2017, 5:18 AM IST
ನಗರಗಳ ರಸ್ತೆಗಳಲ್ಲಿ ನಡೆದಾಡಲು ಜನರು ಪಡಬೇಕಿರುವ ಪಾಡು ಅಷ್ಟಿಷ್ಟಲ್ಲ.ರಸ್ತೆಗಳ ಮೇಲೆ ಹೊಂಡಗುಂಡಿ ಸಮಸ್ಯೆ ಇದ್ದರೆ ಪಕ್ಕದ ಪಾದಚಾರಿ ರಸ್ತೆಯಲ್ಲಿ ಸಾಕುನಾಯಿಗಳ ಮಲವೇ ದೊಡ್ಡ ಸಮಸ್ಯೆ. ಸರಕಾರಗಳು, ನಗರಾಡಳಿತ ಗಳು ಜನರಿಗೆ ಎಷ್ಟೇ ಬಾರಿ ತಿಳಿಹೇಳಿದರೂ ಏನೂ ಪ್ರಯೋ ಜನ ವಿಲ್ಲ. ನಾಯಿಗಳಿಗೆ ರಸ್ತೆಗಳೇ ಮಲ ವಿಸರ್ಜಿ ಸುವ ಶೌಚಾಲಯ ಎಂದು ಜನ ತಿಳಿದಿದ್ದಾರೆ. ಈ ಸಮಸ್ಯೆ ದೇಶದ ಎಲ್ಲ ನಗರಗಳಲ್ಲೂ ಇದೆ.
ಅದರೆ ಮಧ್ಯಪ್ರದೇಶದ ನಗರಗಳಾದ ಇಂದೋರ್ ಮತ್ತು ಜಬಲ್ಪುರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳು ಮಲ ವಿಸರ್ಜಿಸಿದರೆ ನಾಯಿ ಮಾಲಕರಿಗೆ ಸ್ಥಳದಲ್ಲೇ ದಂಡ ವಿಧಿಸುವಂಥ ಹೊಸ ನೀತಿಯನ್ನು ಜಾರಿ ಮಾಡ ಲಾಗಿದೆ. ಜಬಲ್ಪುರ ಜಿಲ್ಲಾಡಳಿತ 5,000 ರೂ. ದಂಡ ವಿಧಿಸಲು ನಿರ್ಧರಿಸಿದೆ. ಆದರೆ ಇಂದೋರ್ ಇನ್ನೂ ದಂಡದ ಮೊತ್ತವನ್ನು ನಿರ್ಧರಿಸಿಲ್ಲ. ಆದರೆ ಸಾಕುನಾಯಿಗಳು ರಸ್ತೆಗಳಲ್ಲಿ ಮಲ ವಿಸರ್ಜಿಸುವುದನ್ನು ಕಂಡರೆ ಸಾರ್ವ ಜನಿಕರು ದೂರು ದಾಖಲಿಸಬಹುದು ಎಂದು ಇಂದೋರ್ ಮೇಯರ್ ಮಾಲಿನ ಲಕ್ಷ್ಮಣ್ ಸಿಂಗ್ ಆದೇಶ ನೀಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್