ನೋ ಟಾಯ್ಲೆಟ್, ನೋ ಪ್ರೇಮ್ ಕಹಾನಿ!
Team Udayavani, Oct 23, 2017, 5:07 AM IST
ಯಾವ ಊರಲ್ಲಿ ನೀರು ಬರೋದಿಲ್ವೋ ಆ ಊರಿಗೆ ಮಗಳನ್ನು ಕೊಡೋದಿಲ್ಲ ಎಂದು ನಮ್ಮ ರಾಜ್ಯದಲ್ಲೇ ಕೆಲ ಊರುಗಳಲ್ಲಿ ಹೆಣ್ಣು ಹೆತ್ತವರು ಶಪಥ ಮಾಡಿದ್ದನ್ನು ನಾವು ಕೇಳಿದ್ದೇವೆ. ಆದರೆ, ಉತ್ತರಪ್ರದೇಶದ ಭಾಗಪತ್ ಜಿಲ್ಲೆಯ ಬಿಗ್ವಾಡಾ ಎಂಬ ಹಳ್ಳಿಯಲ್ಲಿನ ಹೆಣ್ಣು ಹೆತ್ತವರು ಇದಕ್ಕಿಂತ ಭಿನ್ನವಾದ ಹೆಜ್ಜೆಯಿಟ್ಟಿದ್ದಾರೆ. ಟಾಯ್ಲೆಟ್ ಇಲ್ಲದ ಮನೆಗೆ ತಮ್ಮ ಮನೆ ಹೆಣ್ಮಕ್ಕಳನ್ನು ಕೊಡೋದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದಾರಂತೆ. ಇತ್ತೀಚೆಗೆ, ಗ್ರಾಮ ಪಂಚಾಯ್ತಿ ಸಭೆಯಲ್ಲಿ ಈ ನಿರ್ಧಾರವನ್ನು ಒಕ್ಕೊರಲಾಗಿ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ತಮ್ಮ ಮನೆಗಳಲ್ಲಿ ಟಾಯ್ಲೆಟ್ ಇಲ್ಲದವರು ಈ ಹಳ್ಳಿಯ ನೆಂಟಸ್ತನ ಬಯಸಿದರೆ, ಅಂಥವರು ಮೊದಲು ಟಾಯ್ಲೆಟ್ ಕಟ್ಟಿಸಿದ ನಂತರವೇ ಹೆಣ್ಣು ನೋಡಲು ಈ ಹಳ್ಳಿಗೆ ಬರಬೇಕೆಂದು ಕಟ್ಟಾಜ್ಞೆ ವಿಧಿಸಲಾಗಿದೆ! ಇತ್ತೀಚೆಗೆ ಬಿಡುಗಡೆಯಾಗಿದ್ದ ಹಿಂದಿ ಚಿತ್ರ “ಟಾಯ್ಲೆಟ್: ಏಕ್ ಪ್ರೇಮ್ ಕಹಾನಿ’ ಚಿತ್ರದಿಂದ ಪ್ರಭಾವಿತರಾದರೋ ಏನೋ ಈ ಜನ? ಗೊತ್ತಿಲ್ಲ. ಹೀಗಾಗಿ, ಆ ಹಳ್ಳಿಗೆ ಹೆಣ್ಣು ನೋಡಲು ಬರುವವರು, ತಮ್ಮ ಮನೆಯಲ್ಲಿರುವ ಟಾಯ್ಲೆಟ್ನಲ್ಲಿ ಸಂಡಾಸಿಗೆ ಕುಳಿತಾಗ ಸೆಲ್ಫಿ ಕ್ಲಿಕ್ಕಿಸಿಕೊಂಡು ಬರಬೇಕಾದ ಪರಿಸ್ಥಿತಿ ಬಂದಿದೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…