“ಯೇ ಹೈ ಇಂಡಿಯಾ” ಚಿತ್ರದ ಮೂಲಕ ಬಾಲಿವುಡ್ಗೆ ಬಾಬಾ ರಾಮ್ ದೇವ್
Team Udayavani, Aug 9, 2017, 7:30 PM IST
ಮುಂಬಯಿ : ಯೋಗ ಗುರು ಬಾಬಾ ರಾಮ್ ದೇವ್ ಅವರು ಈಗ ಸಿನೇಮಾ ರಂಗಕ್ಕೂ ಧುಮುಕಿದ್ದಾರೆ. ಸದ್ಯದಲ್ಲೇ ತೆರೆ ಕಾಣಲಿರುವ “ಯೇ ಹೈ ಇಂಡಿಯಾ” ಚಿತ್ರದ ಪ್ರಚಾರಾಭಿಯಾನದಲ್ಲಿ ತೊಡಗಿರುವ ಬಾಬಾ ರಾಮ್ ದೇವ್, ಈ ಚಿತ್ರದಲ್ಲಿನ ಸೈಂಯಾ ಸೈಂಯಾ ಹಾಡನ್ನು ಸ್ವತಃ ಹಾಡಿದ್ದಾರೆ.
ಯೇ ಹೈ ಇಂಡಿಯಾ ಚಿತ್ರವನ್ನು ಲೋಮ್ ಹರ್ಷ್ ನಿರ್ದೇಶಿಸಿದ್ದು ಗ್ಯಾವೀ ಚಾಹಾಲ್ ಮತ್ತು ದಿಯಾನಾ ಉಪ್ಪಳ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
“ಪಾಶ್ಚಾತ್ಯರ ದೃಷ್ಟಿಯಲ್ಲಿ ಭಾರತ ಇಂದಿಗೂ ಹಾವು, ವಿಷಜಂತುಗಳಿಂದ ತುಂಬಿರುವ, ಹಾವಾಡಿಗರ ದೇಶ ಎಂಬ ಭಾವನೆ ಇದೆ. ಆದರೆ ಭಾರತ ಸಾಕಷ್ಟು ಬದಲಾಗಿದೆ, ಎಲ್ಲ ರಂಗಗಳಲ್ಲಿ ಮುನ್ನಡೆ ಸಾಧಿಸಿದೆ; ಅಂತೆಯೇ ಭಾರತ ಇಡಿಯ ವಿಶ್ವಕ್ಕೆ ಗುರು ಸ್ಥಾನದಲ್ಲಿ ನಿಂತು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಈ ಚಿತ್ರಣವನ್ನು ಯೇ ಹೈ ಇಂಡಿಯಾ ಚಿತ್ರದಲ್ಲಿ ಸಾದರಪಡಿಸಲಾಗಿದ. ಆದುದರಿಂದ ಸಾಕಷ್ಟು ಮುಂದಾಲೋಚನೆ ಮಾಡಿಕೊಂಡೇ ನಾನು ಈ ಚಿತ್ರವನ್ನು ಪ್ರೋತ್ಸಾಹಿಸಲು ನಿರ್ಧರಿಸಿದ್ದೇನೆ. ಇಂತಹ ಚಿತ್ರಗಳನ್ನು ಪ್ರತಿಯೋರ್ವ ಭಾರತೀಯ ಪ್ರಜೆ ಬೆಂಬಲಿಸಬೇಕೆಂದು ನಾನು ನಿರೀಕ್ಷಿಸುತ್ತೇನೆ’ ಎಂದು ಬಾಬಾ ರಾಮ್ದೇವ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್