Updated at Sun,25th Jun, 2017 11:38AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ತಿರುಪತಿ ಬಳಿ ಭೀಕರ ದುರಂತ: ವಿದ್ಯುತ್ ತಂತಿ ಹರಿದು ಬಿದ್ದು 20 ಬಲಿ!

ತಿರುಪತಿ : ಇಲ್ಲಿಂದ 25 ಕೀ.ಮೀ ದೂರದಲ್ಲಿರುವ ಯರ್ಪೇಡು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ದುರಂತವೊಂದು ಸಂಭವಿಸಿದ್ದು, ನಿಯಂತ್ರಣ ಕಳೆದುಕೊಂಡ ಲಾರಿಯೊಂದು ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾಗಿ, ಮಾರುಕಟ್ಟೆಯ ಮೇಲೆ ಹರಿದ ಪರಿಣಾಮ 20ಕ್ಕೂ ಹೆಚ್ಚು ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. 

ಕಾಳಹಸ್ತಿ, ತಿರುಮಲ ಜಂಕ್ಷನ್‌ನಲ್ಲಿರುವ ಯರ್ಪೇಡು ಎಂಬಲ್ಲಿ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದ್ದು, ಶರವೇಗದಲ್ಲಿ ಬಂದ ಲಾರಿ ವಿದ್ಯುತ್‌ ಕಂಬಕ್ಕೆ ಗುದ್ದಿ ಜನರ ಮೇಲೆ ಹರಿದಿದೆ. ಈ ವೇಳೆ ವಿದ್ಯುತ್‌ಕಂಬ ತುಂಡಾಗಿ ಬಿದ್ದು ತಂತಿಗಳು ಜನರ ಮೈಮೇಲೆ ಬಿದ್ದು ವಿದ್ಯುದಾಘಾತದಿಂದ ಕೆಲವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಅವಘಡ ಆದೋಡನೆಯೇ ಕೆಲವರು ನೆರವಿಗೆ ಧಾವಿಸಿದ್ದು ಅವರಿಗೂ ವಿದ್ಯುತ್‌ ತಗುಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಸ್ಥಳದಲ್ಲಿ ಸಂಚಾರ ವ್ಯತ್ಯಯವಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಿದ್ದಾರೆ. 

ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.


More News of your Interest

Back to Top