ಮುಖದಲ್ಲಿ  ಅರಳುವ ನಗು

Team Udayavani, Apr 23, 2017, 3:45 AM IST

sd.jpg

ಆಥೊìಡಾಂಟಿಕ್ಸ್‌ ಎಂಬ ಇಂಗ್ಲಿಷ್‌ ಪದದ ಮೂಲ ಗ್ರೀಕ್‌ ಭಾಷೆಯ “ಆಥೊì’, ಇದರ ಅರ್ಥ ನೇರ ಮತ್ತು ಹಾಗೂ ಹಲ್ಲು ಎಂಬರ್ಥದ “ಒಡೊಂಟ್‌’. ಇವತ್ತು ಆಥೊìಡಾಂಟಿಕ್ಸ್‌ ಅನ್ನುವುದರ ಅರ್ಥವ್ಯಾಪ್ತಿ ಹಲ್ಲಿನ ಸ್ಥಾನಾಂತರ ಎಂಬುದಷ್ಟೇ ಅಲ್ಲದೆ ಅದರಿಂದಾಚೆಗೆ ಮತ್ತಷ್ಟು ವಿಸ್ತಾರಗೊಂಡಿದೆ. 
“ಸುದಂತ ಯೋಜನೆ’ ಎಂದು ಕನ್ನಡದಲ್ಲಿ ಕರೆಯಬಹುದಾದ ಆಥೊìಡಾಂಟಿಕ್‌ ಚಿಕಿತ್ಸೆಯ ಮುಖ್ಯ ಗಮನ ಹಲ್ಲುಗಳ ಅಸಮರ್ಪಕ ಸ್ಥಾನವನ್ನು ಮತ್ತು ಜಗಿಯುವ ಸ್ಥಾನ ಸಂಬಂಧಗಳನ್ನು ಉತ್ತಮಪಡಿಸುವುದು ಮತ್ತು ಸರಿಪಡಿಸುವುದಾಗಿರಬಹುದು. ಆದರೆ, ಮುಖದ ಆಕಾರ ಮತ್ತು ರೂಪದ ಮೇಲೆಯೂ ಅದು ಕಾಲಾಂತರದಲ್ಲಿ ಪ್ರಭಾವ ಬೀರಬಲ್ಲುದು. ವ್ಯಕ್ತಿಯೊಬ್ಬನ ಹಲ್ಲುಗಳು ಮತ್ತು ಮುಖದ ಸಾಮಾನ್ಯ ಸೌಂದರ್ಯವನ್ನು ಸುರೂಪಕ್ಕೆ ತರುವ ಶುದ್ಧ ಸೌಂದರ್ಯವರ್ಧಕ ಉದ್ದೇಶದಿಂದಲೂ ಆಥೊìಡಾಂಟಿಕ್‌ ಚಿಕಿತ್ಸೆಯನ್ನು ಕೈಗೊಳ್ಳಬಹುದು. ಇದಲ್ಲದೆ, ಹಲ್ಲುಗಳು ಕಚ್ಚಿಕೊಳ್ಳುವುದನ್ನು (ಮುಚ್ಚಿಕೊಳ್ಳುವಿಕೆ) ಕ್ರಿಯಾತ್ಮಕವಾಗಿ ಉತ್ತಮಪಡಿಸುವ ಉದ್ದೇಶದಿಂದಲೂ ಈ ಚಿಕಿತ್ಸೆ ಅಗತ್ಯವಾಗಬಹುದು. ಬಹುತೇಕ ಸಂದರ್ಭಗಳಲ್ಲಿ ಈ ಎರಡೂ ಗುರಿಗಳನ್ನು ಏಕಕಾಲದಲ್ಲಿ ಸಾಧಿಸಬಹುದಾಗಿದೆ. 

ಮುಖದಲ್ಲಿ ಅರಳುವ ನಗುವಿನ ವಿನ್ಯಾಸದಲ್ಲಿ ಅತ್ಯಂತ ಮುಖ್ಯವಾದ ಮತ್ತು ಮೂಲಭೂತವಾಗಿ ನಿರ್ಣಾಯಕವಾಗುವ ವಿಚಾರ ಹಲ್ಲುಗಳ ರಚನೆ ಮತ್ತು ಸ್ಥಾನ. ಅಂದರೆ, ಮುಖದ ಚೌಕಟ್ಟು ಮತ್ತು ದವಡೆಯಲ್ಲಿ ಹಲ್ಲುಗಳು ವಸ್ತುಶಃ ಹೇಗೆ ಸ್ಥಾಪಿತವಾಗಿವೆ ಹಾಗೂ ಮೇಲ್ದವಡೆ ಮತ್ತು ಕೆಳದವಡೆಗಳು ಪರಸ್ಪರ ಹೇಗೆ ಹೊಂದಿಕೊಳ್ಳುತ್ತಿವೆ. 

ಹಲ್ಲುಗಳ ಚಲನೆ: ಹೇಗೆ ಮತ್ತು ಯಾಕೆ?
ತಮ್ಮ ನಡುವೆ ಸ್ಥಿತಿಸ್ಥಾಪಕ ಗುಣ ಹೊಂದಿರುವ ಸೂಕ್ಷ್ಮ ತಂತುಗಳನ್ನು ಪೋಣಿಸಿಕೊಂಡಿದ್ದು, ಹಲ್ಲುಗಳ ಮೇಲೆ ಅಳವಡಿಸಲ್ಪಡುವ ಕಿರು ಬ್ರಾಕೆಟ್‌ಗಳೇ ಸಾಮಾನ್ಯವಾಗಿ “ಬ್ರೇಸಸ್‌’ ಎಂದು ಕರೆಯಲ್ಪಡುವ ಆಥೊìಡಾಂಟಿಕ್‌ ಪರಿಕರಗಳು. ಈ ಸೂಕ್ಷ್ಮ ತಂತುಗಳು ಸ್ಥಿತಿಸ್ಥಾಪಕ ಗುಣ ಹೊಂದಿರುವುದರಿಂದ ಅಸಮರ್ಪಕ ಸ್ಥಾನದಲ್ಲಿರುವ ಹಲ್ಲುಗಳ ಮೇಲೆ ಇವು ಮೃದುವಾದ ಒತ್ತಡವನ್ನು ಹೇರಿ ಹಲ್ಲುಗಳನ್ನು ಸೂಕ್ತ ಸ್ಥಾನಕ್ಕೆ ಸ್ಥಾನಾಂತರ ಹೊಂದುವಂತೆ ಮಾಡುತ್ತವೆ. ಹಲ್ಲುಗಳನ್ನು ಎಲುಬಿನ ಜತೆಗೆ ಸಂಧಿಸುವ ಪರಿದಂತದ ಮೂಳೆನಾರಿನ‌ ಗುಣ ಹಲ್ಲುಗಳು ಸಮಸ್ಥಿತಿಗೆ ಚಲಿಸಲು ಕಾರಣವಾಗುತ್ತದೆ. ಈ ಜೀವಕೋಶಗಳು ಸಜೀವವಾಗಿರುವ ಕಾರಣ ಸತತವಾಗಿ ಪರಿವರ್ತನೆ ಹೊಂದುತ್ತಿರುತ್ತವೆ ಮತ್ತು ಪುನಾರೂಪಿತಗೊಳ್ಳುತ್ತಿರುತ್ತವೆ. 

– ಡಾ| ರಿತೇಶ್‌ ಸಿಂಗ್ಲಾ ,   
ರೀಡರ್‌, ಆಥೊìಡಾಂಟಿಕ್ಸ್‌  ವಿಭಾಗ,
ಮಣಿಪಾಲ ದಂತ ವೈದ್ಯಕೀಯ ವಿಜ್ಞಾನ ಕಾಲೇಜು,
ಮಣಿಪಾಲ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.